ಸುನೀಲ್ ಚೆಟ್ರಿ ಹ್ಯಾಟ್ರಿಕ್ ಗೋಲು; ಪಾಕ್ ವಿರುದ್ಧ ಭಾರತಕ್ಕೆ 4-0 ಜಯ
ಸ್ಯಾಫ್ ಫುಟ್‌ಬಾಲ್ ಚಾಂಪಿಯನ್ ಶಿಪ್

ಸ್ಯಾಫ್ ಫುಟ್‌ಬಾಲ್ ಚಾಂಪಿಯನ್ ಶಿಪ್
ಬೆಂಗಳೂರು, ಜೂ. 21: ಸುನೀಲ್ ಚೆಟ್ರಿಯ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ದಕ್ಷಿಣ ಏಶ್ಯ ಫುಟ್ಬಾಲ್ ಫೆಡರೇಶನ್ (ಸ್ಯಾಫ್) ಚಾಂಪಿಯನ್‍ಶಿಪ್‍ನ ಎ ಬಣದ ಪಂದ್ಯದಲ್ಲಿ ಬುಧವಾರ ಭಾರತವು ಪಾಕಿಸ್ತಾನವನ್ನು 4-0 ಗೋಲುಗಳ ಅಂತರದಿಂದ ಸೋಲಿಸಿತು.
ಬೆಂಗಳೂರಿನ ಕಂಠೀರವ ಸ್ಟೇಡಿಯಮ್‍ನಲ್ಲಿ ನಡೆದ ಪಂದ್ಯದಲ್ಲಿ ಭಾರತವು ತನ್ನ ಎದುರಾಳಿಯ ಮೇಲೆ ಪಂದ್ಯದ ಆರಂಭದಿಂದ ಕೊನೆಯವರೆಗೂ ಸಂಪೂರ್ಣ ನಿಯಂತ್ರಣ ಹೊಂದಿತ್ತು.
ಭಾರತದ ಮೊದಲ ಗೋಲನ್ನು ನಾಯಕ ಸುನೀಲ್ ಚೆಟ್ರಿ ಪಂದ್ಯದ 10ನೇ ನಿಮಿಷದಲ್ಲಿ ಬಾರಿಸಿ, ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.
ಬಳಿಕ, 16ನೇ ನಿಮಿಷದಲ್ಲಿ ಚೆಟ್ರಿ ಇನ್ನೊಂದು ಗೋಲು ಬಾರಿಸಿದರು. 74ನೇ ನಿಮಿಷದಲ್ಲಿ ಅವರು ತನ್ನ ಮೂರನೇ ಗೋಲು ಬಾರಿಸಿ ಹ್ಯಾಟ್ರಿಕ್ ಸಾಧಿಸಿದರು.
81ನೇ ನಿಮಿಷದಲ್ಲಿ ಉದಾಂತ ಸಿಂಗ್ ಗೋಲು ಬಾರಿಸಿ ತಂಡದ ಗೆಲುವನ್ನು 4-0 ಅಂತರಕ್ಕೆ ಒಯ್ದರು,ಇದಕ್ಕೂ ಮೊದಲು, ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಕುವೈತ್ ನೇಪಾಳವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿತು.







