ಜೂ.24: ಪುತ್ತೂರಿನಲ್ಲಿ ಯು.ಟಿ. ಖಾದರ್, ಅಶೋಕ್ ರೈಗೆ ಸನ್ಮಾನ
ಪುತ್ತೂರು, ಜೂ.22: ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಸ್ಪೀಕರ್ ಯು.ಟಿ. ಖಾದರ್ ಮತ್ತು ಅಶೋಕ್ ಕುಮಾರ್ ರೈ ಅವರಿಗೆ ಮುಸ್ಲಿಮ್ ಸಮುದಾಯ ಒಕ್ಕೂಟದ ವತಿಯಿಂದ ಜೂ.24ರಂದು ಸಂಜೆ ಸನ್ಮಾನ ಕಾರ್ಯಕ್ರಮವು ಪುತ್ತೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಸನ್ಮಾನ ಕಾರ್ಯಕ್ರಮದ ನಿರ್ದೇಶಕ ಮುಹಮ್ಮದ್ ಸಿನಾನ್ ಪರ್ಲಡ್ಕ ತಿಳಿಸಿದ್ದಾರೆ. ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸೈಯದ್ ಅಹ್ಮದ್ ಪೂಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಪುತ್ತೂರು ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್ ಪರ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮತ್ತು ಕಂಬಳಬೆಟ್ಟು ಜನಪ್ರಿಯ ವಿದ್ಯಾಸಂಸ್ಥೆಯ ಸಂಚಾಲಕ ಡಾ. ಬಶೀರ್ ಅಹ್ಮದ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ನಾಗರಿಕರಿಗೆ, ಮಸೀದಿ ಕಮಿಟಿ ಪದಾಧಿಕಾರಿಗಳಿಗೆ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಾರಾರ್ಪಣೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
Next Story