ಸೈಂಟ್ ತೆರೇಸಾ ಸ್ಕೂಲ್‌ನಲ್ಲಿ ಯೋಗ ದಿನಾಚರಣೆ

ಮಂಗಳೂರು: ಬೆಂದೂರಿನ ಸೈಂಟ್ ತೆರೆಸಾ ಸ್ಕೂಲ್‌ನಲ್ಲಿ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಯೋಗ ಶಿಕ್ಷಕಿ ಕವಿತಾ ಅಶೋಕ್ ವಿದ್ಯಾರ್ಥಿಗಳಿಗೆ ಯೋಗದ ಕುರಿತಾಗಿ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿನಿ ತನಿಶಾ ಯೋಗಾಸನದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿಗಳು ಯೋಗ ಶಿಕ್ಷಕರ ಮಾರ್ಗದರ್ಶನದಂತೆ ಯೋಗಾಸನವನ್ನುಅಭ್ಯಾಸ ಮಾಡಿದರು. ಶಿಕ್ಷಕಿಯರಾದ ಅಶ್ವಿತ್ ಹಾಗೂ ಸುನಾತ್ರಾ ಯೋಗ ದಿನಾಚರಣೆಯ ಮಹತ್ವ ಮತ್ತು ಯೋಗವನ್ನು ಅಭ್ಯಾಸ ಮಾಡುವುದರಿಂದ ಸಿಗುವ ಪ್ರಯೋಜನೆಗಳ ಬಗ್ಗೆ ತಿಳಿಸಿದರು.
ಶಾಲಾ ಪ್ರಾಂಶುಪಾಲರಾದ ಭಗಿನಿ ಲೂರ್ಡ್ಸ್ ಹಾಗೂ ಉಪ ಪ್ರಾಂಶುಪಾಲರಾದ ಭಗಿನಿ ರೀನಾ, ಶಾಲೆಯ ಪ್ರಾಥಮಿಕ ವಿಭಾಗದ ಸಂಯೋಜಕರಾದ ಶಾರೋನ್ ಫೆರ್ನಾಂಡಿಸ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
Next Story