Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನಾಪತ್ತೆಯಾಗಿರುವ ಜಲಾಂತರ್ಗಾಮಿ...

ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಖಾಲಿಯಾಗುತ್ತಿರುವ ಆಮ್ಲಜನಕ; ರಕ್ಷಣಾ ಪಡೆಗಳಿಂದ ಕೊನೆ ಕ್ಷಣದ ಪ್ರಯತ್ನ

22 Jun 2023 3:31 PM IST
share
ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಖಾಲಿಯಾಗುತ್ತಿರುವ ಆಮ್ಲಜನಕ; ರಕ್ಷಣಾ ಪಡೆಗಳಿಂದ ಕೊನೆ ಕ್ಷಣದ ಪ್ರಯತ್ನ

ದುಬೈ: ಟೈಟಾನಿಕ್ ಅವಶೇಷಗಳಿರುವ ಪ್ರದೇಶದ ಭೇಟಿಗೆ ತೆರಳಿ, ಕಣ್ಮರೆಯಾಗಿದ್ದ ಜಲಾಂತರ್ಗಾಮಿ ನೌಕೆ ಟೈಟನ್ ನಲ್ಲಿನ ಆಮ್ಲಜನಕ ಖಾಲಿಯಾಗುವ ಹಂತ ತಲುಪಿದ್ದು, ಗುರುವಾರ ಬೆಳಗ್ಗೆ ವೇಳೆಗೆ ಕೈಮೀರುವ ಹಂತ ಸಮೀಪಿಸಿದೆ. ಸಮಯದ ವಿರುದ್ಧ ಹೋರಾಡುತ್ತಿರುವ ರಕ್ಷಣಾ ಪಡೆಗಳು ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚಲು ತಮ್ಮ ಕೈಲಾದಷ್ಟೂ ಪ್ರಯತ್ನ ಮುಂದುವರಿಸಿದ್ದಾರೆ.

ತುರ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆ ಎಂದೇ ಕರೆಸಿಕೊಂಡಿರುವ ಈ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿರುವ ರಕ್ಷಣಾ ತಜ್ಞರು, ಸತತ ಎರಡನೇ ದಿನ ಸಮುದ್ರದಾಳದಲ್ಲಿ ಶಬ್ಧವನ್ನು ಪತ್ತೆ ಹಚ್ಚಿದ್ದು, ಈ ಶಬ್ಧವನ್ನು ಅನುಸರಿಸಿ ತಮ್ಮ ಕಾರ್ಯಾಚರಣೆಯ ಅವಧಿ ಕಡಿತಗೊಳ್ಳಬಹುದು ಎಂಬ ಆಶಾವಾದದೊಂದಿಗೆ ಜಲಾಂತರ್ಗಾಮಿ ಕಣ್ಮರೆಯಾಗಿರುವ ಪ್ರದೇಶಕ್ಕೆ ಇನ್ನಷ್ಟು ಹಡಗು ಹಾಗೂ ನೌಕೆಗಳನ್ನು ರವಾನಿಸಿದ್ದಾರೆ. ಆದರೆ, ರವಿವಾರ ಬೆಳಗ್ಗೆ ಆರು ಗಂಟೆಗೆ ಜಲಾಂತರ್ಗಾಮಿ ನೌಕೆಯಲ್ಲಿ ತೆರಳಿದ್ದ ಪ್ರಯಾಣಿಕರ ತಂಡಕ್ಕೆ ಕೇವಲ ನಾಲ್ಕು ದಿನಕ್ಕಾಗುವಷ್ಟು ಆಮ್ಲಜನಕ ಮಾತ್ರ ಲಭ್ಯವಿತ್ತು ಎಂದು ಹೇಳಲಾಗಿದೆ.

ಜಲಾಂತರ್ಗಾಮಿ ಪ್ರಯಾಣಿಕರನ್ನು ರಕ್ಷಿಸಬಹುದು ಎಂಬ ಆಶಾವಾದ ಹೊಂದಿರುವವರೂ ಕೂಡಾ ಕೆಲವು ಅಡಚಣೆಗಳ ಬಗ್ಗೆ ಎಚ್ಚರಿಸುತ್ತಿದ್ದಾರೆ. ಮೊದಲಿಗೆ ಜಲಾಂತರ್ಗಾಮಿ ನೌಕೆಯಿರುವ ಸ್ಥಳವನ್ನು ಗುರುತಿಸುವುದು, ಅದನ್ನು ರಕ್ಷಣಾ ಸಾಧನಗಳೊಂದಿಗೆ ತಲುಪುವುದು, ಅದಿನ್ನೂ ಸುರಕ್ಷಿತವಾಗಿದೆ ಎಂದು ಭಾವಿಸಿ ಸಮುದ್ರದ ಮೇಲಕ್ಕೆ ತರುವುದು ಹಾಗೂ ಇವೆಲ್ಲವೂ ಜಲಾಂತರ್ಗಾಮಿ ಪ್ರಯಾಣಿಕರಿಗೆ ಲಭ್ಯವಿರುವ ಆಮ್ಲಜನಕ ಖಾಲಿಯಾಗುವ ಮುನ್ನ ನಡೆಯಬೇಕಿದೆ ಎಂಬುದು ಅವರ ಎಚ್ಚರಿಕೆಯಾಗಿದೆ.

ಈವರೆಗೆ ಸಮುದ್ರದಾಳದೊಂದಿಗೆ ಸಂಪರ್ಕ ಹೊಂದಿರುವ ಪ್ರದೇಶದ ಎರಡು ಪಟ್ಟಿನಷ್ಟು ಶೋಧ ಕಾರ್ಯ ನಡೆಸಲಾಗಿದ್ದು, ಸಮುದ್ರದಾಳದಲ್ಲಿ ಸುಮಾರು 13,200 ಅಡಿ(4,020 ಮೀಟರ್)ಯಷ್ಟು ಶೋಧಿಸಲಾಗಿದೆ. ನೌಕೆಯಲ್ಲಿ ತೆರಳಿದ್ದ ಎಲ್ಲ ಐವರು ಪ್ರಯಾಣಿಕರನ್ನು ರಕ್ಷಿಸಬಹುದಾಗಿದೆ ಎಂಬ ಆಶಾವಾದವನ್ನು ಪ್ರಾಧಿಕಾರಗಳು ಹೊಂದಿವೆ ಎಂದು ಫಸ್ಟ್ ಕೋಸ್ಟ್ ಗಾರ್ಡ್ ಡಿಸ್ಟ್ರಿಕ್ಟ್‌ನ ಕ್ಯಾಪ್ಟನ್ ಜೇಮಿ ಫ್ರೆಡರಿಕ್ ತಿಳಿಸಿದ್ದಾರೆ.

"ಇದು ಶೇ 100ರಷ್ಟು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ" ಎಂದು ಅವರು ಬುಧವಾರ ಹೇಳಿದ್ದಾರೆ.

ರವಿವಾರ ಟೈಟನ್ ಜಲಾಂತರ್ಗಾಮಿ ನೌಕೆ ಕಾಣೆಯಾಗಿರುವ ಉತ್ತರ ಅಟ್ಲಾಂಟಿಕ್ ಪ್ರದೇಶವು ಹೊಗೆ ಹಾಗೂ ಚಂಡಮಾರುತದಂಥ ಪರಿಸ್ಥಿತಿಗೆ ತೀರಾ ದುರ್ಬಲವಾಗಿದ್ದು, ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲು ತೀವ್ರ ಸವಾಲಿನ ಪರಿಸರವಾಗಿ ಪರಿಣಮಿಸಿದೆ ಎಂದು ಕೋಸ್ಟ್ ಗಾರ್ಡ್ಸ್ ಇಂಟರ್‌ನ್ಯಾಷನಲ್ ಐಸ್ ಪ್ಯಾಟ್ರೋಲ್‌ನ ಮುಖ್ಯ ವಿಜ್ಞಾನಿಯಾಗಿರುವ ಸಾಗರತಜ್ಞ ಡೊನಾಲ್ಡ್ ಮರ್ಫಿ ಅಭಿಪ್ರಾಯ ಪಟ್ಟಿದ್ದಾರೆ.

share
Next Story
X