ಆ ಮನರಂಜನೆಯ ರಾಜಧಾನಿ
-

ಜಗತ್ತಿನ ಉದ್ದಗಲಕ್ಕೂ ಚಲನಚಿತ್ರ ಗ್ಲಾಮರ್ ಎಷ್ಟೊಂದು ವ್ಯಾಪಕಗೊಳ್ಳುತ್ತಿದೆ. ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವವರೆಲ್ಲ ದೇವಾನುದೇವತೆಗಳು ಎಂದು ಭಾವಿಸಿಕೊಂಡಿರುವ ಬಹುಪಾಲು ಜನರ ಮಧ್ಯೆ ಮತ್ತಷ್ಟು ಗ್ಲಾಮರನ್ನು ಹಂಚುವುದು ತುಂಬ ಸುಲಭ. ಒಮ್ಮಾಮ್ಮೆ ಯೋಚಿಸುವೆ: ಒಂದು ಕಾಲದಲ್ಲಿ ನಾನೂ ಕೂಡ ಅಂಥ ಹುಚ್ಚನ್ನು ಬೆಳೆಸಿಕೊಂಡಿದ್ದವನೇ ಅನ್ನಿಸುತ್ತದೆ. ಆದರೆ ಅಂದು ಬಹುಪಾಲು ಚಿತ್ರಗಳು ಪ್ರೀತಿ, ಪ್ರೇಮ ಮತ್ತು ಕುಟುಂಬ ವ್ಯವಸ್ಥೆಯ ಅನನ್ಯತೆಯನ್ನು ತುಂಬಿಕೊಂಡಿದ್ದರಿಂದ ತೆಳುವಾದ ಆದರ್ಶ ಮನಸ್ಸಿನಲ್ಲಿ ಆವರಿಸಿಕೊಳ್ಳುತ್ತಿತ್ತು. ಹಿಂಸೆಯನ್ನು ವ್ಯಾಪಕಗೊಳಿಸುವ ವಾತಾವರಣವಂತೂ ಇರಲಿಲ್ಲ. ಕಳ್ಳನಾಯಕರೂ ಕೂಡ ಬದಲಾಗುವ ಚಿತ್ರಗಳೇ ಜಾಸ್ತಿ ಇರುತ್ತಿದ್ದವು. ಇರಲಿ ಅದರ ವ್ಯಾಖ್ಯಾನಕ್ಕೆ ಹೋಗುವುದಕ್ಕಿಂತ ನೇರವಾಗಿ ಅಮೆರಿಕಾದ ಕ್ಯಾಲಿಫೋರ್ನಿಯ ಪ್ರಾಂತದ ‘ಲಾಸ್ ಎಂಜಲೀಸ್’ಗೆ ಹೋಗುವುದು ಒಳ್ಳೆಯದು. ಆದರೆ ‘ಲಾಸ್ ಏಂಜಲೀಸ್’ ನಗರ ಒಂದು ರೀತಿಯದ್ದಾದರೆ, ಈ ಚಲನಚಿತ್ರಗಳನ್ನು ನಿರ್ಮಾಣ ಮಾಡುವ, ಸ್ಟುಡಿಯೋಗಳನ್ನು ತುಂಬಿಕೊಂಡಿರುವ ನಗರವಂತೂ ಹುಚ್ಚೆಬ್ಬಿಸುವಂಥದ್ದು. ಅದರಲ್ಲೂ ಮಧ್ಯಮವರ್ಗ ಮತ್ತು ಕೆಳವರ್ಗದ ಜನಕ್ಕೆ ಹೀಗೂ ಇರಲು ಸಾಧ್ಯವಾ? ಎಂಬ ಪ್ರಶ್ನೆಗಳ ಸರಮಾಲೆಯನ್ನು ತುಂಬಿ ಕಳಿಸುವಂಥ ಪ್ರದೇಶ.
‘ಲಾಸ್ ಏಂಜಲೀಸ್’ನ ಪ್ರವೇಶ ದ್ವಾರದಲ್ಲಿಯೇ ಕ್ಯಾಪಿಟಲ್ ಸಿಟಿ ಆಫ್ ಎಂಟರ್‌ಟೈನ್‌ಮೆಂಟ್’ ಎಂದು ಬಹುದೊಡ್ಡ ಕಲಾತ್ಮಕ ನಾಮಫಲಕ ವಿಜೃಂಭಿಸುತ್ತಿರುತ್ತದೆ. ಅಲ್ಲಿಂದಲೇ ಪ್ರಾರಂಭವಾಗುವುದು ಕ್ಯಾಮರಾಗಳ ಕ್ಲಿಕ್ಕುಗಳು ಹಾಗೂ ಮೊಬೈಲ್‌ಗಳಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುವುದು. ಇಲ್ಲಿ ಮತ್ತೊಂದು ಸ್ವಾರಸ್ಯವೆಂದರೆ, ಕ್ಯಾಮರಾಗಳಲ್ಲಿ ಹಾಗೂ ಮೊಬೈಲ್‌ಗಳಲ್ಲಿ ಕ್ಲಿಕ್ ಅನ್ನಿಸಿಕೊಳ್ಳುವ ಸಮಯದಲ್ಲಿ; ಶೈಲಿಬದ್ಧವಾಗಿ ನಿಲ್ಲುವುದೂ ಕೂಡ ಆವರಿಸಿಕೊಂಡು ಬಿಟ್ಟಿರುತ್ತದೆ. ಸರಿಯಾಗಿ ಓಡಾಡಲು ಆಗದ ರೀತಿಯ ಜನನಿಬಿಡತೆ. ಎಲ್ಲ ಭಾಷೆ, ಸಂಸ್ಕೃತಿಯ ವೈವಿಧ್ಯಮಯವಾದ ಮುಖಗಳೆಲ್ಲ ಅಲ್ಲಿ ಪ್ರದರ್ಶನಗೊಂಡಿರುತ್ತದೆ. ಅದಕ್ಕೆ ತಕ್ಕ ವೇಷ ಭೂಷಣವೂ ಕೂಡ ಎಷ್ಟು ಆಕರ್ಷಕಗೊಂಡಿರುತ್ತದೆ. ಇಲ್ಲಿ ತುಂಬಿ ತುಳುಕುವ ಮನರಂಜನೆಯಿಂದ ಆಯಾಸವನ್ನೇ ಕಾಣದ ನಗುಮುಖಗಳು, ತಲೆಬಿಸಿಯಾಗುವ ರೀತಿಯಲ್ಲಿ ಪ್ರಖರ ಬಿಸಿಯಿದ್ದರೂ; ಅದೇನೂ ಅಲ್ಲ ಎಂಬ ಭಾವನೆಯಿಂದ ಬಣ್ಣ ಬಣ್ಣದ ಕ್ಯಾಪುಗಳ ಮೊರೆ ಹೋಗಿರುತ್ತಾರೆ. ಪ್ರತಿದಿನದ ಲಕ್ಷಾಂತರ ಮಂದಿಯನ್ನು ಬರಮಾಡಿಕೊಳ್ಳುವ ಈ ‘ಲಾಸ್ ಏಂಜಲೀಸ್’ ವಿವಿಧ ಮಾದರಿಗಳಲ್ಲಿ ಗ್ಲಾಮರನ್ನು ಮಾರುತ್ತಲಿದೆ. ಎಷ್ಟೋ ಮಂದಿ ಇದನ್ನು ನೋಡಿ ತಮ್ಮ ಬದುಕು ಸಾರ್ಥಕವಾಯಿತು ಎಂದು ತಿಳಿಯುವವರು ಇದ್ದಾರೆ. ಇದು ಸ್ವಾಭಾವಿಕವೂ ಇರಬಹುದು. ಹಾಗೆ ನೋಡಿದರೆ ಲಾಸ್‌ವೇಗಾಸ್ ನಗರ ಒಂದು ರೀತಿಯ ಹುಚ್ಚು ನಗರವಾದರೆ, ಇದೊಂದು ರೀತಿಯ ನಗರ. ಗ್ಲಾಮರ್ ಎಂಬುದನ್ನು ಬಹುದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿಯೇ ಬದುಕುತ್ತಿರುವ ನಗರಗಳಿವು. ಲಾಸ್‌ಏಂಜಲೀಸ್ ಅಂತೂ ಜಗತ್ತಿನ ಎಲ್ಲ ಕಡೆಯೂ ಚಲನ ಚಿತ್ರಗಳೆಂಬುದು ಪ್ರಧಾನಪಾತ್ರವನ್ನು ನಿರ್ವಹಿಸುತ್ತಿರುವುದರಿಂದ, ಮತ್ತಷ್ಟು ಮಾನಸಿಕ ಸರಕನ್ನು ರವಾನಿಸುವುದು ತುಂಬಾ ಸುಲಭವಾಗಿರುತ್ತದೆ.
ಈ ದೃಷ್ಟಿಯಿಂದ ನಮ್ಮ ನೆರೆರಾಜ್ಯವಾದ ತಮಿಳುನಾಡು. ಚಲನಚಿತ್ರ ಸಂಸ್ಕೃತಿಯಿಂದಲೇ ಎಷ್ಟೊಂದು ಮಂದಿಯನ್ನು ರಾಜ್ಯವನ್ನಾಳಲು ಕಳಿಸಿಕೊಟ್ಟಿದೆ. ಈ ಸಂಸ್ಕೃತಿಯನ್ನು ಮತ್ತಷ್ಟು ವರ್ಣಮಯಗೊಳಿಸಲು ಅಥವಾ ಜೀವಂತವಾಗಿಡಲು ಎಂಬಂತೆ; ಬಹು ದೊಡ್ಡ ಗುಂಪು ಲಾಸ್ ಏಂಜಲೀಸ್‌ನಲ್ಲಿ ಪರಿಚಯವಾಯಿತು. ಎಲ್ಲರೂ ಬಿಳಿಯ ಷರ್ಟು ಮತ್ತು ಪಂಚೆಗಳಲ್ಲಿ ಕಂಗೊಳಿಸುತ್ತಿದ್ದವರು. ಅದಕ್ಕೆ ವಿರುದ್ಧವಾದ ಬಣ್ಣದ ಸೀರೆಗಳಲ್ಲಿದ್ದವರು ಅವರ ಕುಟುಂಬದವರು. ಸುಮ್ಮನೆ ಅವರನ್ನು ಪರಿಚಯ ಮಾಡಿಕೊಂಡೆ. ಅವರೆಲ್ಲ ‘ರಿಯಲ್ ಎಸ್ಟೇಟ್’ ಸಂಘದಿಂದ ಬಂದವರು ರಾಜ್ಯಮಟ್ಟದ ಸಂಘಟನೆ. ಅತ್ಯಂತ ಅಭಿಮಾನದಿಂದ ಹೇಳಿಕೊಂಡರು. ನಾವೆಲ್ಲ ‘ರಿಯಲ್ ಎಸ್ಟೇಟ್’ ಸಂಘಟನೆಯಿಂದ ಬಂದವರು ಎಂದು. ಹೀಗೆಯೇ ಕೆಲವರ ಬಳಿ ವಿವರವಾಗಿ ಮಾತಾಡಿದಾಗ, ಅವರೆಲ್ಲ ಚಲನಚಿತ್ರಗಳನ್ನು ತೆಗೆಯಲು ತುದಿಗಾಲಿನಲ್ಲಿ ನಿಂತವರು. ಯಾವ ಯಾವುದೋ ರೂಪದಲ್ಲಿ ದುಡ್ಡು ಮಾಡಿದವರು. ಅದನ್ನು ವಿಭಿನ್ನ ರೀತಿಯಲ್ಲಿ ರಂಜಕರೂಪದಲ್ಲಿ ವಿನಿಯೋಗಿಸಲು ಬಯಸಿದಂಥವರು. ಇಲ್ಲಿ ನೈತಿಕತೆ, ಆದರ್ಶ, ಸಾಮಾಜಿಕ ಸುಧಾರಣೆಯೆಂಬುದು ಪೂರ್ತಿ ನಾಪತ್ತೆಯಾಗಿರುವಂಥದ್ದು. ಅವರ ಬಹುಪಾಲು ಮಂದಿಯ ಕೈಗಳಲ್ಲಿ ವಿಜೃಂಭಿಸುತ್ತಿದ್ದ ಬೆರಳಿನುಂಗುರಗಳು, ಕೈಗಳಲ್ಲಿ ಕುತ್ತಿಗೆಗಳಲ್ಲಿಯ ಚಿನ್ನದ ಸರಗಳನ್ನು ಕಂಡು ಗಾಬರಿಗೊಂಡಿದ್ದೆ. ಅವರ ಮುಖಗಳಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ; ಕಾಮರಾಜ್ ನಾಡಾರ್, ರಾಜಾಜಿ, ಪೆರಿಯಾರ್, ಅಣ್ಣಾ ದೊರೈ ಮುಂತಾದವರ ಪಳೆಯುಳಿಕೆ ಗೋಚರಿಸುವುದೇನೋ ಎಂದು ಹುಡುಕಲು ಪ್ರಯತ್ನಿಸಿದೆ. ಕೊನೆಗೆ ಹೀಗೆ ದಡ್ಡತನದಿಂದ ಹುಡುಕಲು ಪ್ರಯತ್ನಿಸುವುದು ಕೂಡ ತಪ್ಪು ಎಂದು ಭಾವಿಸಿ ವೌನಿಯಾದೆ.
ಆದರೆ ದುರಂತವೆಂದರೆ: ಇದೇ ಮಂದಿ ಧುತ್ತನೆ ನನ್ನ ಮನಸ್ಸಿನ ತುಂಬ ರಾಕ್ಷಸರ ರೀತಿಯಲ್ಲಿ ಆವರಿಸಿಕೊಂಡರು. ಯಾಕೆಂದರೆ: 2015ರ ಡಿಸೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಲಕ್ಷಾಂತರ ಮಂದಿ ನರಳಿದವರು: ರಿಯಲ್ ಎಸ್ಟೇಟ್‌ನವರು ರಾತ್ರೋ ರಾತ್ರಿ ಕೋಟ್ಯಧೀಶ್ವರರಾಗಬೇಕೆಂದು ಅಕ್ರಮವಾಗಿ ರೂಪಿಸಿದ ‘ಲೇ ಔಟ್’ಗಳ ಕಾರಣದಿಂದ ಜನ ನರಳಿದರು. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಎಷ್ಟೋ ಮಂದಿ ತಮ್ಮ ಪ್ರಾಣ ಕಳೆದುಕೊಂಡರು. ಕೂಡಿಟ್ಟ ಸಂಪತ್ತು ನೀರು ಪಾಲಾಯಿತು. ಆದರೆ ಈ ರಿಯಲ್ ಎಸ್ಟೇಟ್‌ನವರು ಯಾರೂ ಶಿಕ್ಷೆಗೆ ಒಳಗಾಗಲಿಲ್ಲ. ಸಿಎನ್‌ಎನ್‌ಮತ್ತು ಎನ್‌ಡಿಟಿವಿ ಚಾನೆಲ್‌ನವರು ಚೆನ್ನೈನ ಮಹಾನಗರಪಾಲಿಕೆಯ ಕಮಿಷನರ್ ಅವರನ್ನು ‘‘ಇದಕ್ಕೆ ರಿಯಲ್ ಎಸ್ಟೇಟ್‌ನವರ ಪಾಲೂ ಇದೆ. ಅವರನ್ನು ಹೇಗೆ ಗುರಿಪಡಿಸುತ್ತೀರಿ?’’ ಎಂದು ಕೇಳಿದ್ದಕ್ಕೆ: ಅವರು ಹಾರಿಕೆಯ ಉತ್ತರ ಕೊಟ್ಟರು. ಅದೆಲ್ಲ ಚರ್ಚಿಸುವುದಕ್ಕೆ ಇದು ಸಮಯವಲ್ಲವೆಂದು, ಯಾಕೆಂದರೆ; ಅವರು ಸ್ಥಳೀಯ ಐಎಎಸ್ ಅಧಿಕಾರಿಯಲ್ಲ. ಕಷ್ಟಕ್ಕೆ ಸಿಕ್ಕಿದವರು ಕೊರಗುತ್ತಲೇ ಬದುಕಬೇಕು ಎಂದು ತೀರ್ಮಾನಿಸಿದರು. ಕೇಂದ್ರದಿಂದ ಹಾಗೂ ಬೇರೆ ಬೇರೆ ಮೂಲಗಳಿಂದ ಸಾವಿರಾರು ಕೋಟಿ ರೂಪಾಯಿ ಹರಿದು ಬಂತು. ಪರಿಹಾರದ ಕಾರ್ಯಗಳು ಹೇಗೆ ನಡೆದವು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಆದರೆ ಒಂದಂತು ಸತ್ಯ: ಆಧುನಿಕ ರಾಕ್ಷಸರು ಯಾವ ಯಾವ ರೂಪದಲ್ಲಿರುತ್ತಾರೆಂದು.
ಬಹಳ ಸಾಮಾಜಿಕ ದುರಂತವೆಂದರೆ: ಆ ಲಾಸ್‌ಏಂಜಲೀಸ್‌ನಲ್ಲಿ ಅವರು ನನ್ನನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಂಡರು. ಯಾಕೆಂದರೆ: ಅವರ ಬಳಿ ನಾನು ಮಾತಾಡುವಾಗ; ಪೆರಿಯಾರ್ ಕಾಮರಾಜ್ ನಾಡಾರ್ ಹಾಗೂ ಎರಡು ವರ್ಷಗಳ ಹಿಂದೆ ತಮಿಳಿನ ಪ್ರಸಿದ್ಧ ಕವಿ ‘ವೈರ ಮುತ್ತು’ ಅವರ ಅರವತ್ತನೆಯ ಜನ್ಮದಿನಾಚರಣೆಯಲ್ಲಿ ಚೆನ್ನೈನಲ್ಲಿ ಭಾಗಿಯಾಗಿದ್ದೆ ಎಂದು ಹೇಳಿದ್ದೆ. ಒಮ್ಮೆಮ್ಮೆ ಇದನ್ನೆಲ್ಲ ಅವಲೋಕಿಸಿಕೊಂಡಾಗ; ವೈಪರೀತ್ಯಗಳು ಹೇಗೆ ಸುತ್ತುವರಿದಿರುತ್ತವೆ ಎಂಬ ಭಾವನೆಯು ಗಾಢವಾಗುತ್ತ ಹೋಗುವುದು.
ಲಾಸ್ ಏಂಜಲೀಸ್ ಸುತ್ತಾಡುವಾಗ; ಸುಮ್ಮನೆ ಯೋಚಿಸುತ್ತ ಹೋದೆ: ಅಭಿರುಚಿಯ ದೃಷ್ಟಿಯಿಂದ ಇಂಥದ್ದೆಲ್ಲ ಎಲ್ಲಿ ಪೂರಕವಾಗಿ ಕೆಲಸಮಾಡುವುದೆಂದು. ಹಾಗೆ ನೋಡಿದರೆ: ಹಿಂದಿನ ದಿವಸ ಲಾಸ್ ಏಂಜಲೀಸ್ ನಗರವನ್ನು ನೋಡಿ ಸಂಭ್ರಮಪಟ್ಟಿದ್ದೆ. ಪ್ರತಿವರ್ಷ ಆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯು ವಿತರಣೆಯಾಗುವ ಜಾಗವನ್ನು ಕಂಡು ಪುಳಕಿತನಾಗಿದ್ದೆ. ಯಾಕೆಂದರೆ: ಅಲ್ಲಿಯ ಸ್ತಂಭಗಳಲ್ಲಿ ಗಾಂಧಿ, ಮೈಫೇರ್ ಲೇಡಿ, ಡಾ. ಜಿವಾಗೋ ಮುಂತಾದ ಚಿತ್ರಗಳಿಗೆ ಪ್ರಶಸ್ತಿ ಬಂದಿರುವುದನ್ನು ಆಯಾ ವರ್ಷದ ಸಮೇತ ಹೆಸರಿಸಿ ದಾಖಲಿಸಿದ್ದರು. ಜೊತೆಗೆ ಪ್ರಶಸ್ತಿ ವಿತರಿಸುವ ಚೀನಿ ಥಿಯೇಟರ್ ಮುಂದೆ ಗ್ರೇಟ್ ನಿರ್ದೇಶಕರ ಮತ್ತು ನಟನಟಿಯರ ಪಾದಗಳು ತೇವಗೊಂಡ ಸಿಮೆಂಟ್ ನೆಲದ ಮೇಲೆ ಕಾಣಬಹುದು. ಅವರ ಸಹಿ ಸಮೇತ. ಆದರೆ ಈ ಮನರಂಜನೆಯ ಕ್ಯಾಪಿಟಲ್ ಸಿಟಿಯೇ ಬೇರೆ. ಆ ನಗರದಲ್ಲಿ ಮರ್ಲಿನ್‌ಮನ್ರೋ ವಾಸಮಾಡುತ್ತಿದ್ದ ಅಪ್ಪಟ ಬಿಳಿಯ ಶ್ವೇತಮಹಲ್‌ನ್ನು ಮರೆಸುವಷ್ಟು ಗ್ಲಾಮರ್; ಈ ಮನರಂಜನೆಯ ನಗರದಲ್ಲಿ ತುಂಬಿಕೊಂಡಿದೆ. ಎಷ್ಟೋ ವೈವಿಧ್ಯಮಯವಾದ ಸ್ಟುಡಿಯೋಗಳ ಜೊತೆಗೆ; ಪ್ರೇತ ಕಳೆಯನ್ನು ತುಂಬಿಕೊಂಡಿರುವ, ಕತ್ತಲಿನಲ್ಲಿ ನೋಡಿದರೆ ಭೀತಿಯಿಂದ ಓಡಿಹೋಗುವ ಪರಿಸ್ಥಿತಿಯನ್ನು ಸೃಷ್ಟಿಸುವ: ಹೆಣದ ರೂಪದ ಪೈಶಾಚಿಕ ಚಿತ್ರಗಳು, ಅವುಗಳ ಪಕ್ಕದಲ್ಲಿ ನಿಂತು ಕ್ಯಾಮರಾಗಳನ್ನು ಕ್ಲಿಕ್ ಮಾಡಿಕೊಳ್ಳುವ ನೂರಾರು ಜನ. ಅಂದರೆ: ಅವುಗಳನ್ನೆಲ್ಲ ಚಲನಚಿತ್ರಗಳಲ್ಲಿ ಸಂದರ್ಭಾನುಸಾರ ಬಳಸಿಕೊಳ್ಳುತ್ತೇವೆ ಎಂದು ಮಾದರಿಗೆ ಇಟ್ಟಿರುವಂಥವು.
ಇನ್ನು ಕೆಲವು ಸ್ಟುಡಿಯೋಗಳಲ್ಲಿ ರೋಮಾಂಚನವನ್ನು ಸೃಷ್ಟಿಸುವ ಲೈವ್ ಕಾರ್ಯಕ್ರಮಗಳು. ಒಂದು ಸ್ಟುಡಿಯೋದಲ್ಲಂತೂ ಎಂತೆಂಥ ಸಾಹಸ ಪ್ರದರ್ಶನ. ಒಂದು ಪುಟ್ಟ ಕೊಳದಲ್ಲಿಯೇ ವೇಗವಾಗಿ ಚಲಿಸುವ ಬೋಟ್, ಬೆಂಕಿಯ ಉಗುಳುವಿಕೆ, ಶತ್ರುಗಳ ನಡುವೆ ತಪ್ಪಿಸಿಕೊಳ್ಳುವ ಕ್ರಮ, ಚಲನಚಿತ್ರಗಳಲ್ಲಿ ಕಾಣುವ ಎಲ್ಲ ವಿಸ್ಮಯಕಾರಿ ಸಂಗತಿಗಳನ್ನು ಮೈನವಿರೇಳಿಸುವ ರೀತಿಯಲ್ಲಿ ಪ್ರದರ್ಶನಕ್ಕೊಳಪಡಿಸಿರುತ್ತಾರೆ. ಅದರಲ್ಲೂ ಬೋಟ್ ವೇಗವಾಗಿ ಚಲಿಸುವ ರಭಸಕ್ಕೆ ಸಾವಿರಾರು ಪ್ರೇಕ್ಷಕರಿಗೆ ತಣ್ಣೀರಿನ ಸ್ನಾನ. ಮತ್ತೊಂದು ಲೈವ್ ಕಾರ್ಯಕ್ರಮದಲ್ಲಿ ಸಾವು, ಅಪಹರಿಸುವ ಮುಂತಾದ ಘಟನೆ ಮಾರ್ಮಿಕವಾಗಿ ತೋರಿಸುವಂಥದ್ದು. ಸಾವಿರಾರು ಎಕರೆ ಪ್ರದೇಶದಲ್ಲಿ ಚಲನಚಿತ್ರ ಲೋಕದ ಎಲ್ಲ ಸಾಧ್ಯತೆಗಳು ಧುತ್ತನೆ ನಮಗೆ ಮುಖಾಮುಖಿಯಾಗುವಂತೆ ಪ್ರದರ್ಶನಗೊಳ್ಳುವುದು. ಆದರೆ ಕೆಲವು ಸಾಹಸಮಯ ಕಾರ್ಯಕ್ರಮಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು ಅನ್ನಿಸುತ್ತದೆ. ಮತ್ತೊಂದು ಥ್ರೀಡಿ ಚಿತ್ರವಂತೂ ಪ್ರಾಣಿ ಲೋಕದ ವಿಸ್ಮಯ. ಆ ಭೀಕರ ಶಬ್ದ ಮತ್ತು ಅದಕ್ಕೆ ಅನುಗುಣ ವಾಗಿ ನವು ಕೂತ ಕುರ್ಚಿಗಳೇ ಅಲುಗಾಡುತ್ತ ಹೋಗುವ ಸನ್ನಿವೇಶ. ಚಿಕ್ಕ ಹುಡುಗರ ಕೂಗು, ಕಿರಿಚಾಟಗಳ ನಡುವೆ ತಲ್ಲಣಗಳನ್ನು ಸೃಷ್ಟಿಮಾಡಿರುತ್ತದೆಂದು ತಂತ್ರಜ್ಞಾನದ ಹೆಚ್ಚುಗಾರಿಕೆ. ಇಷ್ಟಾದರೂ ಲಕ್ಷಾಂತರ ಮಂದಿ ಓಡಾಡುತ್ತಿದ್ದರೂ, ಸ್ವಾಭಾವಿಕವಾಗಿಯೇ ಸ್ವಚ್ಛತೆಯನ್ನು ಕಾಪಾಡಿಕೊಂಡಿರುವ ವಾತಾವರಣ ಕಂಡು ಖುಷಿಯಾಯಿತು. ಜೊತೆಗೆ ಜನರು ಸದ್ದುಗದ್ದಲವಿಲ್ಲದೆ ತಮ್ಮ ಪಾಡಿಗೆ ತಾವು ವೀಕ್ಷಿಸುತ್ತ ಹೋಗುವ ಗುಣಾತ್ಮಕತೆಯೂ ಮಹತ್ವಪೂರ್ಣವಾದದ್ದು. ಅನಗತ್ಯವಾಗಿ ಪೊಲೀಸರ ಪ್ರವೇಶ ಇರುವುದಿಲ್ಲ. ಅವರು ಕೇವಲ ಶಾಂತಿಪಾಲಕರಾಗಿ, ಮಾರ್ಗದರ್ಶಕರಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೂ ಕೂಡ ಜಗತ್ತಿನ ಉದ್ದಗಲದಿಂದ ಪ್ರವಾಸಿಗರನ್ನು ಆಕರ್ಷಿಸುವ ಜಾಣ್ಮೆಯಾಗಿದೆ.
ಪ್ರತಿದಿನದ ಲಕ್ಷಾಂತರ ಮಂದಿಯನ್ನು ಬರಮಾಡಿಕೊಳ್ಳುವ ಈ ‘ಲಾಸ್ ಏಂಜಲೀಸ್’ ವಿವಿಧ ಮಾದರಿಗಳಲ್ಲಿ ಗ್ಲಾಮರನ್ನು ಮಾರುತ್ತಲಿದೆ. ಎಷ್ಟೋ ಮಂದಿ ಇದನ್ನು ನೋಡಿ ತಮ್ಮ ಬದುಕು ಸಾರ್ಥಕವಾಯಿತು ಎಂದು ತಿಳಿಯುವವರು ಇದ್ದಾರೆ. ಇದು ಸ್ವಾಭಾವಿಕವೂ ಇರಬಹುದು. ಹಾಗೆ ನೋಡಿದರೆ ಲಾಸ್‌ವೇಗಾಸ್ ನಗರ ಒಂದು ರೀತಿಯ ಹುಚ್ಚು ನಗರವಾದರೆ, ಇದೊಂದು ರೀತಿಯ ನಗರ. ಗ್ಲಾಮರ್ ಎಂಬುದನ್ನು ಬಹುದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿಯೇ ಬದುಕುತ್ತಿರುವ ನಗರಗಳಿವು. ಲಾಸ್‌ಏಂಜಲೀಸ್ ಅಂತೂ ಜಗತ್ತಿನ ಎಲ್ಲ ಕಡೆಯೂ ಚಲನ ಚಿತ್ರಗಳೆಂಬುದು ಪ್ರಧಾನಪಾತ್ರವನ್ನು ನಿರ್ವಹಿಸುತ್ತಿರುವುದರಿಂದ, ಮತ್ತಷ್ಟು ಮಾನಸಿಕ ಸರಕನ್ನು ರವಾನಿಸುವುದು ತುಂಬ ಸುಲಭವಾಗಿರುತ್ತದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.