ಕಾಪು: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

ಕಾಪು : ಕಾಪು ತಾಲ್ಲೂಕಿನ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕ್ರಿಯೆ ಗುರುವಾರ ಕಾಪುವಿನ ಲಕ್ಷ್ಮೀ ಜನಾರ್ದನ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲ್ಲೂಕಿನ 16 ಗ್ರಾಮ ಪಂ.ಗಳ 2020ನೇ ಸಾಲಿನ 30 ತಿಂಗಳ ಅವಧಿಯ ಪ್ರಕ್ರಿಯೆ ನಡೆಯಿತು. ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮೀಸಲಾತಿ ಆಯ್ಕೆಯ ಬಗ್ಗೆ ಮಾಹಿತಿ ನೀಡಿದರು. ಪೈಕಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವು ಅನುಸೂಚಿತ ಜಾತಿ 1, ಹಿಂದುಳಿದ ವರ್ಗ -ಅ 4, ಹಿಂದುಳಿದ ವರ್ಗ -ಬ 1, ಸಾಮಾನ್ಯ 10, ಉಪಾಧ್ಯಕ್ಷ- ಅಮುಸೂಚಿತ ಜಾತಿ ಆಯ್ಕೆ ನಡೆಯಿತು.
ಬೆಳ್ಳೆ-ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಹಿಂದುಳಿದ ವರ್ಗ-ಅ, ಕುರ್ಕಾಲು-ಅಧ್ಯಕ್ಷ ಹಿಂದುಳಿದ ವರ್ಗ -ಅ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಶಿರ್ವ-ಅಧ್ಯಕ್ಷ ಹಿಂದುಳಿದ ವರ್ಗ- ಆ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಇನ್ನಂಜೆ-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕಟಪಾಡಿ-ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ವರ್ಗ -ಅ ಮಹಿಳೆ, ಕೋಟೆ-ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಸಾಮಾನ್ಯ, ಮಜೂರು- ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕುತ್ಯಾರು-ಅಧ್ಯಕ್ಷ ಹಿಂದುಳಿದ ವರ್ಗ-ಅ, ಉಪಾಧ್ಯಕ್ಷ ಅನುಸೂಚಿತ ಜಾತಿ ಮಹಿಳೆ. ಮುದರಂಗಡಿ-ಅಧ್ಯಕ್ಷ ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ ಹಿಂದುಳಿದ ವರ್ಗ ಬ ಮಹಿಳೆ, ಬೆಳಪು-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬಡಾ-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ, ಎಲ್ಲೂರು-ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, ಫಲಿಮರು-ಹಿಂದುಳಿದ ವರ್ಗ ಬ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ತೆಂಕ-ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಪಡುಬಿದ್ರಿ-ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಹಿಂದುಳಿದ ವರ್ಗ ಅ, ಹೆಜಮಾಡಿ-ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
ಸಹಾಯಕ ಕಮೀಷನರ್ ರಶ್ಮಿ, ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಚುನಾವಣಾ ತಹಶೀಲ್ದಾರ್ ಪರಶುರಾಮ ಕಲಾಲ್, ಎನ್‍ಐಸಿ ತಾಂತ್ರಿಕ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.