Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹರ್ಷ ಮಂದರ್ ಸಂಸ್ಥೆಗೆ ವಿದೇಶಿ ದೇಣಿಗೆ...

ಹರ್ಷ ಮಂದರ್ ಸಂಸ್ಥೆಗೆ ವಿದೇಶಿ ದೇಣಿಗೆ ಪರವಾನಿಗೆ ಅಮಾನತು

20 Jun 2023 11:38 PM IST
share
ಹರ್ಷ ಮಂದರ್ ಸಂಸ್ಥೆಗೆ ವಿದೇಶಿ ದೇಣಿಗೆ ಪರವಾನಿಗೆ ಅಮಾನತು

 ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಅವರ ಚಿಂತಕರ ಚಾವಡಿ ‘ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ (CES)’ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಪರವಾನಿಗೆಯನ್ನು ಕೇಂದ್ರ ಗೃಹ ಸಚಿವಾಲಯವು 180 ದಿನಗಳ ಅವಧಿಗೆ ಅಮಾನತುಗೊಳಿಸಿದೆ.

ಮಂದರ್ ಮಾಜಿ ಐಎಎಸ್ ಅಧಿಕಾರಿಯಾಗಿದ್ದು, ‘ಲಾಕಿಂಗ್ ಡೌನ್ ದಿ ಪೂರ್ ಆ್ಯಂಡ್ ಪಾರ್ಟಿಷನ್ಸ್ ಆಫ್ ದಿ ಹಾರ್ಟ್:ಅನ್‌ಮೇಕಿಂಗ್ ದಿ ಐಡಿಯಾ ಆಫ್ ಇಂಡಿಯಾ’ ಸೇರಿದಂತೆ ಅರ್ಧ ಡಝನ್ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಪ್ರತಿಪಾದಿಸುವ ಸ್ವಾಯತ್ತ ಚಿಂತಕರ ಚಾವಡಿ ಸಿಇಎಸ್‌ನ ಸ್ಥಾಪಕರಲ್ಲೋರ್ವರಾಗಿದ್ದಾರೆ.

ಮಂದರ್ ದಿ ಇಂಡಿಯನ್ ಎಕ್ಸ್‌ಪ್ರೆಸ್,ದಿ ಹಿಂದು,ದಿ ವೈರ್,ದಿ ಹಿಂದುಸ್ಥಾನ ಟೈಮ್ಸ್,ದಿ ಕ್ವಿಂಟ್ ಮತ್ತು ಸ್ಕ್ರೋಲ್‌ಗಳಂತಹ ಮಾಧ್ಯಮಗಳಿಗಾಗಿ ನಿಯಮಿತವಾಗಿ ಅಂಕಣಗಳನ್ನು ಬರೆಯುತ್ತಿದ್ದಾರೆ ಎಂದು ಗೃಹ ಸಚಿವಾಲಯವು ತನ್ನ ಜೂ.14ರ ಆದೇಶದಲ್ಲಿ ಹೇಳಿದೆ.

ಟ್ರಸ್ಟಿ ಮಂದರ್ ಅವರು 2011-12 ಮತ್ತು 2017-18ರ ನಡುವೆ ಸಿಎಸ್‌ನ ಎಫ್‌ಸಿಆರ್‌ಎ ಖಾತೆಯಿಂದ ವೃತ್ತಿಪರ ಸ್ವೀಕೃತಿಗಳು/ಪಾವತಿಗಳನ್ನಾಗಿ 12,64,671 ರೂ.ಗಳ ವಿದೇಶಿ ದೇಣಿಗೆಯನ್ನು ಪಡೆದುಕೊಂಡಿದ್ದಾರೆ. ಇದು ಕಾಯ್ದೆಯ ಕಲಂ 3 ಮತ್ತು 8 ಹಾಗೂ ಕಾಯ್ದೆಯ 12(4)(ಎ)(6) ಕಲಮ್‌ನಡಿ ನೋಂದಣಿಯ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿದೇಶಿ ನಿಧಿಗಳನ್ನು ಸ್ವೀಕರಿಸಲು ಎಫ್‌ಸಿಆರ್‌ಎ ಅಡಿ ನೋಂದಣಿ ಕಡ್ಡಾಯವಾಗಿದೆ. ಈಗ ಪರವಾನಿಗೆಯನ್ನು ಅಮಾನತುಗೊಂಡಿರುವುದರಿಂದ ಗೃಹ ಸಚಿವಾಲಯದ ಅನುಮತಿಯಿಲ್ಲದೆ ವಿದೇಶಗಳಿಂದ ಹೊಸದಾಗಿ ಹಣವನ್ನು ಸ್ವೀಕರಿಸಲು ಅಥವಾ ಈಗಾಗಲೇ ಇರುವ ವಿದೇಶಿ ದೇಣಿಗೆಗಳನ್ನು ಬಳಸಲು ಸಿಇಎಸ್‌ಗೆ ಸಾಧ್ಯವಾಗುವುದಿಲ್ಲ.

ಕಾಯ್ದೆಯ ಕಲಂ 3 ನೋಂದಾಯಿತ ವೃತ್ತಪತ್ರಿಕೆಯ ವರದಿಗಾರರು,ಅಂಕಣಕಾರರು,ವ್ಯಂಗ್ಯ ಚಿತ್ರಕಾರರು,ಸಂಪಾದಕರು,ಮಾಲಿಕರು ಮತ್ತು ಪ್ರಕಾಶಕರು ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸಿದೆ. ಕಲಂ 8 ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವ ಸಂಸ್ಥೆಗಳು ಅವುಗಳನ್ನು ನಿಗದಿತ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಹೇಳುತ್ತದೆ. ಕಾಯ್ದೆಯ ಕಲಂ 12(4)(ಎ)(6) ವಿದೇಶಿ ದೇಣಿಗೆಗಳನ್ನು ವೈಯಕ್ತಿಕ ಲಾಭ ಅಥವಾ ಅನಪೇಕ್ಷಿತ ಉದ್ದೇಶಗಳಿಗಾಗಿ ಬಳಸುವುದನ್ನು ನಿಷೇಧಿಸಿದೆ.

ಮಂದರ್ ಸಿಇಎಸ್‌ನ ಎಫ್‌ಸಿಆರ್‌ಎ ಖಾತೆಯಿಂದ ಹಣವನ್ನು ಸ್ವೀಕರಿಸಿದ್ದ ಇತರ ವ್ಯಕ್ತಿಗಳೊಂದಿಗೆ ಅಂಕಣಗಳನ್ನು ಪ್ರಕಟಿಸಿದ್ದಾರೆ. ಮಂದರ್,ಅಂಜಲಿ ಭಾರದ್ವಾಜ ಮತ್ತು ಅಮೃತಾ ಜೊಹ್ರಿ ಅವರು 2018,ಆ.6ರಂದು ಸ್ಕ್ರೋಲ್‌ನಲ್ಲಿ ಬರೆದಿದ್ದ ಲೇಖನವು ಇಂತಹ ಒಂದು ಉದಾಹರಣೆಯಾಗಿದೆ. ಎಫ್‌ಸಿಆರ್‌ಎ ಖಾತೆಯಿಂದ ಜೊಹ್ರಿಯವರಿಗೆ 1,13,251 ರೂ. ಮತ್ತು ಭಾರದ್ವಾಜ ಅವರಿಗೆ 25,64,550 ರೂ.ಗಳನ್ನು ಪಾವತಿಸಲಾಗಿದೆ ಎಂದು ವರದಿಯಾಗಿದೆ ಎಂದು ಸಚಿವಾಲಯವು ಹೇಳಿದೆ.

ಎಫ್‌ಸಿಆರ್‌ಎ ವ್ಯಾಪ್ತಿಯಲ್ಲಿಲ್ಲದ ಸಂಸ್ಥೆಗಳು ಬರೆದಿರುವ ವರದಿಗಳನ್ನು ರಚಿಸಲು ಮತ್ತು ಬಿಡುಗಡೆಗೊಳಿಸಲು ಸಿಇಎಸ್ ವಿದೇಶಿ ದೇಣಿಗೆಗಳನ್ನು ಬಳಸುತ್ತಿದೆ ಎಂದೂ ಸಚಿವಾಲಯವು ಆರೋಪಿಸಿದೆ.

ಸಿಇಎಸ್‌ನ ವಾರ್ಷಿಕ ವರದಿಯ ಪರಿಶೀಲನೆಯಲ್ಲಿ ಹಣಕಾಸು ವಿವರಗಳು ತಾಳೆಯಾಗಿಲ್ಲ ಮತ್ತು ಮಾ.3ರಂದು ಕಳುಹಿಸಿದ್ದ ಪ್ರಶ್ನಾವಳಿಗೆ ಉತ್ತರಿಸಲು ಅದು ವಿಫಲಗೊಂಡಿದೆ ಎಂದೂ ಸಚಿವಾಲಯವು ತಿಳಿಸಿದೆ.

share
Next Story
X