ಬಡವರ ಹೊಟ್ಟೆಯ ಮೇಲೆ ಹೊಡೆಯುವುದರಲ್ಲಿ ಪ್ರಧಾನಿ ಮೋದಿಗೆ ವಿಕೃತಾನಂದ ಸಿಗುತ್ತದೆಯೇ: ಪ್ರಿಯಾಂಕ್ ಖರ್ಗೆ

ಪ್ರಧಾನಿ ಮೋದಿಯವರಿಗೆ ಬಡವರ ಹೊಟ್ಟೆಯ ಮೇಲೆ ಹೊಡೆಯುವುದರಲ್ಲಿ ವಿಕೃತಾನಂದ ಸಿಗುತ್ತದೆಯೇ? ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಈ ಪ್ರಶ್ನೆ ಉದ್ಭವಿಸಲು ಹಲವು ಕಾರಣಗಳಿವೆ. - ಭಾರತೀಯ ಆಹಾರ ನಿಗಮದಲ್ಲಿರುವ ಅಕ್ಕಿಯನ್ನು ಇಥೆನಾಲ್ ಉತ್ಪಾದನೆಗಾಗಿ ಕ್ವಿಂಟಲ್‌ಗೆ 2000 ರೂ. ಗೆ ನೀಡಲು ತಯಾರಿದ್ದಾರೆ. ಖಾಸಗಿ ಕಂಪೆನಿಗಳಿಗೆ ಮಾರಾಟಕ್ಕೂ ತಯಾರಿದ್ದಾರೆ, ಅದೂ ಕೂಡ ಕ್ವಿಂಟಲ್‌ಗೆ 3,100 ರೂಪಾಯಿಗಳಿಗೆ ಮಾತ್ರ. ಆದರೆ ನಮ್ಮ ಸರ್ಕಾರ ಕ್ವಿಂಟಲ್‌ಗೆ 3,600 ರೂ ಕೊಡುತ್ತೇವೆ ಎಂದರೂ ಅಕ್ಕಿ ಕೊಡಲು ತಯಾರಿಲ್ಲ’ ಎಂದು ಹೇಳಿದ್ದಾರೆ.
ಮೊದಲ ಆದ್ಯತೆಯಾಗಿ ಅಕ್ಕಿ ಅನ್ನವಾಗಿ ಬಡವರ ಹೊಟ್ಟೆಗೆ ಸೇರಬೇಕೋ, ಬಂಡವಾಳಶಾಹಿಗಳ ಖಜಾನೆಗೆ ಸೇರಬೇಕೋ? ಬಿಜೆಪಿಯವರು ಉತ್ತರಿಸಲಿ. ಮೋದಿಯವರಿಗೆ ಕರ್ನಾಟಕದ ಮೇಲೆ, ಕನ್ನಡಿಗರ ಮೇಲೆ ಏಕಿಷ್ಟು ಅಸಹನೆ, ದ್ವೇಷ? ಮೋದಿಯವರ ಮುಂದೆ ಕೈಕಟ್ಟಿ ತಲೆಬಾಗಿಸಿ ನಿಲ್ಲುವ ಬಿಜೆಪಿಯ ನಾಯಕರು, ಸಂಸದರು ಕನ್ನಡಿಗರ ಅನ್ನದ ವಿಷಯದಲ್ಲಾದರೂ ಗಟ್ಟಿ ಧೈರ್ಯ ಮಾಡಿ ಮೋದಿಯವರನ್ನು ಪ್ರಶ್ನಿಸಲಿ. ಅಕಸ್ಮಾತ್ ಮೋದಿಯವರಿಂದ ಏನಾದರೂ ತೊಂದರೆಯಾದರೆ ಕರ್ನಾಟಕದ ಜನತೆ ಹಾಗೂ ಕಾಂಗ್ರೆಸ್ ಪಕ್ಷ ಅವರ ರಕ್ಷಣೆಗೆ ನಿಲ್ಲಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ಬಡವರ ಹೊಟ್ಟೆಯ ಮೇಲೆ ಹೊಡೆಯುವುದರಲ್ಲಿ ವಿಕೃತಾನಂದ ಸಿಗುತ್ತದೆಯೇ?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 21, 2023
ಈ ಪ್ರಶ್ನೆ ಉದ್ಭವಿಸಲು ಹಲವು ಕಾರಣಗಳಿವೆ.
- ಭಾರತೀಯ ಆಹಾರ ನಿಗಮದಲ್ಲಿರುವ ಅಕ್ಕಿಯನ್ನು ಇಥೆನಾಲ್ ಉತ್ಪಾದನೆಗಾಗಿ ಕ್ವಿಂಟಲ್‌ಗೆ ₹2000 ಕ್ಕೆ ನೀಡಲು ತಯಾರಿದ್ದಾರೆ.
- ಖಾಸಗಿ ಕಂಪೆನಿಗಳಿಗೆ ಮಾರಾಟಕ್ಕೂ ತಯಾರಿದ್ದಾರೆ, ಅದೂ ಕೂಡ ಕ್ವಿಂಟಲ್‌ಗೆ… pic.twitter.com/QWjnuxZAcg







