ವಿಶ್ವಕಪ್ ಅರ್ಹತಾ ಟೂರ್ನಿ; ಐರ್‌ಲ್ಯಾಂಡ್‌ಗೆ ಸೋಲುಣಿಸಿದ ಒಮಾನ್ ಐಸಿಸಿ ಕ್ರಿಕೆಟ್
ಬುಲಾವಯೊ(ಝಿಂಬಾಬ್ವೆ), ಜೂ.20: ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ಒಮಾನ್ ತಂಡ ಸೋಮವಾರ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್‌ನ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಐರ್‌ಲ್ಯಾಂಡ್‌ಗೆ 5 ವಿಕೆಟ್‌ಗಳ ಅಂತರದಿಂದ ಸೋಲುಣಿಸಿ ಶಾಕ್ ನೀಡಿದೆ. ಗಲ್ಫ್ ನಾಡಿನ ಒಮಾನ್ ತಂಡ ಇದೇ ಮೊದಲ ಬಾರಿ ಟೆಸ್ಟ್ ಆಡುವ ದೇಶದ ವಿರುದ್ಧ ಗೆಲುವು ಸಾಧಿಸಿದೆ.
‘ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡವು ಯುಎಇ ತಂಡವನ್ನು 175 ರನ್ ಅಂತರದಿಂದ ಮಣಿಸಿದೆ. ಜಾರ್ಜ್ ಡಾಕ್ರೆಲ್(ಔಟಾಗದೆ 91 ರನ್) ಹಾಗೂ ಹ್ಯಾರಿ ಟೆಕ್ಟರ್(52 ರನ್)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಐರ್‌ಲ್ಯಾಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 281 ರನ್ ಗಳಿಸಿತು.
ಆದರೆ, ಒಮಾನ್ ತಂಡದ ಹೋರಾಟದ ಎದುರು ಐರ್‌ಲ್ಯಾಂಡ್ ಮಂಕಾಯಿತು. ಒಮಾನ್ ಪರ ಆರಂಭಿಕ ಬ್ಯಾಟರ್ ಕಶ್ಯಪ್ ಪ್ರಜಾಪತಿ 72 ರನ್(74 ಎಸೆತ) ಗಳಿಸಿದರೆ, ನಾಯಕ ಝೀಶಾನ್ ಮಕ್ಸೂದ್ 59 ರನ್ (67 ಎಸೆತ),
ಆಕೀಬ್ ಇಲಿಯಾಸ್ 52 ರನ್(49 ಎಸೆತ) ಹಾಗೂ ಮುಹಮ್ಮದ್ ನದೀಮ್ ಔಟಾಗದೆ 46 ರನ್(53 ಎಸೆತ) ಗಳಿಸಿ ಒಮಾನ್ 48.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಲು ನೆರವಾದರು. ಐರ್‌ಲ್ಯಾಂಡ್ ಪರ ಜೋಶ್ ಲಿಟ್ಲ್(2-47) ಹಾಗೂ ಮಾರ್ಕ್ ಅಡೈರ್(2-47)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 355 ರನ್ ಗಳಿಸಿತು. ನಾಲ್ವರು ಬ್ಯಾಟರ್‌ಗಳಾದ ಕುಶಾಲ್ ಮೆಂಡಿಸ್(78 ರನ್), ಸಾದೀರ ಸಮರವಿಕ್ರಮ(73 ರನ್), ಪಾಥುಮ್ ನಿಶಾಂಕ(57 ರನ್) ಹಾಗೂ ಡಿ.ಕರುಣರತ್ನೆ(52 ರನ್) ಅರ್ಧಶತಕ ಸಿಡಿಸಿದರು. ಚರಿತ ಅಸಲಂಕಾ ಔಟಾಗದೆ 48 ರನ್ ಗಳಿಸಿದರು.
ಯುಎಇ ಮೊದಲ 30 ಓವರ್ ತನಕ ರನ್ ಚೇಸಿಂಗ್ ಮಾಡುವ ಹುಮ್ಮಸ್ಸಿನಲ್ಲಿತ್ತು. ಆದರೆ ಆ ನಂತರ ಕೇವಲ 13 ರನ್‌ಗೆ ಕೊನೆಯ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
ವನಿಂದು ಹಸರಂಗ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು(6-24)ಪಡೆದರು. ಹಸರಂಗ ಸ್ಪಿನ್ ಮೋಡಿಗೆ ತತ್ತರಿಸಿದ ಯುಎಇ 39 ಓವರ್‌ಗಳಲ್ಲಿ 180 ರನ್ ಗಳಿಸಿ ಆಲೌಟಾಯಿತು. ಅರ್ಹತಾ ಸುತ್ತಿನಲ್ಲಿ ಭಾಗವಹಿಸಿರುವ 10 ತಂಡಗಳ ಪೈಕಿ ಕೇವಲ ಎರಡು ತಂಡಗಳು ಭಾರತದಲ್ಲಿ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತದೆ.







