ಉಡುಪಿ ಜಿಲ್ಲೆಯಲ್ಲಿ 22 ಮಿ.ಮೀ.ಮಳೆ

ಉಡುಪಿ, ಜೂ.22: ಗುರುವಾರ ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 22.0ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.
ಕುಂದಾಪುರದಲ್ಲಿ 30.9ಮಿ.ಮೀ., ಉಡುಪಿಯಲ್ಲಿ 28.9ಮಿ.ಮೀ., ಬ್ರಹ್ಮಾವರದಲ್ಲಿ 26.1, ಕಾಪುವಲ್ಲಿ 25.2, ಹೆಬ್ರಿಯಲ್ಲಿ 20.0, ಬೈಂದೂರಿ ನಲ್ಲಿ 17.9 ಹಾಗೂ ಕಾರ್ಕಳದಲ್ಲಿ 9.8ಮಿ.ಮೀ. ಮಳೆಯಾಗಿದೆ.
ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್‌ನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ 64.5ಮಿ.ಮೀ.ನಿಂದ 115.5ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ. ಗುಡುಗು-ಮಿಂಚು ಸಹಿತ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ದಿನದ ಗರಿಷ್ಠ ಉಷ್ಣಾಂಶ 29.2ಡಿಗ್ರಿ ಸೆಲ್ಶಿಯಸ್ ಆಗಿದ್ದರೆ, ಕನಿಷ್ಠ ಉಷ್ಣಾಂಶ 23.9ಡಿಗ್ರಿ ಆಗಿತ್ತು.
Next Story





