ವಿಕಲಾಂಗರೆಂಬ ನಕಲಿ ಸರ್ಟಿಫಿಕೇಟ್ ಬಳಸಿ ಉದ್ಯೋಗ ಗಿಟ್ಟಿಸಿದ 755 ಶಿಕ್ಷಕರ ವಿರುದ್ಧ ಪ್ರಕರಣ ದಾಖಲು

ಭೋಪಾಲ್: ವಿಕಲಾಂಗರೆಂಬ ನಕಲಿ ಪ್ರಮಾಣ ಪತ್ರಗಳನ್ನು ಬಳಸಿಕೊಂಡು ಭಿನ್ನಸಾಮರ್ಥದ ಶ್ರೇಣಿಯಡಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆನ್ನಲಾದ 77 ಮಂದಿ ಹೊಸದಾಗಿ ನೇಮಕಗೊಂಡ ರಾಜ್ಯ ಸರಕಾರಿ ಶಾಲಾ ಶಿಕ್ಷಕರ ವಿರುದ್ಧ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಧ್ಯಪ್ರದೇಶದ ರಾಜ್ಯ ಸಿಬ್ಬಂದಿ ಮಂಡಳಿಯು 18 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನು ನಡೆಸಿತ್ತು. ಇವುಗಳಲ್ಲಿ 1 ಸಾವಿರಕ್ಕೂ ಅಧಿಕ ಹುದ್ದೆಗಳು ಭಿನ್ನಸಾಮರ್ಥ್ಯದ ಅಭ್ಯರ್ಥಿಗಳಿಗೆ ಮೀಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ 755 ಭಿನ್ನಸಾಮರ್ಥ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಅಶ್ಚರ್ಯಕರವೆಂದರೆ ನೇಮಕಗೊಂಡ 760 ಭಿನ್ನಸಾಮರ್ಥ್ಯ ಶ್ರೇಣಿಯ ಅಭ್ಯರ್ಥಿಗಳಲ್ಲಿ 450 ಮಂದಿ ಮೊರೆನಾ ಜಿಲ್ಲೆಯವರೇ ಆಗಿದ್ದರು.
ಭಿನ್ನಸಾಮರ್ಥ್ಯದವರಲ್ಲದ ಅಭ್ಯರ್ಥಿಗಳು ತಾವು ಅಂಗವಿಕಲರೆಂದು ನಕಲಿ ಸರ್ಟಿಪಿಕೇಟ್ ಬಳಿಸಕಂಡು ಈ ಹುದ್ದೆಗಳನ್ನು ಪಡೆದುಕೊಂಡಿದ್ದಾರೆಂದು ಆಪಾದಿಸಿ ರಾಜ್ಯ ದಿವ್ಯಾಂಗ ಸಂಘದ ನಾಯಕ ಹೇಮಂತ ಕುಶವಾಹ ತಿಳಿಸಿದ್ದರು.
ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶನಾಲ (ಡಿಪಿಐ)ಯವು ಮೊರೆನಾ ಜಿಲ್ಲಾಧಿಕಾರಿ ಅಂಕಿತ್ ಅಸ್ತಾನಾ ಅವರಿಗೆ ನಿರ್ದೇಶನ ನೀಡಿದೆ





