ರಾಯಚೂರು | ಸಫಾಯಿ ಕರ್ಮಚಾರಿಗಳಿಗೆ ಸ್ಮಶಾನ ಭೂಮಿ ನೀಡಲು ಒತ್ತಾಯ: ರಾಜಕಾಲುವೆಯಲ್ಲಿ ಕುಳಿತು ಮಹಿಳೆ ಪ್ರತಿಭಟನೆ
ಮೈಮೇಲೆ ಕೊಳಚೆ ನೀರು ಸುರಿದುಕೊಂಡು ಅಧಿಕಾರಿಗಳ ವಿರುದ್ದ ಆಕ್ರೋಶ

ಮೈಮೇಲೆ ಕೊಳಚೆ ನೀರು ಸುರಿದುಕೊಂಡು ಅಧಿಕಾರಿಗಳ ವಿರುದ್ದ ಆಕ್ರೋಶ
ರಾಯಚೂರು: 'ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿ ನೀಡಬೇಕು, ರಾಷ್ಟ್ರೀಯ ಸಫಾಯಿ ಕರ್ಮಚಾರಿಯ ಗುರುತಿನ ಚೀಟಿ ನೀಡಬೇಕು' ಎಂದು ಒತ್ತಾಯಿಸಿ ಸಫಾಯಿ ಕರ್ಮಚಾರಿ ಮಹಿಳೆಯೊಬ್ಬರು ನಗರದ ಭಂಗಿಕುಂಟಾ ಬಳಿಯ ರಾಜಕಾಲುವೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಸಫಾಯಿ ಕರ್ಮಚಾರಿ ಗೀತಾ ಸಿಂಗ್ ಎಂಬುವರು ರಾಯಚೂರಿನ ಭಂಗಿಕುಂಟಾ ಬಳಿಯ ರಾಜಕಾಲುವೆಗೆ ಇಳಿದು, ಕೊಳಚೆ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟಿಸಿದರು.
''ಸಫಾಯಿ ಕರ್ಮಚಾರಿಗಳಿಗಾಗಿ ಪ್ರತ್ಯೇಕ ಸ್ಮಶಾನ ಭೂಮಿ ನೀಡಬೇಕೆಂದು ಹಲವು ಬಾರಿ ಇಲ್ಲಿನ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ, ಕೇವಲ ಭರಸವೆ ನೀಡಿದ್ದಲ್ಲದೇ, ಬೇಡಿಕೆ ಈಡೇರಿಸಲಿಲ್ಲ'' ಎಂದು ಅವರು ಬೇಸರ ವ್ಯಕ್ತಪಡಿಸಿದರು.
Next Story







