ಮಂಗಳೂರು | ಈದುಲ್ ಅಝ್ ಹಾ: ಈದ್ಗಾ ಮಸೀದಿಯಲ್ಲಿ ಪೂರ್ವಭಾವಿ ಸಭೆ
ಮಂಗಳೂರು, ಜೂ.22: ಈದುಲ್ ಅಝ್ ಹಾ ಪ್ರಯುಕ್ತ ನಗರದ ಲೈಟ್ ಹೌಸ್ ಹಿಲ್ ರೋಡ್ ನಲ್ಲಿರುವ ಈದ್ಗಾ ಮಸೀದಿಯಲ್ಲಿ ಪೂರ್ವಭಾವಿ ಸಭೆಯು ಉಪಾಧ್ಯಕ್ಷ ಕೆ.ಅಶ್ರಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು,
ಜೂ.29ರಂದು ಬೆಳಗ್ಗೆ 8 ಗಂಟೆಗೆ ಈದ್ಗಾ ಮಸೀದಿಯಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ನಡೆಯಲಿದೆ. ಸಭೆಯಲ್ಲಿ ಹಬ್ಬದ ಸಕಲ ಸಿದ್ಧತೆಯ ಬಗ್ಗೆಯ ಚರ್ಚಿಸಲಾಯಿತು.
ಈದ್ಗಾ ಮಸೀದಿಯ ಖತೀಬ್ ಪಿ.ಎಚ್.ಮುಸ್ತಫ ಅಝ್ಹರಿ, ಪ್ರ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಆಡಳಿತ ಸಮಿತಿಯ ಸದಸ್ಯರಾದ ಹಾಜಿ ಅಬ್ದುಸ್ಸಮದ್, ಅದ್ದು ಹಾಜಿ, ಐ.ಮೊಯ್ದಿನಬ್ಬ ಹಾಜಿ, ಶಾಮಿರ್ ಅಲಿ ಮಸೀದಿಯ ಸಫೀವುಲ್ಲಾ ಹಾಗೂ ಕೆ.ಬಶೀರ್ ಅಹ್ಮದ್, ಕಂಡತ್ ಪಳ್ಳಿ ಜುಮಾ ಮಸೀದಿಯ ಕೆ.ಸಲೀಮ್ ಅಹ್ಮದ್, ಸಿ.ಎಂ.ಹನೀಫ್, ಅಹ್ಮದ್ ಬಾವ ಪಡೀಲ್, ಸಿ.ಎಂ.ಮುಸ್ತಫ, ರಿಯಾಝುದ್ದೀನ್ ಹಾಜಿ, ಕಚ್ಮೀನ್ ಅಬ್ದುಲ್ ಹಮೀದ್, ಝಾಕೀರ್ ಕೋಝಿಕ್ಕಾನ, ಮುನವ್ವರ್ ಮತ್ತಿತರರು ಉಪಸ್ಥಿತರಿದ್ದರು.
ಹಾಜಿ ಎಸ್.ಎಂ. ರಶೀದ್ ಸ್ವಾಗತಿಸಿದರು.