Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಗಾಂಧಿ ವಿರೋಧಿಗಳಿಗೆ ಗಾಂಧಿ ಶಾಂತಿ...

ಗಾಂಧಿ ವಿರೋಧಿಗಳಿಗೆ ಗಾಂಧಿ ಶಾಂತಿ ಪ್ರಶಸ್ತಿ

21 Jun 2023 12:05 AM IST
share
ಗಾಂಧಿ ವಿರೋಧಿಗಳಿಗೆ ಗಾಂಧಿ ಶಾಂತಿ ಪ್ರಶಸ್ತಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಯನ್ನು ಈ ಬಾರಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಗೀತಾ ಪ್ರೆಸ್‌ಗೆ ಸರಕಾರ ನೀಡಿದೆ. ಕೇಂದ್ರ ಸರಕಾರ 1995ರಿಂದ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ. ಶಾಂತಿ, ಅಹಿಂಸೆಯಂತಹ ವೌಲ್ಯಗಳನ್ನು ಎತ್ತಿ ಹಿಡಿದ, ವ್ಯಕ್ತಿ, ಸಂಸ್ಥೆ , ಸಂಘಟನೆಗಳಿಗೆ ಜಾಗತಿಕ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಆರ್ಚ್ ಬಿಷಪ್ ಡೆಸ್ಮಂಡ್ ಟುಟು, ಬಾಂಗ್ಲಾದೇಶದ ಪ್ರಥಮ ಪ್ರಧಾನಿ ಶೇಖ್ ಮುಜೀಬುರ್ರಹ್ಮಾನ್ ಸಹಿತ ಹಲವು ಅಂತರ್‌ರಾಷ್ಟ್ರೀಯ ನಾಯಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸಾ ವಾದದ ಮೂಲಕ ಚಳವಳಿಗಳನ್ನು ಸಂಘಟಿಸಿದ, ಸಾಮಾಜಿಕ ಸುಧಾರಣೆಗಳನ್ನು ತಂದ ನಾಯಕರನ್ನು ಈ ಪ್ರಶಸ್ತಿಯ ಮೂಲಕ ಗುರುತಿಸಲಾಗುತ್ತದೆ. ಹಲವು ದೇಶಗಳ ಮಾಜಿ ಅಧ್ಯಕ್ಷರು, ಮಾಜಿ ಪ್ರಧಾನಿಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದೇ ಅದರ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ಭಾರತದ ಇಸ್ರೋ , ರಾಮಕೃಷ್ಣ ಮಿಶನ್‌ನಂತಹ ಸಂಸ್ಥೆಗಳಿಗೂ ಈ ಪ್ರಶಸ್ತಿ ಸಂದಿದೆ. ಆದರೆ 2021ರ ಗಾಂಧಿ ಶಾಂತಿ ಪ್ರಶಸ್ತಿ ಘೋಷಣೆ ಕೆಲವರ ಟೀಕೆ ವಿಮರ್ಶೆಗಳಿಗೆ ಕಾರಣವಾಗಿದೆ.

1923ರಲ್ಲಿ ಸ್ಥಾಪನೆಗೊಂಡ ಗೀತಾ ಪ್ರೆಸ್ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕೃತಿಗಳ ಪ್ರಕಾಶನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಭಗವದ್ಗೀತೆಯೂ ಸೇರಿದಂತೆ ಹಿಂದೂ ಧರ್ಮಕ್ಕೆ ಸಂಬಂಧಪಟ್ಟ ಅಸಂಖ್ಯ ಪುಸ್ತಕಗಳನ್ನು ಇದು ಪ್ರಕಟಿಸಿದೆ. ಅದರ ಅಧಿಕೃತ ವೆಬ್‌ಸೈಟ್ ಹೇಳುವಂತೆ, 14 ಭಾಷೆಗಳಲ್ಲಿ 41 ಕೋಟಿಗೂ ಅಧಿಕ ಪುಸ್ತಕಗಳ ಪ್ರತಿಗಳನ್ನು ಪ್ರಕಟಿಸಿದೆ. ಶ್ರೀಮದ್ ಭಗವದ್ಗೀತೆಯ 16 ಕೋಟಿ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿದ್ದರೆ, ತುಳಸಿದಾಸರ ಕೃತಿಯ 11 ಕೋಟಿ ಪ್ರತಿಗಳನ್ನು ಮುದ್ರಿಸಿದೆ. ಪುರಾಣ ಮತ್ತು ಉಪನಿಷತ್‌ಗಳ 2 ಕೋಟಿ ಪ್ರತಿಗಳನ್ನು ಮುದ್ರಿಸಿ, ಮಾರಾಟ ಮಾಡಿದೆ. ಧಾರ್ಮಿಕ ಕ್ಷೇತ್ರದಲ್ಲಿ ಗೀತಾ ಪ್ರೆಸ್ ದೊಡ್ಡ ಕ್ರಾಂತಿಯನ್ನೇ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಗವದ್ಗೀತೆಯ ಬಗ್ಗೆ ಮಹಾತ್ಮಾಗಾಂಧೀಜಿಗೂ ಅಗಾಧ ಗೌರವವಿತ್ತು. ಭಗವದ್ಗೀತೆ ಯುದ್ಧವನ್ನು ಪ್ರೋತ್ಸಾಹಿಸುತ್ತದೆ ಎನ್ನುವ ಆರೋಪಗಳ ನಡುವೆಯೂ, ಗೀತೆಯು ಪ್ರತಿಪಾದಿಸುವ ಹಲವು ವೌಲ್ಯಗಳು ಗಾಂಧೀಜಿಗೆ ಇಷ್ಟವಾಗಿತ್ತು. ಗೀತೆಯ ಕೆಲವು ಸಾರವನ್ನು ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಕೇವಲ ಭಗವದ್ಗೀತೆ ಮಾತ್ರವಲ್ಲ, ಬೈಬಲ್, ಕುರ್‌ಆನ್ ಬಗ್ಗೆಯೂ ಅವರು ಅಪಾರ ಗೌರವವನ್ನು ಹೊಂದಿದ್ದರು.

ಭಗವದ್ಗೀತೆ ಮತ್ತು ಗಾಂಧೀಜಿಗೆ ಇರುವ ನಂಟನ್ನು ಗುರುತಿಸಿ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸದ್ಯಕ್ಕೆ ನಾವು ನಂಬಬೇಕಾಗಿದೆ. ಉಳಿದಂತೆ ಗಾಂಧೀಜಿಯ ಮೌಲ್ಯಕ್ಕೂ, ಗೀತಾ ಪ್ರೆಸ್ ಪ್ರತಿಪಾದಿಸುವ ಮೌಲ್ಯಕ್ಕೂ ಯಾವ ಸಾಮ್ಯತೆಯೂ ಇಲ್ಲ. ಗಾಂಧೀಜಿ ತನ್ನನ್ನು ತಾನು ಹಿಂದೂ ಎಂದೇ ಗುರುತಿಸಿಕೊಂಡಿದ್ದರು. ಶ್ರೀರಾಮನ ಪರಮ ಭಕ್ತರಾಗಿದ್ದರು. ಆದರೂ ಅವರು ತನ್ನ ದೇವರನ್ನು, ನಂಬಿಕೆಯನ್ನು ದೇವಸ್ಥಾನಗಳಿಗೆ ಸೀಮಿತಗೊಳಿಸಿದವರಲ್ಲ. ಬಡವರ, ದುರ್ಬಲರ ಸೇವೆಯೇ ಜನಾರ್ದನ ಸೇವೆ ಎಂದು ಅವರು ಭಾವಿಸಿದ್ದರು. ಹಿಂದೂ ಧರ್ಮಕ್ಕೆ ಗಾಂಧೀಜಿ ಹೊಸ ವ್ಯಾಖ್ಯಾನವನ್ನು ನೀಡಿದ್ದರು. ಈ ಕಾರಣಕ್ಕಾಗಿಯೇ ಹಿಂದುತ್ವವಾದಿಗಳು ಗಾಂಧೀಜಿ ಪ್ರತಿಪಾದಿಸುವ ಹಿಂದೂ ಧರ್ಮವನ್ನು ದ್ವೇಷಿಸುತ್ತಾ ಬಂದಿದ್ದಾರೆ. ಗಾಂಧೀಜಿಯನ್ನು ಹಿಂದುತ್ವವಾದಿಗಳು ಅಂತಿಮವಾಗಿ ಕೊಂದು ಹಾಕಿರುವುದು ಕೂಡ ಅವರ ಹಿಂದೂ ಧರ್ಮದ ಜೊತೆಗೆ ಇದ್ದ ಭಿನ್ನಮತದ ಕಾರಣಕ್ಕಾಗಿ. ಅವರ ಹಿಂದೂ ಧರ್ಮ ‘ಈಶ್ವರ-ಅಲ್ಲಾ ತೇರೇ ನಾಮ್’ ಎಂದು ಸರ್ವರನ್ನು ಬೆಸೆಯುವ ಕನಸನ್ನು ಕಂಡಿದೆ. ಗೀತಾ ಪ್ರೆಸ್ ವೈದಿಕ ಚಿಂತನೆಗಳನ್ನು ಹರಡುವುದಕ್ಕಾಗಿಯೇ ಸೀಮಿತವಾಗಿರುವ ಒಂದು ಪ್ರಕಾಶನ ಸಂಸ್ಥೆ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದುತ್ವವಾದಿ ಉಗ್ರರೊಂದಿಗೆ ಪರೋಕ್ಷ ಸಂಬಂಧವನ್ನು ಹೊಂದಿರುವ ಆರೋಪ ಗೀತಾ ಪ್ರೆಸ್‌ನ ಮೇಲಿದೆ. ಗಾಂಧಿ ಹತ್ಯೆಯ ಆರೋಪಿಗಳ ಜೊತೆಗೆ ಗೀತಾ ಪ್ರೆಸ್ ಮಾಲಕರು ಸಂಬಂಧವನ್ನು ಹೊಂದಿದ್ದರು ಎನ್ನುವ ಆರೋಪಗಳನ್ನು ಹಲವರು ಮಾಡಿದ್ದಾರೆ. ಈ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸುವ ಲೇಖನಗಳೂ ಪ್ರಕಟಗೊಂಡಿವೆ.

ಅಕ್ಷಯ್ ಮುಕುಲ್ ಬರೆದಿರುವ ‘ಗೀತಾ ಪ್ರೆಸ್ ಆ್ಯಂಡ್ ದ ಮೇಕಿಂಗ್ ಆಫ್ ಹಿಂದೂ ಇಂಡಿಯಾ’ ಕೃತಿ ಗೀತಾ ಪ್ರೆಸ್ ಹೇಗೆ ಗಾಂಧಿಯನ್ನು ಶತಾಯಗತಾಯ ವಿರೋಧಿಸುತ್ತಿತ್ತು ಎನ್ನುವುದನ್ನು ವಿವರವಾಗಿ ದಾಖಲಿಸಿದೆ. ಗೀತಾ ಪ್ರೆಸ್‌ನ ಸ್ಥಾಪಕರಲ್ಲೊಬ್ಬರಾಗಿರುವ ಪೊದ್ದಾರ್ ಅವರು ಗಾಂಧೀಜಿಯನ್ನು ‘‘ಈತನೊಬ್ಬ ಭಾರತೀಯ ವೇಷದಲ್ಲಿರುವ ವಿದೇಶಿ ಸನ್ಯಾಸಿ’’ ಎಂದು ಟೀಕಿಸಿದ್ದರು. ಗಾಂಧೀಜಿಯ ಚಳವಳಿಯನ್ನು ಗೀತಾ ಪ್ರೆಸ್ ಸದಾ ಟೀಕಿಸುತ್ತಾ ಬಂದಿತ್ತು ಮಾತ್ರವಲ್ಲ, ಸನಾತನವಾದಿ ಹಿಂದೂ ಮಹಾ ಸಭಾದ ಮುಖಂಡರಿಗೆ ಜೊತೆಯಾಗಿ ನಿಂತು ಕೆಲಸ ಮಾಡಿತ್ತು. ಗಾಂಧೀಜಿಯ ಹಲವು ಸಮಕಾಲೀನರು ಗೀತಾ ಪ್ರೆಸ್‌ನ ರಾಜಕೀಯ ಚಿಂತನೆಗಳನ್ನು ಕಟುವಾಗಿ ವಿರೋಧಿಸಿದ್ದರು. ಯಾವ ಸಂಸ್ಥೆ ಗಾಂಧೀಜಿಯ ವಿಚಾರಧಾರೆಯೊಂದಿಗೆ ಅಸಮಾಧಾನವನ್ನು ಹೊಂದಿತ್ತೋ,ಯಾವ ಸಂಸ್ಥೆ ಗಾಂಧೀಜಿಯನ್ನು ತೀವ್ರವಾಗಿ ಟೀಕಿಸಿತ್ತೋ, ಯಾವ ಸಂಸ್ಥೆಯೊಳಗಿನ ಜನರು ಗಾಂಧೀಜಿಯ ಹತ್ಯೆಯಲ್ಲಿ ಶಾಮೀಲಾದ ಆರೋಪಗಳನ್ನು ಹೊತ್ತುಕೊಂಡಿದ್ದರೋ ಆ ಸಂಸ್ಥೆಗೆ ಗಾಂಧೀಜಿಯ ಶಾಂತಿ ಪ್ರಶಸ್ತಿಯನ್ನು ನೀಡುವುದು ಶಾಂತಿಯ ಅಣಕವಲ್ಲದೆ ಇನ್ನೇನು?

ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿರುವುದನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗೆ ಸಮರ್ಥಿಸಿಕೊಳ್ಳುತ್ತಿರುವ ನಾಯಕರು, ಗಾಂಧೀಜಿಯ ಬಗ್ಗೆ ಗೀತಾ ಪ್ರೆಸ್ ತಳೆದಿರುವ ನಿಲುವಿನ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು. ದಲಿತರ ಜೊತೆಗೆ ಸಹಭೋಜನದ ಬಗ್ಗೆಯೂ ಗೀತಾಪ್ರೆಸ್‌ನ ಸಂಸ್ಥಾಪಕರಲ್ಲೊಬ್ಬರಾಗಿರುವ ಪೊದ್ದಾರ್ ಅವರಿಗೆ ಅಸಮಾಧಾನವಿತ್ತು. ಗಾಂಧೀಜಿಯ ಆಂದೋಲನದ ಬಗ್ಗೆ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ‘‘ದಲಿತರ ಜೊತೆಗಿನ ಸಹಭೋಜನವನ್ನು ಸಮಾನತೆಯೆಂದು ನಾನು ಭಾವಿಸುವುದಿಲ್ಲ. ಅವರು ಶುದ್ಧ ಸ್ನಾನ ಮಾಡುವವರೆಗೆ, ತಾಜಾ ಬಟ್ಟೆ ಧರಿಸುವವರೆಗೆ, ಮಾಂಸ ಸೇವನೆಯನ್ನು ತ್ಯಜಿಸುವವರೆಗೆ ನಾನು ದಲಿತರನ್ನು ಶುದ್ಧ ಎಂದು ಭಾವಿಸುವುದಿಲ್ಲ’’ ಎಂದು ಬರೆಯುತ್ತಾರೆ. ಸನಾತನ ಹಿಂದೂ ಧರ್ಮಕ್ಕೆ ಗಾಂಧೀಜಿ ಒಂದು ಸವಾಲಾಗಿದ್ದಾರೆ ಎಂದು ಅವರು ತಮ್ಮ ಸ್ನೇಹಿತರಿಗೆ ಬರೆದ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗೆ ಗಾಂಧೀಜಿಯ ತತ್ವ , ಸಿದ್ಧಾಂತದ ಜೊತೆಗೆ ಯಾವ ಸಂಬಂಧವೂ ಇಲ್ಲದ, ಜಾತೀಯತೆಯನ್ನು ಎತ್ತಿ ಹಿಡಿಯುವ ಗೀತಾ ಪ್ರೆಸ್‌ಗೆ ಗಾಂಧೀ ಶಾಂತಿ ಪ್ರಶಸ್ತಿ ನೀಡುವ ಮೂಲಕ, ಗಾಂಧಿಯನ್ನು ನೇರವಾಗಿ ಅವಮಾನಿಸಲಾಗಿದೆ. ಈ ಪ್ರಶಸ್ತಿಯ ಗುಣಮಟ್ಟವನ್ನು ಕೆಡಿಸುವುದೇ ಸರಕಾರದ ಗುರಿಯಾಗಿರುವಂತಿದೆ. ಈ ಪ್ರಶಸ್ತಿ ಘೋಷಣೆಯಿಂದಾಗಿ ಈಗಾಗಲೇ ಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದ ನೆಲ್ಸನ್ ಮಂಡೇಲಾರಂತಹ ಮಹನೀಯರನ್ನು ಅವಮಾನಿಸಿದಂತಾಗಿದೆ. ಬದುಕಿನುದ್ದಕ್ಕೂ ಜನಾಂಗೀಯವಾದದ ವಿರುದ್ಧ ಹೋರಾಡಿದ ಮಂಡೇಲಾ ಮತ್ತು ಜಾತೀಯತೆಯನ್ನು ಎತ್ತಿಹಿಡಿದ ಗೀತಾ ಪ್ರೆಸ್‌ನ್ನು ಒಂದೇ ತಕ್ಕಡಿಯಲ್ಲಿಟ್ಟಂತಾಗಿದೆ. ಇದು ಗಾಂಧೀಜಿಯ ತತ್ವ,ಸಿದ್ಧಾಂತವನ್ನು ಹಂತಹಂತವಾಗಿ ತಿರುಚಿ, ಆರೆಸ್ಸೆಸ್‌ನ ಮೇಲಿರುವ ಗಾಂಧಿ ಹತ್ಯೆ ಕಳಂಕವನ್ನು ತೊಳೆದು ಹಾಕುವ ಸರಕಾರದ ವ್ಯರ್ಥ ಪ್ರಯತ್ನದ ಭಾಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆ ಆದಲ್ಲಿ ಮುಂದಿನ ದಿನಗಳಲ್ಲಿ ಗಾಂಧಿ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಲು ಜಾಗತಿಕ ಗಣ್ಯರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಬಹುದು. ಅನರ್ಹರಿಗೆ ಈ ಪ್ರಶಸ್ತಿಯನ್ನು ಘೋಷಿಸಿ ಗಾಂಧೀಜಿಯ ತತ್ವ, ಸಿದ್ಧಾಂತಕ್ಕೆ ಕಳಂಕ ತರುವ ಬದಲು ಈ ಪ್ರಶಸ್ತಿಯನ್ನು ಸರಕಾರ ಹಿಂದೆಗೆಯುವುದರಿಂದ ಗಾಂಧಿಗೂ, ಭಾರತಕ್ಕೂ ಒಳಿತಿದೆ.

share
Next Story
X