ಮಣಿಪುರದಲ್ಲಿ ಮತ್ತೆ ಹಿಂಸೆ: ಶಸ್ತ್ರಧಾರಿಗಳಿಂದ ಗುಂಡುಹಾರಾಟ; ಇಬ್ಬರು ಸೈನಿಕರಿಗೆ ಗಾಯ

ಹೊಸದಿಲ್ಲಿ: ಮಣಿಪುರದಲ್ಲಿಗುರುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಇಂಫಾಲ ಸಮೀಪದ ಪಟ್ಟಣವಾದ ಎನ್.ಬೊಲಿಜಾಂಗ್‌ನಲ್ಲಿ ಶಸ್ತ್ರಧಾರಿಗಳ ಗುಂಪೊಂದು ನಡೆಸಿ ಗುಂಡು ಹಾರಾಟದಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ.
ಇಬ್ಬರು ಸೈನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯ ಬಳಿಕ ಭದ್ರತಾಪಡೆಗಳು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಒಂದು ಲಘು ಮೆಶಿನ್ ಗನ್ ಅನ್ನು ವಶಪಡಿಸಿವೆ.
ಇದಕ್ಕೂ ಮುನ್ನ ಜೂನ್ 18-19ರ ಮಧ್ಯರಾತ್ರಿ ಚಿಂಗ್‌ಮಾಂಗ್ ಗ್ರಾಮದಲ್ಲಿ ದುಷ್ಕರ್ಮಿಗಳು ನಡೆಸಿದ ಅಪ್ರಚೋದಿತವಾಗಿ ನಡೆಸಿದ ಗುಂಡು ಹಾರಾಟದಲ್ಲಿ ಓರ್ವ ಸೈನಿಕ ಗಾಯಗೊಂಡಿದ್ದನು.
ಮಣಿಪುರದಲ್ಲಿ ದೊಂಬಿ, ಘರ್ಷಣೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಇಂಟರ್‌ನೆಟ್‌ಗೆ ವಿಧಿಸಲಾಗಿದ್ದ ನಿಷೇಧವನ್ನು ಜೂನ್ 25ರವರೆಗೆ ವಿಸ್ತರಿಸಿದೆ.
Next Story





