VIDEO- ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್; ಕೋಚ್ ಸ್ಟಿಮಾಕ್ ಹುಡುಗಾಟದಿಂದ ಭಾರತ- ಪಾಕ್ ಆಟಗಾರರ ಹೊಡೆದಾಟ!
ಕೋಚ್‌ಗೆ ರೆಡ್ ಕಾರ್ಡ್ ತೋರಿಸಿದ ಮ್ಯಾಚ್ ರೆಫ್ರಿ!

ಬೆಂಗಳೂರು: ದಕ್ಷಿಣ ಏಶ್ಯ ಫುಟ್ಬಾಲ್ ಫೆಡರೇಶನ್ (ಸ್ಯಾಫ್) ಚಾಂಪಿಯನ್‍ಶಿಪ್‍ನಲ್ಲಿ ಬುಧವಾರ ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ಹೊಡೆದಾಡಿಕೊಂಡಿದ್ದಾರೆ.
ಪಂದ್ಯದ ಮೇಲೆ ಭಾರತವು ಸಂಪೂರ್ಣ ನಿಯಂತ್ರಣ ಹೊಂದಿದ್ದಾಗ ಹೊಡೆದಾಟ ನಡೆದಿದೆ. ಭಾರತದ ಪ್ರಧಾನ ಕೋಚ್ ಐಗರ್ ಸ್ಟೈಮಾಕ್, ಕ್ವಿಕ್ ತ್ರೋ ಪಡೆದುಕೊಳ್ಳುವುದರಿಂದ ಅಬ್ದುಲ್ಲಾ ಇಕ್ಬಾಲ್‍ರನ್ನು ತಡೆದಾಗ ಜಗಳ ಆರಂಭಗೊಂಡಿತು.
ಆಕ್ರೋಶಗೊಂಡ ಪಾಕಿಸ್ತಾನಿ ಆಟಗಾರರು ಮತ್ತು ಅವರ ಪ್ರಧಾನ ಕೋಚ್ ಶಹಝಾದ್ ಅನ್ವರ್ ಸ್ಟೈಮಾಕ್‍ರ ನಿರ್ಧಾರವನ್ನು ವಿರೋಧಿಸಿದರು. ಇದೇ ಕಾರಣಕ್ಕಾಗಿ ಸ್ಟೈಮಾಕ್‍ರಿಗೆ ಕೆಂಪು ಕಾರ್ಡ್ ತೋರಿಸಿ ಮೈದಾನದಿಂದ ಹೊರಗೆ ಕಳುಹಿಸಲಾಯಿತು.
ಪಾಕಿಸ್ತಾನಕ್ಕೆ ತ್ರೋ ಇನ್ ನೀಡುವ ರೆಫರಿಯ ನಿರ್ಧಾರದಿಂದ ಸ್ಟೈಮಾಕ್ ಅಸಂತುಷ್ಟರಾಗಿದ್ದರು. ಈ ಪ್ರಕ್ರಿಯೆಯಲ್ಲಿ ರೈಟ್ ಬ್ಯಾಕ್ ಪ್ರೀತಮ್ ಕೋಟಲ್‍ರನ್ನು ಫೌಲ್ ಮಾಡಲಾಗಿತ್ತು ಎಂದು ಅವರು ಭಾವಿಸಿದ್ದರು.
ಸ್ಟೈಮಾಕ್‍ರನ್ನು ನಿಂದಿಸಿರುವುದಕ್ಕಾಗಿ ಅನ್ವರ್‍ಗೆ ಹಳದಿ ಕಾರ್ಡ್ ತೋರಿಸಲಾಯಿತು. ಆಗ ಭಾರತ 2-0 ಅಂತರದಿಂದ ಮುಂದಿತ್ತು.
Fight Between India and Pakistan in football match
— (@silly_fs) June 21, 2023
Kuch bhi bolo, apna Igor Stimac hai dabang#IndianFootball #PakistanFootball #INDvsPAK #SAFFChampionship pic.twitter.com/mRZ655iLVc