ರಜತ್‌ಕೋಟೆಕಾರ್, ನವ್ಯ ಪ್ರತೀಕ್ಷಾರಿಗೆ ಕಲ್ಬಾವಿ ಪ್ರಶಸ್ತಿ ಪ್ರದಾನ

ಮಂಗಳೂರು: ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪ್ರಾಯೋಜಿಸಿದ ದ್ವಿತೀಯ ವಾರ್ಷಿಕ ಅನಂತಮಿತ್ರ ಕಲ್ಬಾವಿ ಪ್ರಶಸ್ತಿಯನ್ನು ಯುವ ಸಾಧಕ ರಜತ್ ಕೋಟೆಕಾರ್ ಮತ್ತು ಯುವ ಸಾಧಕಿ ನವ್ಯ ಪ್ರತೀಕ್ಷಾ ಪಡೆದಿದ್ದಾರೆ.
ನಗರದ ಹೋಟೆಲ್ ಉತ್ಸವ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯಅತಿಥಿ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಪಿ.ಡಿ. ಶೆಟ್ಟಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಬಸವ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ರಂಜನ್‌ರಾವ್ ಪ್ರಶಸ್ತಿ ವಿಜೇತರ ಪರಿಚಯಿಸಿದರು. ಉದ್ಯಮಿ ಬೈಕಾಡಿ ಶ್ರೀನಿವಾಸ ಅತಿಥಿಯಾಗಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ರೋಟರಿ ಸಂಸ್ಥೆಯ ನಿರ್ದೇಶಕ ಸುಮಿತ್‌ರಾವ್, ಪ್ರತಿಭಾರಾವ್ ಮತ್ತು ಸರಿತಾ ಡಿ’ಸೋಜರವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಶಾಂತ್‌ರೈ ವಂದಿಸಿದರು.
Next Story