ಚೀನಾದ ಝುಲಿನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಬರ್ಮಿಂಗ್‌ಹ್ಯಾಮ್ ಡಬ್ಲ್ಯುಟಿಎ ಟೂರ್ನಿ

ಬರ್ಮಿಂಗ್‌ಹ್ಯಾಮ್ ಡಬ್ಲ್ಯುಟಿಎ ಟೂರ್ನಿ
ಬರ್ಮಿಂಗ್‌ಹ್ಯಾಮ್:ಬರ್ಮಿಂಗ್‌ಹ್ಯಾಮ್‌ನಲ್ಲಿ ಬುಧವಾರ ನಡೆದ ಡಬ್ಲುಟಿಎ ಸ್ಪರ್ಧೆಯಲ್ಲಿ ಮೂರನೇ ಶ್ರೇಯಾಂಕದ ಮ್ಯಾಗ್ಡಾ ಲಿನೆಟ್ಟೆಗೆ ಆಘಾತ ನೀಡಿದ ಚೀನಾದ ಝು ಲಿನ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
39ನೇ ರ್ಯಾಂಕಿನ ಝು ಅವರು ಲಿನೆಟ್ಟೆ ವಿರುದ್ಧ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-3, 6-0 ನೇರ ಸೆಟ್‌ಗಳ ಅಂತರದಿಂದ ಅಚ್ಚರಿಯ ಗೆಲುವು ದಾಖಲಿಸಿ ಅಂತಿಮ-8ರ ಹಂತ ತಲುಪಿದ್ದಾರೆ. ಈ ಮೂಲಕ ಜುಲೈ 3ರಿಂದ ಆರಂಭವಾಗಲಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ಗೆ ಪೂರ್ವ ತಯಾರಿ ನಡೆಸುತ್ತಿದ್ದಾರೆ.
29ರ ಹರೆಯದ ಝು ಮೊದಲ ಸುತ್ತಿನ ಪಂದ್ಯದಲ್ಲಿ ಬ್ರಿಟನ್ ಆಟಗಾರ್ತಿ ಕಟಿ ಬೌಲ್ಟರ್‌ರನ್ನು 7-5, 7-5 ಅಂತರದಿಂದ ಸೋಲಿಸಿದ್ದಾರೆ. ಝು ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಂತಿಮ-16ರ ಸುತ್ತು ತಲುಪಿದ್ದಾರೆ. ಆದರೆ, ಇತರ ಮೂರು ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಎರಡನೇ ಸುತ್ತು ದಾಟುವಲ್ಲಿ ವಿಫಲರಾಗಿದ್ದಾರೆ.
Next Story