ಜೂ.27ರಂದು ಹೆಬ್ರಿಯಲ್ಲಿ ‘ನಿಧಿ ಆಪ್ಕೆ ನಿಕಟ್’
ಉಡುಪಿ, ಜೂ.22: ಹೊಸದಿಲ್ಲಿಯ ಭವಿಷ್ಯನಿಧಿ ಸಂಘಟನೆಯು ಪ್ರಾರಂಭಿಸಿರುವ ಭವಿಷ್ಯ ನಿಧಿ ಸದಸ್ಯರ ಮತ್ತು ಪಿಂಚಣಿದಾರರ ಕುಂದು ಕೊರತೆಗಳನ್ನು ಪರಿಹರಿಸುವ ಹಾಗೂ ಜಾಗೃತಿ ಮೂಡಿಸುವ ಜಿಲ್ಲಾ ಮಾಸಿಕ ಕಾರ್ಯ ಕ್ರಮ ‘ನಿಧಿ ಆಪ್ಕೆ ನಿಕಟ್/ಭವಿಷ್ಯನಿಧಿ ನಿಮ್ಮ ಹತ್ತಿರ’ ಈ ಬಾರಿ ಜೂ.27ರಂದು ಹೆಬ್ರಿ ಗ್ರಾಪಂನ ರಾಜೀವಗಾಂಧಿ ಸೇವಾ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ.
ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಭವಿಷ್ಯ ನಿಧಿಯ ಲಕ್ಷಾಂತರ ಚಂದಾದಾರ ರಿಗೆ ತನ್ನ ವಿವಿಧ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಭವಿಷ್ಯ ನಿಧಿ ಸಂಸ್ಥೆಯ ಪ್ರಯತ್ನವಾಗಿದೆ. ಇದು ಉದ್ಯೋಗದಾತರು ಹಾಗೂ ಉದ್ಯೋಗಿ ಗಳಿಗೆ ಸಹಭಾಗಿತ್ವದ ಅರಿವು ಮೂಡಿಸುವ ಪ್ರಭಾವಿ ಕಾರ್ಯಕ್ರಮ ಇದಾಗಿದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.
ತನ್ನ ಸದಸ್ಯರ ಕುಂದುಕೊರತೆ ಪರಿಹಾರ ಹಾಗೂ ಮಾಹಿತಿ ವಿನಿಮಯ ವೇದಿಕೆಯಾಗಿ ಏಕಕಾಲದಲಿಲ ಕಾರ್ಯನಿರ್ವಹಿಸುತ್ತದೆ. ನಿಧಿ ಆಪ್ಕೆ ನಿಕಟ್ ಜೂನ್ ತಿಂಗಳ ಕಾರ್ಯಕ್ರಮದ ಮುಖ್ಯ ವಿಷಯ ದೂರು ಸಲ್ಲಿಸುವಿಕೆ ಹಾಗೂ ವಂಚನೆ ತಡೆಗಟ್ಟುವಿಕೆಯಾಗಿದೆ.
ಕಾರ್ಯಕ್ರಮದಲ್ಲಿ ದೂರು ಸಲ್ಲಿಸುವ ರೀತಿ, ದೂರು ಸಲ್ಲಿಸುವ ಇತರ ಪೋರ್ಟಲ್‌ಗಳ ಮಾಹಿತಿ, ಡಿಜಿಟಲ್ ಸೇವೆ ಗಳ ಮಾಹಿತಿ, ಜಾಗೃತಿ ಮತ್ತು ವಂಚನೆ ತಡೆಗಟ್ಟುವಿಕೆ ಹಾಗೂ ಉದ್ಯೋಗದಾತರಿಗೆ ಸಂಬಂಧಿಸಿದ ಉದ್ಯೋಗಿ ಗಳ ಹಕ್ಕುಗಳ ಕುರಿತು ವಿವರಗಳನ್ನು ನೀಡಲಾಗುವುದು.
ಆದ್ದರಿಂದ ಭವಿಷ್ಯನಿಧಿಯ (ಪಿಎಫ್) ಎಲ್ಲಾ ಚಂದಾರರು, ಇಪಿಎಸ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪ ಡುವ ಸಂಸ್ಥೆಗಳ ಉದ್ಯೋಗದಾತರು, ಟ್ರೇಡ್ ಯೂನಿಯನ್ ಮುಖಂಡರು ಹಾಗೂ ಸದಸ್ಯರು ಇದರಲ್ಲಿ ಹಾಜ ರಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.







