ಗ್ರಾಮ ಭಾರತದ ತಲ್ಲಣ

-

 ಗಾಂಧಿ ಮತ್ತೆ ನೆನಪಾಗುವುದು ಇಲ್ಲೇ. ಗಾಂ ತಾವು ಭಾರತದಲ್ಲಿ ಬದುಕಿದ ಮೂರುದಶಕಗಳಲ್ಲಿ ಮೂರು ಮಹಾ ಚಳವಳಿಗಳನ್ನು ಸಂಘಟಿಸಿದರು. ಒಂದೊಂದಕ್ಕೂ ದಶಕದ ವ್ಯತ್ಯಾಸವಿತ್ತು. 20ರ ದಶಕದಲ್ಲಿ ಅಸಹಕಾರ ಚಳವಳಿ, 30ರ ದಶಕದಲ್ಲಿ ಉಪ್ಪಿನ ಸತ್ಯಾಗ್ರಹ, 40ರ ದಶಕದಲ್ಲಿ ಕ್ವಿಟ್ ಇಂಡಿಯಾ ಚಳವಳಿ. ಈ ಮೂರಕ್ಕೂ ಒಂದು ವಿನ್ಯಾಸವಿದೆ. ಮೊದಲನೆಯದು ನಿರಾಕರಣೆಯ ಚಳವಳಿ. ಎರಡನೆಯದ್ದು ಹಕ್ಕೊತ್ತಾಯದ ಚಳವಳಿ. ಮೂರನೆಯದು, ನೊಗ ಕಳಚಿ ಸ್ವತಂತ್ರವಾಗುವ ಕರೆ. ಈ ಮಧ್ಯೆ ನಡೆದ ಕೆಲಸವೇನು?

   
ನಮಗೆಲ್ಲರಿಗೂ ಕಾಣಿಸುತ್ತಿದೆ. ನಮ್ಮ ಗ್ರಾಮಗಳು ಗಾಂ ಕಂಡ, ಕನಸಿದ ಗ್ರಾಮ ಗಳಾಗಿ ಉಳಿದಿಲ್ಲ. ಗ್ರಾಮಗಳ ವಸತಿ ಭಾಗಗಳೆಲ್ಲಾ ನವವಸಾಹತು ಶಾಹಿಯ ಕಾಲನಿ ಗಳಾಗಿವೆ. ಈ ವಸಾಹತುಶಾಹಿ ತನ್ನ ಆಧುನಿಕ ಸರಕುಗಳನ್ನು ತಂದು ಬಿಕರಿ ಮಾಡುತ್ತಾ ಕೂತಿವೆ. ಗ್ರಾಮಗಳ ಭೌತಿಕ ಭೌಗೋಳಿಕ ಪ್ರದೇಶವೆಲ್ಲಾ ನಿಶ್ಚೇತನಗೊಂಡು ಕೂತಿದೆ. ಹಳ್ಳಿಗಳ ಬದಲಾವಣೆ ಒಂದು ಚಾರಿತ್ರಿಕ ಪ್ರಕ್ರಿಯೆ. ಆಧುನಿಕತೆಗೆ ತೆರೆದುಕೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ಮಾತು ನಿಜ. ನೂರು ವರ್ಷಗಳ ಹಿಂದೆ ಹಳ್ಳಿಗಳು ಜಾತಿಯ ಕೊಂಪೆಗಳಾಗಿದ್ದವು, ವೌಢ್ಯದ ಗೂಡುಗಳಾಗಿದ್ದವು ಎಂಬುದನ್ನು ನಾವು ಮರೆಯಬಾರದು. ಆದರೆ, ಇಲ್ಲೊಂದು ಸ್ವಸಂತೃಪ್ತ ಸಮುದಾಯವಿತ್ತು ಎಂಬ ವಿವರಗಳೂ ಇವೆ. ನಮ್ಮ ಸಾಹಿತ್ಯ, ಕಾವ್ಯಗಳಲ್ಲಿ ಈ ಗ್ರಾಮ ಭಾರತದ ರಮ್ಯ ಚಿತ್ರಣ ಒಂದೆಡೆಯಾದರೆ, ಇನ್ನೊಂದೆಡೆ ಅದರ ಕ್ರೌರ್ಯ, ಊಳಿಗಮಾನ್ಯ ಪಾಳೇಗಾರಿಕೆ ಚಿತ್ರಗಳೂ ಕಿಕ್ಕಿರಿದಿವೆ. ಇದೊಂದು ವೈರುಧ್ಯಗಳ ಗಂಡಬೇರುಂಡ. ಹೀಗೆ ನೋಡಿದರೆ ನೇತ್ಯಾತ್ಮಕ ಸಂಗತಿಗಳು ಗಿಜಿಗುಡುತ್ತಿದ್ದರೆ ಅತ್ತ ಕಡೆಯಿಂದ ನೋಡಿದರೆ ರಮ್ಯ ಚಿತ್ರ.

   ನಮ್ಮ ಬಹುಮುಖ್ಯ ಚಿಂತಕರ್ಯಾರೂ ನಮ್ಮ ಗ್ರಾಮಗಳನ್ನು ರಮ್ಯ ಸಮುದಾಯಗಳ ಭೌಗೋಳಿಕ ವಸತಿ ಸ್ಥಳವೆಂದು ವೈಭವೀಕರಿಸಲಿಲ್ಲ. ಬದಲು, ಅದನ್ನು ಆಧುನಿಕತೆಗೆ ಪರ್ಯಾಯವಾದ ನಾಗರಿಕತೆಯ ಕಚ್ಛಾ ಮಾದರಿಯಾಗಿ ಗ್ರಹಿಸಿದ್ದರು. ಗಾಂ ಗ್ರಾಮಗಳ ಬಗ್ಗೆ ಮಾತನಾಡಿದಾಗ ಅದನ್ನೆಂದೂ ವೈಭವೀಕರಿಸದೇ ಅದನ್ನು ಹೊಸ ಮೂಸೆಯಲ್ಲಿ ಮರು ನಿರ್ಮಿಸುವ ಪ್ರಸ್ತಾಪವನ್ನು ಇಟ್ಟರು. ಬಹುತೇಕ ಇದು ಗುರುದೇವ ಟಾಗೋರರ ಪ್ರಯೋಗಗಳ ಮುಂದುವರಿಕೆ. ಇದು ಮೂಲತಃ ಗ್ರಾಮೀಣ ಜೀವನೋಪಾಯಗಳನ್ನು ಪುನರ್ರೂಪಿಸಿ ತನ್ಮೂಲಕ ಸಾಮುದಾಯಿಕ ಸ್ವಾಯತ್ತತೆಯನ್ನು ಜಾಹೀರುಪಡಿಸುವ ಪ್ರಯತ್ನವಾಗಿತ್ತು. ಟಾಗೋರ್ ಅವರ ಪ್ರಯೋಗಗಳಲ್ಲಿ ಗ್ರಾಮವೊಂದರ ಸ್ವಾವಲಂಬನೆಗೆ ಬೇಕಾದ ಅಷ್ಟನ್ನೂ ಗ್ರಾಮದಲ್ಲೇ ಸೃಷ್ಟಿಸುವ ಪ್ರಯತ್ನವಿತ್ತು. ಇದು ತಾರ್ಕಿಕವಾಗಿ ಊಳಿಗಮಾನ್ಯ ಮತ್ತು ಜಾತಿಯ ಹಿಡಿತವನ್ನು ಸಡಿಲಗೊಳಿಸುತ್ತದೆ ಎಂಬುದು ಇಂಗಿತ.

 ಜಾತಿ ಕಸುಬು ಆಧಾರಿತ ಉತ್ಪಾದಕ ವ್ಯವಸ್ಥೆಯ ಬದಲು ಅವಶ್ಯವಿರುವ ವಸ್ತುಗಳ ಸಾಮುದಾಯಿಕ ಉತ್ಪಾದನೆಯ ಮಾದರಿ ಇದು. ಇವೆಲ್ಲಾ ಈಗ ಚರ್ಚೆಯ ವಸ್ತುಗಳಷ್ಟೇ. ಯಾಕೆಂದರೆ ಇಂತಹ ಮಾದರಿ ಮತ್ತೆ ಮರುಸೃಷ್ಟಿ ಮಾಡಲಾರದಷ್ಟು ದೂರಕ್ಕೆ ಜಾಗತೀಕರಣ ನಮ್ಮ ಗ್ರಾಮಗಳನ್ನು ಎಳೆದು ತಂದಿದೆ. ನಮ್ಮ ಗ್ರಾಮಗಳಲ್ಲಿ ವಿಶಿಷ್ಟ ಸೇವಾ ಕಸುಬುಗಳಿದ್ದವು. ಉದಾ: ಎತ್ತುಗಳ ಕಾಲಿಗೆ ಲಾಳ ಹೊಡೆಯುವ ಕೆಲಸ. ಕುಂಬಾರಿಕೆ, ಕಲಾಯಿ ಹಾಕುವುದು ಯಾಕೆ ಹೋಯಿತೆನ್ನುವುದು ನಮಗೆ ಗೊತ್ತು. ಇಂದೀಗ ಉಳಿದುಕೊಂಡಿರುವುದು ಈಗಾಗಲೇ ಹೇಳಿದ ಹಾಗೆ ಕೃಷಿ ಮತ್ತು ಪಶು ಸಂಗೋಪನೆ. ಈ ಎರಡು ಸಾಮುದಾಯಿಕ ಜೀವನೋಪಾಯಗಳೂ ಬಿಕ್ಕಟ್ಟಿನಲ್ಲಿವೆ. ಮೊನ್ನೆ ಮೊನ್ನೆಯಷ್ಟೇ, ಭಾರತ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂಬ ಸುದ್ದಿಯೊಂದಿಗೆ ಈಗಿರುವ ಹಸು ಎಮ್ಮೆಗಳ ಅರ್ಧದಷ್ಟು ಸಂಖ್ಯೆಯಲ್ಲಿ ಇಷ್ಟು ಹಾಲು ಉತ್ಪಾದಿಸಬಹುದು ಎಂಬ ಪರಿಣಿತರ ಸಲಹೆಯೂ ಬಂತು.!! ಹಳ್ಳಿಯ ಹೊಲ ಗದ್ದೆ, ಕೆರೆಕುಂಟೆ, ಗುಂಡುತೋಪು, ಗೋಮಾಳ- ಹೀಗೆ ನೆಲ-ಜಲ ಪರಿಸರಕ್ಕೂ ಸಮುದಾಯಕ್ಕೂ ಇದ್ದ ಸಾವಯವ ಸಂಬಂಧ ಕಳಚಿಕೊಳ್ಳುತ್ತಾ ಬಂದಿದೆ. ಈ ಭೌತಿಕ ಬಿರುಕು, ಒಂದು ಜೀವನ ಶೈಲಿಯ ವಿಘಟನೆಯ ಕುರುಹು ಕೂಡಾ.

   ಸಮಗ್ರ ಸ್ವಯಮಾಡಳಿತದ ಸಮುದಾಯವಾಗಿಸಲು ಮನಸ್ಸೇ ಮಾಡಲಿಲ್ಲ. ಅತ್ಯುತ್ತಮ ಪಂಚಾಯತ್ ರಾಜ್ ವ್ಯವಸ್ಥೆ ಎಂದು ನಂಬಲಾಗಿರುವ ಬಂಗಾಳ, ಕರ್ನಾಟಕದ ಮಾದರಿಗಳೂ ಸ್ವಯಮಾಡಳಿತದ ಪ್ರತೀಕವಾಗಿ ಬೆಳೆಯಲಿಲ್ಲ. ಸಂಪೂರ್ಣ ಅಕಾರವನ್ನು ರಾಜ್ಯ ಸರಕಾರದ ಬಿಗಿಯಲ್ಲಿಟ್ಟುಕೊಂಡು ಸಭೆ ನಡಾವಳಿಗಳ ಬೆದರುಗೊಂಬೆಗಳನ್ನು ಸೃಷ್ಟಿಸಿದ್ದು ಬಿಟ್ಟರೆ ಇನ್ನೇನು ಆಗಲಿಲ್ಲ. ಎಲ್ಲಿ ಏನು ಆಗಬೇಕು ಎಂಬುದನ್ನು ಹೇಳುವ ಕೆಲಸ ಮಾತ್ರ ಗ್ರಾಮಸ್ಥರದ್ದು. ಅದರ ಅನುಷ್ಠಾನ, ಹಣದ ನಿಯಂತ್ರಣ ಎಲ್ಲವೂ ರಾಜ್ಯ ಸರಕಾರದ್ದು. ಇದನ್ನು ಗ್ರಾಮೀಣಾಭಿವೃದ್ಧಿ ಎಂದು ಕರೆಯಲಾಗುತ್ತದೆ!! ಇದು ಮೂಲತಃ ಮಕ್ಕಳ ಕೈಹಿಡಿದು ಬರೆಸುವ ಮಾಯೀ-ಬಾಪ್ ಪ್ರವೃತ್ತಿಯ ಸಂಕೇತ. ಜನ ತಾವೇ ನಿಭಾಯಿಸಿಯಾರು ಎಂಬ ನಂಬುಗೆಯೇ ಗೈರುಹಾಜರಾಗಿರುವ ಸ್ಥಿತಿ ಇದು. ಈ ಪರಾವಲಂಬಿ ಸ್ಥಿತಿ ನಿರ್ಮಿಸುವ ಮೂಲಕ ಜಾಗತೀಕರಣದ ದಾಳಿಗೆ ಹಳ್ಳಿಗಳು ಸುಲಭದ ಬಲಿಯಾಗುವಂತೆ ನಮ್ಮ ಸರಕಾರ ಮಾಡಿದೆ. ಸ್ವತಃ ಜಾಗತೀಕರಣ ಮತ್ತು ಕಾರ್ಪೊರೇಟೀಕರಣಕ್ಕೆ ಮಣೆ ಹಾಕಿರುವ ನಮ್ಮ ಸರಕಾರಗಳು ಹಳ್ಳಿಗಳ ದನಕ್ಕೆ ಗುಂಡಿ ತೆಗೆಯುವ ಕೆಲಸ ಮುಂದುವರಿಸಿವೆ.

ಇದರೊಂದಿಗೆ ನಮ್ಮ ಗ್ರಾಮಗಳ ಸಾಮುದಾಯಿಕ ಸಂಪನ್ಮೂಲಗಳು ನಾಶವಾಗಿವೆ ಇಲ್ಲ ಕುಗ್ಗಿವೆ. ಎರಡು ಪುರಾವೆಗಳನ್ನು ನೋಡಿ. ನಮ್ಮ ಗ್ರಾಮಗಳ ಪಶು ಸಂಪತ್ತು ಗಣನೀಯವಾಗಿ ಕಡಿಮೆಯಾಗಿದೆ. ಎರಡನೆಯದು, ಕುಡಿಯುವ ನೀರಿಗೆ ಅಂತರ್ಜಲವನ್ನೇ ಅವಲಂಬಿಸಲಾಗಿದೆ. ತೆರೆದ ಬಾವಿಗಳು, ಕೆರೆಗಳು ಎಲ್ಲಿ ಹೋದವು?

ಭೂಹಿಡುವಳಿ ಎಷ್ಟು ಚಿಕ್ಕದಾಗಿದೆಯೆಂದರೆ ರಾಜ್ಯದ ಮುಕ್ಕಾಲು ಪಾಲು ರೈತರೂ ಸಣ್ಣ /ಅತೀ ಸಣ್ಣ ರೈತರು. ಅಂಕಿಅಂಶಗಳ ಪ್ರಕಾರ ಈ ಕುಟುಂಬಗಳ ಒಟ್ಟು ಆದಾಯದ ಅರ್ಧದಷ್ಟು ಕೂಡಾ ಕೃಷಿಯಿಂದ ಬರುತ್ತಿಲ್ಲ. (ಸುಮಾರು ಶೇ.40ರಷ್ಟು ಮಾತ್ರ) ಉಳಿದ ಆದಾಯ ಕೂಲಿಯಿಂದ; ಸ್ವಲ್ಪ ಮಟ್ಟಿಗೆ ಪಶುಸಂಗೋಪನೆಯಿಂದ ಬರುತ್ತಿದೆ. ಈ ವೈರುಧ್ಯ ಯಾವ ಸ್ವರೂಪ ತಾಳಿದೆಯೆಂದರೆ ಅನ್ನ ಬೆಳೆಯುವವನೇ ಪಡಿತರಕ್ಕೂ ಕ್ಯೂ ನಿಲ್ಲುವ ಸ್ಥಿತಿ ಇದೆ. ಇದು ವಿಪರ್ಯಾಸ ಎಂದು ನಮ್ಮ ಸರಕಾರಕ್ಕೆ ಅನ್ನಿಸಿಯೇ ಇಲ್ಲ. ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಕೃಷಿಯ ಪರಾವಲಂಬನೆಯನ್ನು ಸರಕಾರ ಆದ್ಯ ನೀತಿಯಾಗಿ ಮುಂದೊತ್ತುತ್ತಾ ಬಂದ ಕಾರಣ, ಇಂದು ಸ್ವಾವಲಂಬಿ ಕೃಷಿ ಎನ್ನುವುದು ಅಲ್ಲೊಬ್ಬ ಇಲ್ಲೊಬ್ಬ ಮಾಡುತ್ತಿರುವ ಸಾವಯವ ಕೃಷಿಯ ಮಟ್ಟಿಗೆ ಸೀಮಿತವಾಗಿದೆ.

ಶೇ.99ರಷ್ಟು ರೈತರು ಸ್ವಾಯತ್ತತೆಯನ್ನು ಕಳೆದುಕೊಂಡು ವರ್ಷಗಳೇ ಕಳೆದಿವೆ.
ಗ್ರಾಮಾಡಳಿತದ ಸೂತ್ರದಲ್ಲಿ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವಾಗ ಅದಕ್ಕೆ ಬೇಕಾದ ಸಾಂಸ್ಥಿಕ, ಸಾಮುದಾಯಿಕ ರೂಪಾಂತರಗಳಿಗೆ ಒತ್ತು ಕೊಡದೇ, ಮತ್ತೆ ಈರ್ಷ್ಯೆ, ಜಿದ್ದಿನ ಮನಃಸ್ಥಿತಿಯ ಮೇಲ್ಜಾತಿಗಳ ಪಾಳೇಗಾರಿಕೆಯನ್ನು ಹೆಚ್ಚು ಆಧುನಿಕಗೊಳಿಸಿದೆ. ವಿರಾಜಪೇಟೆಯ ಪಂಚಾಯತ್‌ನ ಅಧ್ಯಕ್ಷೆಯ ದುಸ್ಥಿತಿ ಇಂತಹ ಒಂದು ರೂಪಕ. ಜನಪ್ರಾತಿನಿಧ್ಯದ ನೆಪದಲ್ಲಿ ನುಸುಳಿದ ಪಕ್ಷ ರಾಜಕಾರಣ ಗ್ರಾಮ ಗ್ರಾಮಗಳಲ್ಲೂ ಮರಿಪುಢಾರಿಗಳನ್ನೂ, ಪೆಟ್ಟಿ ಕಂಟ್ರಾಕ್ಟರುಗಳನ್ನೂ ಹುಟ್ಟಿ ಹಾಕಿದೆ. ಪಂಚಾಯತ್ ಚುನಾವಣೆಗೆ ಲಕ್ಷಗಟ್ಟಲೆ ಖರ್ಚು ಮಾಡುವ ಪ್ರವೃತ್ತಿ ಮತ್ತು ಧೈರ್ಯ ಹುಟ್ಟಿದ್ದೇ ಈ ಸಾಧ್ಯತೆಯಿಂದ. ಯಾವ ಸರಕಾರವೂ ಇದು ಗ್ರಾಮಗಳಲ್ಲಿ ತರಬಹುದಾದ ಆತ್ಯಂತಿಕ ಅಪಾಯಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನ್ನೊಂದೆಡೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶ ಮಾಡುತ್ತಿರುವ ಬಗ್ಗೆ ಈಗಾಗಲೇ ಬಹಳಷ್ಟು ಬರಹಗಳು ಬಂದಿವೆ. ಗ್ರಾಮಾಂತರದ ಮಕ್ಕಳ ಶಿಕ್ಷಣದ ಬುನಾದಿ ಮತ್ತು ಆಸರೆಯಾಗಿರುವ ನಮ್ಮ ಸರಕಾರಿ ಶಾಲೆಗಳನ್ನು ಉಸಿರುಗಟ್ಟಿಸಿ ಮುಚ್ಚುವ ವ್ಯವಸ್ಥಿತ ಪ್ರಯತ್ನದ ಪರಿಣಾಮಗಳ ಪುರಾವೆ ಸಿಗುವುದು ಉಚ್ಚ ಶಿಕ್ಷಣದಲ್ಲಿ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಮಾತಾಡಿಸಿದರೆ, ತಮಗಿರುವ ಅವಕಾಶ ಮತ್ತು ತಮಗೇನು ಕಾದಿದೆ ಎನ್ನುವುದೆರಡೂ ಅವರಿಗೆ ಗೊತ್ತಿರುವಂತಿದೆ.

ಈ ಮನೋಸ್ಥಿತಿ ಅಪಾಯಕಾರಿ. ಬಹಳಷ್ಟು ಹುಡುಗರು lumpen ಎನ್ನುವ ಕೆಟಗರಿಗೆ ಸೇರಲು ಬಹಳ ಸಮಯ ಬೇಕಾಗಿಲ್ಲ. ನಮ್ಮ ಶಿಕ್ಷಣ ಅದರಲ್ಲೂ ಉಚ್ಚ ಶಿಕ್ಷಣ ನಗರದಲ್ಲಷ್ಟೇ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ನೇರವಾಗಿ ಸೂಚಿಸುತ್ತಿದೆ. ಎಲ್ಲಾ ಪಠ್ಯ ಹೂರಣವೂ ಈ ದಿಕ್ಕಿಗೇ ಇದೆ. ಆದರೆ ನಗರಗಳಲ್ಲಿರುವ ಆಧುನಿಕ ಉದ್ಯೋಗ ಜಾಲಗಳು ಬಯಸುವ ಯಾವ ಕೌಶಲವನ್ನೂ ಈ ಶಿಕ್ಷಣ ಕಲಿಸಿ ಕೊಡುತ್ತಿಲ್ಲ. ಇತ್ತ ಕೃಷಿ ಎಷ್ಟು ದುರ್ಭರವಾಗಿದೆಯೆಂದರೆ ಯಾವೊಬ್ಬ ಹೆತ್ತವನೂ ತನ್ನ ಮಕ್ಕಳೂ ಹಳ್ಳಿಯಲ್ಲಿ ಇರಬೇಕೆಂದು ಆಶಿಸುತ್ತಿಲ್ಲ. ವಿರುದ್ಧ ಗತಿಯಲ್ಲಿ ಎಳೆದಾಡಿದರೆ ಪರವಾಗಿಲ್ಲ. ಇದು ಹಾಗಲ್ಲ. ನಗರ ಸೆಳೆದರೆ, ಹಳ್ಳಿ ಹೊರತಳ್ಳುತ್ತಿದೆೆ. ಸದ್ಯ ಈ ಚಲನೆಗೆ ಒತ್ತಾಸೆ ಕೊಟ್ಟರೆ ಮುಂದೆ ಹೇಗೋ ನಿಭಾಯಿಸಬಹುದು ಎಂಬ ಲೆಕ್ಕ ಸರಕಾರದ್ದು. ಮೂಲಭೂತ ಸೌಕರ್ಯಗಳ ತರ್ಕ ತೆಗೆದುಕೊಳ್ಳಿ. ಹಳ್ಳಿಯ 10 ಚದರ ಕಿ.ಮೀ.ನಲ್ಲಿರುವ ಸಾವಿರ ಮಂದಿಯನ್ನು ನಗರದ 1ಚ.ಕಿ.ಮೀ.ನಲ್ಲಿ ತುಂಬಿದರೆ, ವಿದ್ಯುತ್ ಕಂಬ, ರಸ್ತೆ, ಕುಡಿಯುವ ನೀರಿನ ಪೈಪ್, ಬಸ್ಸು, ಹೀಗೆ ಸೌಕರ್ಯಗಳ ವಸ್ತು ವಿಶೇಷಗಳು ಕಡಿಮೆ ಸಾಕು. ಅರ್ಥಾತ್ ಸರಕಾರ ಕಡಿಮೆ ಬಂಡವಾಳ ಹಾಕಿದರೆ ಸಾಕು.

ಆದರೆ ಇದಕ್ಕಿಂತ ಹೆಚ್ಚು ಆಘಾತಕಾರಿ ಪರಿಣಾಮ ಸಾಂಸ್ಕೃತಿಕ ಸಾಮಾಜಿಕ ನೆಲೆಯದ್ದು. ಜಾತಿಗಳು ಸಂಘಟಿತವಾಗುತ್ತಿರುವ ರೀತಿ ಒಂದಾದರೆ, ಮೇಲ್ಜಾತಿಗಳು ದಮನದ ಗುರಿಯಾಗಿ ಹೊಸ ಹೊಸ ವಿಷಯಗಳನ್ನು ಆತುಕೊಳ್ಳುತ್ತಿರುವುದು ಗಮನಿಸಬೇಕು. ಹಸುವಿನ ರಾಜಕೀಯ, ಮೀಸಲಾತಿಯ ಗೊಣಗಾಟ ಎರಡು ಹೆಸರಿಸಬಹುದಾದ ವಿಷಯಗಳು. ಇದರ ಹಿಂದೆ ಹಿಂದುತ್ವದ ಪ್ರಭಾವದ ಛಾಯೆ ನಿಚ್ಚಳವಾಗಿದೆ. ಪಶು ಸಂಪತ್ತು ಕೃಷಿಗೆ ಅನಿವಾರ್ಯವಲ್ಲ ಎಂಬುದನ್ನು ನಮ್ಮ ಸರಕಾರದ ಕೃಷಿ ನೀತಿ ಸತತವಾಗಿ ಮುಂದೊತ್ತಿಕೊಂಡು ಬಂದಿದೆ. ಇದನ್ನು ಹಸಿರು ಕ್ರಾಂತಿಯೆಂದು ಕರೆಯಲಾಯಿತು ಅಲ್ಲವೇ?. ಪಶುವಿನಿಂದ ಉಳುಮೆ ಬಿಡಿ ಗೊಬ್ಬರದ ಆವಶ್ಯಕತೆಯೂ ಇಲ್ಲ. ಹಿಡಿ ರಾಸಾಯನಿಕ ಎರಚಿದರೆ ಸಾಕು ಅನ್ನುವುದನ್ನು ಹೇಳಿಕೊಟ್ಟ ಮೇಲೆ ಪಶು ಅಸಂಗತವಾಯಿತು. ಈಗ ಅದನ್ನುಳಿಸುವುದೆಂದರೆ ‘ಅನ್ಯ’ರ ಮೇಲೆ ಹಲ್ಲೆ ಮಾಡುವುದೆಂಬ ಭ್ರಮಾೀನ ಉನ್ಮತ್ತತೆಗೆ ನೀರೆರೆಯಲಾಗುತ್ತಿದೆ. ಕೃಷಿಯಲ್ಲಿ ಪಶುವನ್ನು ಅಪ್ರಸ್ತುತಗೊಳಿಸಿದ್ದನ್ನು ಮರೆಮಾಚಲಾಗುತ್ತಿದೆ.

ಈಗ ನಮ್ಮ ಗ್ರಾಮ ಭಾರತದಲ್ಲಿ ಉಳಿದುಕೊಂಡಿ ರುವುದೇನು? ಬಂಜೆ ಮಣ್ಣು, ತ್ಯಾಜ್ಯ ತುಂಬಿದ ಇಲ್ಲಾ ಒಣಗಿದ ಕೆರೆಗಳು. ಆಲದ ಮರವು ಇಲ್ಲದ ಹೊಲಗಳು. ವೃದ್ಧರಷ್ಟೇ ಇರುವ ಹಳ್ಳಿಗಳು. ಎಲ್ಲದಕ್ಕೂ ಸರಕಾರಕ್ಕೆ ದುಂಬಾಲು ಬೀಳುತ್ತಿರುವ ಸಮುದಾಯ.

  ಗಾಂ ಮತ್ತೆ ನೆನಪಾಗುವುದು ಇಲ್ಲೇ. ಗಾಂ ತಾವು ಭಾರತದಲ್ಲಿ ಬದುಕಿದ ಮೂರುದಶಕಗಳಲ್ಲಿ ಮೂರು ಮಹಾ ಚಳವಳಿಗಳನ್ನು ಸಂಘಟಿಸಿದರು. ಒಂದೊಂದಕ್ಕೂ ದಶಕದ ವ್ಯತ್ಯಾಸವಿತ್ತು. 20ರ ದಶಕದಲ್ಲಿ ಅಸಹಕಾರ ಚಳವಳಿ, 30ರ ದಶಕದಲ್ಲಿ ಉಪ್ಪಿನ ಸತ್ಯಾಗ್ರಹ, 40ರ ದಶಕದಲ್ಲಿ ಕ್ವಿಟ್ ಇಂಡಿಯಾ ಚಳವಳಿ. ಈ ಮೂರಕ್ಕೂ ಒಂದು ವಿನ್ಯಾಸವಿದೆ. ಮೊದಲನೆಯದು ನಿರಾಕರಣೆಯ ಚಳವಳಿ. ಎರಡನೆಯದ್ದು ಹಕ್ಕೊತ್ತಾಯದ ಚಳವಳಿ. ಮೂರನೆಯದು, ನೊಗ ಕಳಚಿ ಸ್ವತಂತ್ರವಾಗುವ ಕರೆ. ಈ ಮಧ್ಯೆ ನಡೆದ ಕೆಲಸವೇನು?
   ದೊಡ್ಡ ಗುರಿಯ ಆಶಯದ ಸಂಕೇತಗಳನ್ನು ಮನೆಮನಗಳಲ್ಲಿ ಸ್ಥಾಪಿಸುವ ಪ್ರಕ್ರಿಯೆ ನಡೆಯಿತು. ಸ್ವಾವಲಂಬನೆಯ ಪ್ರತೀಕವಾಗಿ ನೂಲು ತೆಗೆವ ಕೆಲಸ, ಆತ್ಮ ವಿಮರ್ಶೆಯ ಸಂಕೇತವಾಗಿ ಗ್ರಾಮ ಶುಚಿತ್ವ, ಹರಿಜನೋದ್ಧಾರ ಇತ್ಯಾದಿ. ಇವೆಲ್ಲದಕ್ಕು ಮೇಲ್ಜಾತಿಗಳ ಪೂರ್ಣ ಸಹಮತವಿತ್ತೋ ಎಂದು ಕೇಳಿದರೆ ನಕಾರಾತ್ಮಕ ಉತ್ತರವೇ ಸರಿ. ಆದರೆ ಗಾಂಯ ಪ್ರಭಾವ ಹೇಗಿತ್ತೆಂದರೆ ಬಹುತೇಕ ಮೇಲ್ಜಾತಿಯವರಿಗೆ ಪರಂಪರೆಯ ನೆಪದಲ್ಲಿ ಇದನ್ನೆಲ್ಲಾ ವಿರೋಸುವ ನೈತಿಕ ಧೈರ್ಯವಿರಲಿಲ್ಲ. ಸ್ವಾತಂತ್ರ್ಯ ದೊರಕುವ ಕಾಲಕ್ಕೆ ಭಾರತ ಆ ಕಾಲದ ಅತ್ಯಂತ ಪುರೋಗಾಮಿ ಸಂವಿಧಾನ ಪಡೆದಿದ್ದು ಈ ಕಾರಣಕ್ಕೆ.

 ಇಂದು ನಮ್ಮ ಗ್ರಾಮಗಳನ್ನು ಉಳಿಸಿಕೊಳ್ಳುವುದೆಂದರೆ ಸರಕಾರದ ಮಟ್ಟಿಗೆ ಆಹಾರೋತ್ಪಾದನೆಯನ್ನು ಉಳಿಸಿಕೊಳ್ಳುವುದೆಂದರ್ಥ. ಆಫ್ರಿಕಾ ದೇಶಗಳಂತೆ ಜನ ಸಂಖ್ಯೆ ಕಮ್ಮಿ ಇದ್ದಿದ್ದರೆ ಈಗಾಗಲೇ ಕಾರ್ಪೊರೇಟ್ ಕೃಷಿ ಜಾರಿಯಾಗುತ್ತಿತ್ತು. ಸರಕಾರದ ದುರದೃಷ್ಟಕ್ಕೆ, ನಮ್ಮ ಗ್ರಾಮಗಳು, ಅತೀ ಹೆಚ್ಚಿನ ಬಡವರನ್ನೂ ದಲಿತರನ್ನೂ, ಕೃಷಿ ಬಿಟ್ಟು ಇನ್ಯಾವ ಕೌಶಲ್ಯವೂ ಇಲ್ಲದ ಕೋಟ್ಯಂತರ ಜನರಿಂದ ತುಂಬಿದ ಕಾರಣ, ಒಲ್ಲದ ಮನಸ್ಸಲ್ಲಿ ಏನೇನೋ ಕಲ್ಯಾಣ ಕ್ರಮಗಳನ್ನು ಕೈಗೆತ್ತಿಕೊಳ್ಳಲೇ ಬೇಕಾದ ಸ್ಥಿತಿ ಇದೆ. ಉದ್ಯೊಗ ಖಾತ್ರಿಯಿಂದ ಹಿಡಿದು ಅನ್ನಭಾಗ್ಯದವರೆಗೂ ಇದೇ ಧೋರಣೆ. ಸರಕಾರದ ಮೂಲಧ್ಯಾನ ಮತ್ತು ಆಸಕ್ತಿಯನ್ನು ನೋಡಲು ಮಧ್ಯಭಾರತದ ಆದಿವಾಸಿ ಬಿಕ್ಕಟ್ಟನ್ನು ಗಮನಿಸಬೇಕು. ಕಾರ್ಪೊರೇಟ್‌ಗಳಿಗೆ ಬೇಕಾದ ಕಚ್ಛಾ ಮಾಲು ಲಭ್ಯವೆಂದಾದಲ್ಲಿ ಸರಕಾರ ಈ ಗ್ರಾಮೀಣ ಸಮುದಾಯಗಳನ್ನು ನಿಷ್ಕರುಣೆಯಿಂದ ಹೊರಹಾಕುತ್ತದೆ. ಮಣ್ಣು ಬಿಟ್ಟು ಬೇರೇನೂ ಇಲ್ಲದ ಕಾರಣ ನಮ್ಮ ಬಹುತೇಕ ಹಳ್ಳಿಗಳು ಇನ್ನೂ ಉಳಿದುಕೊಂಡಿವೆ. ನಗರೀಕರಣದ ಅಮಲಿನಲ್ಲಿ ತರ ಹೊರಟ ಭೂಸ್ವಾೀನ ಕಾಯ್ದೆಯು ಇಂಥಾ ಮನಃಸ್ಥಿತಿಯ ಪುರಾವೆ. ಇಂಥಾ ಬಿಕ್ಕಟ್ಟಿನ ಈ ದಿನಗಳು ಇನ್ನಷ್ಟು ಬಿಗಡಾಯಿಸಲಿವೆ.

ಯಾಕೆಂದರೆ ನಮ್ಮ ರಾಜಕೀಯ ವ್ಯವಸ್ಥೆಯ ಯಾವ ಗುಂಪೂ ಜಾಗತೀಕರಣವನ್ನು ವಿರೋಸುತ್ತಿಲ್ಲ. ಈ ಸರ್ವಾನುಮತವನ್ನು ಪಡೆದ ಹೊಸ ಆರ್ಥಿಕತೆಯ ಆಟದಲ್ಲಿ ವಿಕೇಂದ್ರೀಕರಣ, ಗ್ರಾಮ ಸಮುದಾಯಗಳ ಸರಳ ಜೀವನ ಶೈಲಿ, ನೆಲ-ಜಲದ ಆರೋಗ್ಯ ಮುಖ್ಯವಾಗಿರಿಸಿಕೊಂಡ ಉತ್ಪಾದಕ ವ್ಯವಸ್ಥೆ-ಇವ್ಯಾವುದೂ ಉಳಿಯುವುದು ಕಷ್ಟ. ಇದರ ವಿರುದ್ಧ ಪರ್ಯಾಯವನ್ನು ಕಟ್ಟುವುದೆಂದರೆ, ರಾಜ್ಯಶಕ್ತಿಯ ಜೊತೆ ಮಾತ್ರ ಅಲ್ಲ, ಅದನ್ನು ನೊಗಕ್ಕೆ ಕಟ್ಟಿ ಬಂಡಿಯೇರಿರುವ ಜಾಗತೀಕರಣದ ಶಕ್ತಿಗಳ ವಿರುದ್ಧ, ಈ ಮುಕ್ತ ಆರ್ಥಿಕತೆ ನಮಗೆ ಸ್ವರ್ಗ ಕಾಣಿಸುತ್ತದೆ ಎಂದು ನಂಬಿರುವ ಮಧ್ಯಮ ವರ್ಗ -ಇವೆಲ್ಲದರ ಜೊತೆ ಸೆಣಸಾಡಬೇಕಾಗಿದೆ.

      ಗಾಂಧಿಯ ಚಳವಳಿಗಳ ಸಾಂಕೇತಿಕತೆಯನ್ನು ನೆನಪಿಸುವುದಾದಲ್ಲಿ, ನಿರಾಕರಣೆಯ ಧೋರಣೆಯನ್ನು ನಾವು ಬೆಳೆಸಬೇಕಿದೆ. ಗ್ರಾಮಾಂತರದಲ್ಲಿ ಇದು ಮುಖ್ಯವಾಗಬೇಕು. ನಗರದ ಮಂದಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದರು, ಗ್ರಾಹಕರಾಗಿಯೇ ಮುಂದುವರಿದಿದ್ದಾರೆ. ಅಲ್ಲಿ ಇದನ್ನು ಛಾಪಿಸಬೇಕಾದ ತಂತ್ರಗಳು ಬೇರೆಯೇ. ಆದರೆ ಗ್ರಾಮಾಂತರಕ್ಕೆ ನಗರದ ಉತ್ಪನ್ನಗಳು ಸುರಿಯತೊಡಗಿದ್ದು ವಸಾಹತುಶಾಹಿ ಆಡಳಿತದ ಬಳಿಕ. ಉತ್ಪಾದಕ ಕೇಂದ್ರಗಳಾಗಿದ್ದ ನಮ್ಮ ಗ್ರಾಮ ಭಾರತವನ್ನು ಬಡಗ್ರಾಹಕರನ್ನಾಗಿ ಪರಿವರ್ತಿಸಿದ ದುರಂತ ಈ ದೇಶದ ಭವಿಷ್ಯವನ್ನು ಇನ್ನಿಲ್ಲದಂತೆ ಕಾಡಲಿದೆ. ಆದ್ದರಿಂದ ನಿರಾಕರಣೆಯ ಹೆಜ್ಜೆಯಿಂದಲೇ ಗ್ರಾಮಗಳ ಪುನಶ್ಚೇತನ ಆರಂಭವಾಗಬೇಕಿದೆ. ಹಳ್ಳಿಯಿಂದ ಯಾವ್ಯಾವುದಕ್ಕೆಲ್ಲಾ ದುಡ್ಡು ಹೊರಹರಿಯುತ್ತದೆಂಬ ಲೆಕ್ಕಹಾಕಿದರೆ ಇದು ಗೊತ್ತಾಗುತ್ತದೆ. ನಾನು ನಡೆಸುತ್ತಿರುವ ಗ್ರಾಮಾಂತರದ ಕಾಲೇಜು ವಿದ್ಯಾರ್ಥಿಗಳೊಂದಿಗಿನ ಸಂವಾದವೊಂದರಲ್ಲಿ ಇದನ್ನು ಪಟ್ಟಿ ಮಾಡಲು ಹೇಳಿದರೆ, ಹತ್ತು ಬೆರಳು ಸಾಕಾಗಲಿಲ್ಲ..!! ದುರಂತದ ಬೀಜ ಎಲ್ಲಿದೆ ಎಂಬುದಕ್ಕೆ ಬೇರೆ ಸಾಕ್ಷ್ಯ ಬೇಕಿಲ್ಲ..

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top