ಸರಕಾರಿ ವಿವಿಗಳ ಕುಲಾಧಿಪತಿಯಾಗಿ ಪಂಜಾಬ್ ಮುಖ್ಯಮಂತ್ರಿ ನೇಮಕ
ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ
ಚಂಡಿಗಡ: ಸರಕಾರಿ ವಿವಿಗಳ ಕುಲಾಧಿಪತಿಯನ್ನಾಗಿ ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ನೇಮಕಗೊಳಿಸುವ ಮಸೂದೆಯನ್ನು ಪಂಜಾಬ್ ವಿಧಾನಸಭೆಯು ಮಂಗಳವಾರ ಅಂಗೀಕರಿಸಿದೆ.
ಸಂಕ್ಷಿಪ್ತ ಚರ್ಚೆಯ ಬಳಿಕ ಪಂಜಾಬ್ ವಿಶ್ವವಿದ್ಯಾನಿಲಯಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2023ನ್ನು ಅಂಗೀಕರಿಸಲಾಯಿತು. ಆಡಳಿತಾರೂಢ ಆಪ್ ಸದಸ್ಯರ ಜೊತೆಗೆ ಶಿರೋಮಣಿ ಅಕಾಲಿ ದಳ ಮತ್ತು ಬಿಎಸ್ಪಿಯ ಏಕೈಕ ಸದಸ್ಯ ಮಸೂದೆಯನ್ನು ಬೆಂಬಲಿಸಿದರು.
ಕುಲಪತಿ ಹುದ್ದೆಗೆ ರಾಜ್ಯ ಸರಕಾರವು ಮಾಡಿದ್ದ ಕೆಲವು ಆಯ್ಕೆಗಳು ಸೇರಿದಂತೆ ಹಲವಾರು ವಿಷಯಗಳಲ್ಲಿ ಈ ಹಿಂದೆ ಭಗವಂತ ಮಾನ್ ನೇತೃತ್ವದ ಆಪ್ ಸರಕಾರ ಮತ್ತು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನಡುವಿನ ಭಿನ್ನಾಭಿಪ್ರಾಯಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಎರಡು ದಿನಗಳ ಪಂಜಾಬ್ ವಿಧಾನಸಭಾ ಅಧಿವೇಶನವು ಮಂಗಳವಾರದಿಂದ ಆರಂಭಗೊಂಡಿದೆ.
Next Story





