ಏಶ್ಯನ್ ಗೇಮ್ಸ್: ಭಾರತಕ್ಕೆ ರೋಹನ್ಬೋಪಣ್ಣ, ಅಂಕಿತಾ ರೈನಾ ಸಾರಥ್ಯ
ಹೊಸದಿಲ್ಲಿ: ಹ್ಯಾಂಗ್‌ಝೌನಲ್ಲಿ ಸೆಪ್ಟಂಬರ್ 23ರಿಂದ ಆರಂಭವಾಗಲಿರುವ ಮುಂಬರುವ ಏಶ್ಯನ್ ಗೇಮ್ಸ್‌ಗೆ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಟಿಎ)ಮಂಗಳವಾರ 12 ಸದಸ್ಯರುಗಳನ್ನು ಒಳಗೊಂಡ ಹಾಕಿ ತಂಡವನ್ನು ಪ್ರಕಟಿಸಿದೆ. ಡಬಲ್ಸ್ ಸ್ಪೆಷಲಿಸ್ಟ್ ರೋಹನ್ ಬೋಪಣ್ಣ ಇತರ ಪ್ರತಿಭಾವಂತ ಆಟಗಾರರ ಜೊತೆ ಮತ್ತೊಮ್ಮೆ ಭಾರತದ ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ಮುನ್ನಡೆಸಲಿದ್ದಾರೆ.
ಪುರುಷರ ತಂಡದಲ್ಲಿ ಸುಮಿತ್ ನಾಗಲ್, ಶಶಿಕುಮಾರ್ ಮುಕುಂದ್, ರಾಮ್‌ಕುಮಾರ್ ರಾಮನಾಥನ್, ಯೂಕಿ ಭಾಂಬ್ರಿ, ಸಾಕೇತ್ ಮೈನೇನಿ ಹಾಗೂ 43ರ ವಯಸ್ಸಿನ ಅನುಭವಿ ಆಟಗಾರ ಬೋಪಣ್ಣ ಅವರಿದ್ದಾರೆ. ಬೋಪಣ್ಣ ತಂಡದ ನೇತೃತ್ವವಹಿಸಿದ್ದಾರೆ.
ಈ ಹಿಂದಿನ ಏಶ್ಯನ್ ಗೇಮ್ಸ್‌ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಅಂಕಿತಾ ರಾಣಾ ಮಹಿಳೆಯರ ತಂಡವನ್ನು ಮುನ್ನಡೆಸಲಿದ್ದಾರೆ. ಮಹಿಳಾ ತಂಡದಲ್ಲಿ ಕರ್ಮಾನ್ ಕೌರ್, ಋತುಜಾ ಭೋಂಸ್ಲೆ, ಸಹಜಾ ಯಮ್ಲಾಪಲ್ಲಿ, ವೈದೇಹಿ ಚೌಧರಿ ಹಾಗೂ ಪ್ರಾರ್ಥನಾ ಥಾಂಬ್ರೆ ಅವರಿದ್ದಾರೆ ಎಂದು ಎಐಟಿಎ ಮಾಧ್ಯಮ ಪ್ರಕಟನೆಯೊಂದರಲ್ಲಿ ತಿಳಿಸಿದೆ.
2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಭಾರತ 1 ಚಿನ್ನ ಹಾಗೂ 2 ಕಂಚಿನ ಪದಕಗಳನ್ನು ಜಯಿಸಿತ್ತು. ಬೋಪಣ್ಣ ಅವರು ದಿವಿಜ್ ಶರಣ್ ಜೊತೆಗೂಡಿ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಕೂಡ ಕಂಚಿನ ಪದಕ ಜಯಿಸಿದ್ದರು.







