ಕಾರ್ಕಳ: ಮನೆಯಂಗಳದ ತೋಡಿಗೆ ಬಿದ್ದು ಮೃತ್ಯು
ಕಾರ್ಕಳ, ಜೂ.19: ಮನೆಯಂಗಳದಲ್ಲಿರುವ ತೋಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾಂತಾವರ ಗ್ರಾಮದ ಪಡುಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಪಡುಬೆಟ್ಟು ನಿವಾಸಿ ಶೇಖರ ಶೆಟ್ಟಿ(63) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಲಗಿದ್ದ ಇವರು ಜೂ.18ರಂದು ಬೆಳಗ್ಗೆ ಎದ್ದು, ಮನೆಯ ಹೊರಗಿರುವ ಶೌಚಾಲಯಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಅಕಸ್ಮಿಕವಾಗಿ ಮನೆಯ ಅಂಗಳದ ಬದಿಯಲ್ಲಿರುವ ತೋಡಿಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೂ.19ರಂದು ನಸುಕಿನ ವೇಳೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story