ಎಸ್‌ಎಂಎಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು, ಜೂ.22: ಸುನ್ನಿ ಮಹಲ್ ಫೆಡರೇಶನ್ (ಎಸ್‌ಎಂಎಫ್)ನ ದ.ಕ.ಜಿಲ್ಲಾ ವ್ಯಾಪ್ತಿಯ ಸದಸ್ಯತ್ವ ಅಭಿ ಯಾನ ಕಾರ್ಯಕ್ರಮಕ್ಕೆ ನಗರದ ಪುರಭವನದಲ್ಲಿ ಮಂಗಳವಾರ ನಡೆದ ಎಸ್ಕೆಎಸೆಸ್ಸೆಫ್ ಐಡಿಯಲ್ ಕಾನ್ಫರೆನ್ಸ್‌ನಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಸದಸ್ಯತ್ವ ಅಭಿಯಾನದ ಪೋಸ್ಟರನ್ನು ಕರ್ನಾಟಕ ಜಮಾಅತೇ ಅಹ್ಲುಸುನ್ನ ಪ್ರಧಾನ ಕಾರ್ಯದರ್ಶಿ ಮುಫ್ತಿ ಖಾಝಿ ಮುಹಮ್ಮದ್ ಅಲಿ ಜಮಾಲಿ ಮಿಸ್ಬಾಹಿ ಬಿಡುಗಡೆಗೊಳಿಸಿದರು.
ಎಸ್ಕೆಎಸೆಸ್ಸೆಫ್ ರಾಜ್ಯಾಧ್ಯಕ್ಷ ರಫೀಕ್ ಅಹ್ಮದ್ ಹುದವಿ ಕೋಲಾರ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಮುಶಾವರ ಸದಸ್ಯ ಬಂಬ್ರಾಣ ಉಸ್ತಾದ್, ಕರ್ನಾಟಕ ಮುಶಾವರ ಕೋಶಾಧಿಕಾರಿ ಜಿಫ್ರಿ ತಂಳ್ ಬೆಳ್ತಂಗಡಿ, ವೆಸ್ಟ್ ಜಿಲ್ಲಾಧ್ಯಕ್ಷ ಅಮೀರ್ ತಂಳ್ ಕಿನ್ಯ, ಹನೀಫ್ ಹುದವಿ ಮಾಡನ್ನೂರು, ಇರ್ಶಾದ್ ದಾರಿಮಿ ಮಿತ್ತಬೈಲ್, ಹುಸೈನ್ ರಹ್ಮಾನಿ ಕಾಶಿಪಟ್ನ, ಅಶ್ರಫ್ ಬಾಖವಿ ಚಾಪಳ್ಳ, ಈಸ್ಟ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ, ಮುಸ್ತಫಾ ಅನ್ಸಾರಿ, ರಶೀದ್ ಹಾಜಿ ಪರ್ಲಡ್ಕ, ಇಬ್ರಾಹೀಂ ಕೊಣಾಜೆ, ಸಿದ್ದೀಕ್ ಅಬ್ದುಲ್ ಖಾದರ್, ಅಬೂಬಕ್ಕರ್ ಮಂಗಳ ಬೆಳ್ಳಾರೆ, ಹಮೀದ್ ಕಣ್ಣೂರು, ಇಕ್ಬಾಲ್ ಬಾಳಿಲ ಉಪಸ್ಥಿತರಿದ್ದರು.