ಇಮ್ರಾನ್ ಜಾಮೀನು ಅವಧಿ ಜುಲೈ 4ರವರೆಗೆ ವಿಸ್ತರಣೆ

ಇಸ್ಲಮಾಬಾದ್: ಕಾದಿರ್ ಟ್ರಸ್ಟ್ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್‌ಖಾನ್ ಹಾಗೂ ಅವರ ಪತ್ನಿ ಬುಷ್ರಾ ಬೀಬಿಗೆ ನೀಡಿರುವ ಜಾಮೀನು ಅವಧಿಯನ್ನು ಜುಲೈ 4ರವರೆಗೆ ವಿಸ್ತರಿಸಲಾಗಿದೆ.
ಜಾಮೀನು ಅವಧಿಯನ್ನು ವಿಸ್ತರಿಸಿ ‘ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೊ’(ಎನ್‌ಎಬಿ) ಆದೇಶ ಜಾರಿಗೊಳಿಸಿದೆ. ಇದೇ ಸಂದರ್ಭ, ಇಮ್ರಾನ್ ವಿರುದ್ಧ ಇತರ ಮೂರು ನ್ಯಾಯಾಲಯಗಳಲ್ಲಿ ದಾಖಲಾಗಿರುವ 15 ಪ್ರಕರಣಗಳಲ್ಲಿಯೂ ಜಾಮೀನು ದೊರಕಿದೆ ಎಂದು ಅವರ ಕಾನೂನು ಸಲಹೆಗಾರರ ತಂಡದ ಸದಸ್ಯ ಗೋಹರ್ ಖಾನ್ ಹೇಳಿದ್ದಾರೆ.
Next Story





