ಅಮೆರಿಕ: ಲ್ಯಾಬ್ ನಲ್ಲಿ ಬೆಳೆದ ಮಾಂಸ ಮಾರಾಟಕ್ಕೆ ಅನುಮೋದನೆ
ವಾಷಿಂಗ್ಟನ್: ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ಮಾಂಸವನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡುವ ಪ್ರಸ್ತಾವನೆಯನ್ನು ಅಮೆರಿಕದ ಕೃಷಿ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಈ ನಿರ್ಧಾರವು ಇದೀಗ ಪ್ರಯೋಗಾಲಯದ ಕೋಶಗಳಿಂದ ತಯಾರಿಸಿದ ಕೋಳಿ ಮಾಂಸವನ್ನು ಮಾರಾಟ ಮಾಡಲು ಕ್ಯಾಲಿಫೋರ್ನಿಯಾದ ಎರಡು ಕಂಪೆನಿಗಳಿಗೆ ಹಸಿರುನಿಶಾನೆ ತೋರಿದೆ. ಗ್ರಾಹಕರು ಲ್ಯಾಬ್ನಲ್ಲಿ ಅಭಿವೃದ್ಧಿಪಡಿಸಿದ ಮಾಂಸವನ್ನು ಕಿರಾಣಿ ಅಂಗಡಿಗಳಲ್ಲಿ ಪಡೆಯಲು ಇನ್ನೂ ಒಂದು ವರ್ಷ ಕಾಯಬೇಕಾಗಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಕೋಳಿ ಫಾರ್ಮ್ ಗಳಲ್ಲಿ ಸಾಕಿದ ಕೋಳಿಗಳ ಬದಲು, ಪ್ರಾಣಿಹತ್ಯೆ ನಡೆಸದೆ ಕೋಳಿಮಾಂಸ ತಿನ್ನಬೇಕು ಎಂದು ಬಯಸುವ ಗ್ರಾಹಕರಿಗೆ ಇದೊಂದು ಅಪೂರ್ವ ಅವಕಾಶವಾಗಿದೆ. ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ಮಾಂಸವನ್ನು ಮಾರಾಟ ಮಾಡಲು ಮೊದಲು ಅನುಮತಿ ನೀಡಿದ ದೇಶವಾಗಿ ಸಿಂಗಾಪುರ ಗುರುತಿಸಿಕೊಂಡಿದ್ದರೆ, ಅಮೆರಿಕ ಎರಡನೇ ದೇಶವಾಗಿದೆ.
Next Story