ಉಳ್ಳಾಲ: ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್‌ರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಮಂಗಳೂರು: ಉಳ್ಳಾಲ ಅಳೇಕಲದ ಮದನಿ ವಿದ್ಯಾ ಸಂಸ್ಥೆಯಲ್ಲಿ ಕಳೆದ 38 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಟಿ.ಇಸ್ಮಾಯಿಲ್ ರನ್ನು ಮದನಿ ಎಜುಕೇಶನಲ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಸನ್ಮಾನಿಸಿ ಬೀಳ್ಕೊಡಲಾಯಿತು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಹಾಜಿ ಯು.ಎಸ್ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಸಂಚಾಲಕರಾದ ಹಾಜಿ ಯು.ಕೆ ಇಬ್ರಾಹಿಂ, ಬ್ರೈಟ್ ಮದನಿ ಆಂಗ್ಲ ಮಾಧ್ಯಮ ವಿಭಾಗದ ಸಂಚಾಲಕ ರಾದ ಸಯ್ಯದ್ ತಾಹಿರ್ ತಂಙಳ್, ಲೆಕ್ಕ ಪರಿಶೋಧಕರಾದ ಯು.ಎಂ ಇಬ್ರಾಹಿಂ ಆಲಿಯಬ್ಬ, ಪ್ರಾಂಶುಪಾಲೆ ಕೆ.ಕೆ ನಸೀರಾ ಬಾನು, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಆಯಿಶಾ ಬಾನು, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಇಶ್ರತ್ ಯಾಸ್ಮಿನ್, ಆಂಗ್ಲ ಮಾಧ್ಯಮ ವಿಭಾಗದ ಝುಹೇನಾ ಫರ್ವೀನ್, ನಿವೃತ್ತ ಶಿಕ್ಷಕರಾದ ಕ್ಷಿತಿ ಮಮ್ಲೂರ್, ಹಳೆ ವಿದ್ಯಾರ್ಥಿಗಳಾದ ಉಪನ್ಯಾಸಕ ಮುಹಮ್ಮದ್ ಫಾಝಿಲ್, ಉಪನ್ಯಾಸಕಿ ಸಾರಾ ಮಸ್ಕೂರ, ಅಧ್ಯಾಪಕ ಅಬ್ದುಲ್ ರಶೀದ್, ಅಬ್ದುಲ್ ಅಝೀಝ್ ತಂಝೀಲ್, ಉಪನ್ಯಾಸಕ ಅಬ್ದುಲ್ ಅಝೀಝ್ ನಿವೃತ್ತರಿಗೆ ಶುಭ ಹಾರೈಸಿದರು.
ಆಡಳಿತ ಮಂಡಳಿಯ ಕೋಶಾಧಿಕಾರಿ ಹಾಜಿ ಯು.ಪಿ ಅರಬಿ, ಜೊತೆ ಕಾರ್ಯದರ್ಶಿ ರಿಯಾಝ್ ಮಂಗಳೂರು, ಅಕಾಡೆಮಿಕ್ ಅಡ್ವೈಸರ್ ಹಾಜಿ ಯು.ಟಿ ಇಕ್ಬಾಲ್ , ಸದಸ್ಯರಾದ ಯು.ಎ ಇಸ್ಮಾಯಿಲ್, ಯು.ಎ ಬಾವ, ಕೆ.ಎನ್ ಮಹಮ್ಮದ್ ಉಪಸ್ಥಿತರಿದ್ದರು.
ನಿವೃತ್ತರಾಗುವ ಟಿ.ಇಸ್ಮಾಯಿಲ್ ಸಂಸ್ಥೆಯೊಂದಿಗಿನ ಸುದೀರ್ಘ ಒಡನಾಟವನ್ನು ನೆನಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಪತಾಕ್ ಸ್ವಾಗತಿಸಿ ಫಾಝಿಲ್ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಹಬೀಬ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು.







