2 ವರ್ಷದ ಪುತ್ರನ ಕೈಯಿಂದ ಆಕಸ್ಮಿಕವಾಗಿ ಸಿಡಿದ ಗುಂಡು: ಗರ್ಭಿಣಿ ಮಹಿಳೆ ಮೃತ್ಯು

ವಾಷಿಂಗ್ಟನ್: 2 ವರ್ಷದ ಬಾಲಕ ಪಿಸ್ತೂಲ್ನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸಿಡಿದ ಗುಂಡು ಬಡಿದು ಬಾಲಕನ ತಾಯಿ ಮೃತಪಟ್ಟ ಘಟನೆ ಅಮೆರಿಕದ ಓಹಿಯೊ ರಾಜ್ಯದಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕಳೆದ ಶುಕ್ರವಾರ ಓಹಿಯೊ ರಾಜ್ಯದ ನೊರ್ವಾಕ್ ನಗರದ ಮನೆಯೊಂದರ ನಿವಾಸಿ, 31 ವರ್ಷದ ಲಾರಾ ಲಿಗ್ ಎಂಬಾಕೆ ಪೊಲೀಸರಿಗೆ ಕರೆ ಮಾಡಿದ್ದು ತನ್ನ 2 ವರ್ಷದ ಪುತ್ರ ಆಕಸ್ಮಿಕವಾಗಿ ಸಿಡಿಸಿದ ಗುಂಡು ತನ್ನ ಕುತ್ತಿಗೆಗೆ ಬಡಿದಿದ್ದು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿಸಿದ್ದಳು. ಲಾರಾ 8 ತಿಂಗಳ ಗರ್ಭಿಣಿಯಾಗಿದ್ದು ಈಕೆಯ ಪುತ್ರ ಆಟವಾಡುತ್ತಿದ್ದಾಗ ಗುಂಡು ಹಾರಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆಗೆ ಗರ್ಭಪಾತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾರಾ ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
Next Story