ವಿದ್ಯಾರ್ಥಿನಿ ನಾಪತ್ತೆ: ಪ್ರಕರಣ ದಾಖಲು

ಮೂಲ್ಕಿ: ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ಯುವತಿಯೊಬ್ಬಳು ಕಾಣೆಯಾಗಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್‌ಕೋಟಿ ನಿವಾಸಿ ಅಶೋಕ್ ಎಂಬವರು ಮಗಳು ವಿದ್ಯಾರ್ಥಿನಿ ದುರ್ಗಾಶ್ರೀ (20) ಕಾಣೆಯಾದವರು ಎಂದು ತಿಳಿದು ಬಂದಿದೆ.
ದುರ್ಗಾಶ್ರೀ ಪ್ರತೀ ದಿನ ತನ್ನ ಮನೆಯಿಂದ ಎಸ್‌ಕೋಟಿ ಬಸ್ ನಿಲ್ದಾಣದವರೆಗೆ ತಂದೆಯ ಸ್ಕೂಟರ್‌ನಲ್ಲಿ ಬಂದು ಬಳಿಕ ಅಲ್ಲಿಂದ ಕಾಲೇಜಿಗೆ ತೆರಳುತ್ತಿದ್ದರು. ಎಂದಿನಂತೆ ಜೂ.15ರಂದು ಬೆಳಗ್ಗೆ ದುರ್ಗಾಶ್ರೀಯನ್ನು ತಂದೆ ಬಸ್ ನಿಲ್ದಾಣಕ್ಕೆ ಬಿಟ್ಟು ತೆರಳಿದ್ದಾರೆ. ಆ ಬಳಿಕ ಆಕೆ ಸಂಜೆಯಾದರೂ ಮನೆಗೆ ಹಿಂದಿರುಗದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾಗಿರುವ ದುರ್ಗಾಶ್ರೀ 5 ಅಡಿ ಎತ್ತರ, ಬಳಿಮೈಬಣ್ಣ, ದೃಢಕಾಯ ಶರೀರ ಹೊಂದಿದ್ದು, ಕಾಣೆಯಾದ ದಿನ ಆಕಾಶ ನೀಲಿ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕೋಟ್ ಧರಿಸಿದ್ದರು. ಇವರು ಕನ್ನಡ, ತುಳು ಮತ್ತು ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ ಎಂದು ಮುಲ್ಕಿ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.





