ಸಂಸದರ ನಿಧಿಯಿಂದ ಮಗನ ಮದುವೆ ಮಾಡಿದ್ದೇನೆ, ಮನೆ ನಿರ್ಮಿಸಿದ್ದೇನೆ: ಬಿಜೆಪಿ ಸಂಸದನ ಹೇಳಿಕೆ ವೈರಲ್

ಹೈದರಾಬಾದ್: ತೆಲಂಗಾಣದ ಬಿಜೆಪಿ ಸಂಸದ ಸೋಯಮ್ ಬಾಪು ರಾವ್ ಅವರು ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿೃುವ ವಿಡಿಯೋವೊಂದು ವೈರಲ್ ಆಗಿದೆ.
ಸೋಯಮ್ ಬಾಪು ರಾವ್ ಅವರು ಎಂಪಿ ಲ್ಯಾಡ್ಸ್ ನಿಧಿಯನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಸೋಯಮ್ ಬಾಪು ರಾವ್ ಅವರು ಬಿಜೆಪಿ ಪ್ರತಿನಿಧಿಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (LADS) ಹಣವನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬದಲಾಗಿ ತಮ್ಮ ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
MPLADS ನಿಧಿಯನ್ನು ಸಂಸದರು ತಮ್ಮ ಕ್ಷೇತ್ರಗಳ ನಿರ್ದಿಷ್ಟ ಅಗತ್ಯಗಳ ಆಧಾರದ ಮೇಲೆ ಸ್ಥಳೀಯ ಅಭಿವೃದ್ಧಿಗಳಿಗೆ ಹಣವನ್ನು ವಿನಿಯೋಗಿಸಬೇಕಿದೆ. ಆದರೆ, ರಾವ್ ಅವರು ಆ ನಿಧಿಯ ಒಂದು ಭಾಗವನ್ನು ಮುನ್ಸಿಪಲ್ ಪೊಲೀಸ್ ತರಬೇತಿ ಸಮಿತಿಗಳು (ಎಂಪಿಟಿಸಿಗಳು) ಮತ್ತು ಪ್ರದೇಶದ ಕೌನ್ಸಿಲರ್‌ಗಳಿಗೆ ಹಂಚಿರುವುದಾಗಿ ಹೇಳಿದ್ದಾರೆ.
ಎರಡನೇ ಬಾರಿಗೆ 2.5 ಕೋಟಿ ರೂ. ನಿಧಿ ಬಂದಿದೆ. ಅದರಲ್ಲಿ ಒಂದಷ್ಟು ಭಾಗವನ್ನು ಈ ಭಾಗದ ಎಂಪಿಟಿಸಿ ಹಾಗೂ ಕೌನ್ಸಿಲರ್‌ಗಳಿಗೆ ನೀಡಿದ್ದೇವೆ. ನನಗೆ ಈ ಕ್ಷೇತ್ರದಲ್ಲಿ ಮನೆ ಇಲ್ಲ. ಹಾಗಾಗಿ ಸ್ವಲ್ಪ ಹಣವನ್ನು ಮನೆ ಕಟ್ಟಲು ಬಳಸಿದ್ದೇನೆ. ಬೇರೆ ಯಾವ ನಾಯಕರೂ ಅದನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ ನಾನು ಅದನ್ನು ಒಪ್ಪಿಕೊಳ್ಳುತ್ತಿದ್ದೇನೆ. ಸಂಸದರ ನಿಧಿಯಿಂದ ಬಂದ ಹಣವನ್ನು ಮಗನ ಮದುವೆಗೆ ಕೂಡಾ ಖರ್ಚು ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.
अगर मेरे नाम पर घर नहीं होगा तो मेरी कोई औक़ात नहीं होगी। अगर मेरे बेटे की शादी धूम-धाम से न होती तो मेरे रुतबे में कमीं लगती। इसलिए मैंने जनता के लिए निर्धारित हुए फंड को अपने नाम का घर ख़रीदने के लिए और बेटे की शादी करने के लिए इस्तेमाल कर लिया। जो भाजपाई मुझ से इस बात को लेकर… pic.twitter.com/itXJBghkTr
— Priyanka Kakkar (@PKakkar_) June 20, 2023







