Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಅತಿಯಾದ ಬಾಯಾರಿಕೆಯೇ? ಅದಕ್ಕೆ ಐದು...

ಅತಿಯಾದ ಬಾಯಾರಿಕೆಯೇ? ಅದಕ್ಕೆ ಐದು ಸಾಮಾನ್ಯ ಕಾರಣಗಳಿಲ್ಲಿವೆ.....

ವಾರ್ತಾಭಾರತಿವಾರ್ತಾಭಾರತಿ20 Dec 2018 4:35 PM IST
share
ಅತಿಯಾದ ಬಾಯಾರಿಕೆಯೇ? ಅದಕ್ಕೆ ಐದು ಸಾಮಾನ್ಯ ಕಾರಣಗಳಿಲ್ಲಿವೆ.....

ಅತಿಯಾದ ಬಿಸಿಲಿದ್ದಾಗ ಬಾಯಾರಿಕೆಯನ್ನು ತಣಿಸಲು ಒಂದು ಗ್ಲಾಸ್ ನೀರು ಏತಕ್ಕೂ ಸಾಲದು. ಮಸಾಲೆಭರಿತ ಊಟವು ನೀವು ಹೆಚ್ಚು ನೀರು ಕುಡಿಯುವಂತೆ ಮಾಡುತ್ತದೆ. ಕಠಿಣ ಕೆಲಸ ಮಾಡುತ್ತಿದ್ದಾಗ ಆಗಾಗ್ಗೆ ಸ್ವಲ್ಪ ನೀರನ್ನು ಕುಡಿಯುತ್ತಿರುವುದು ಅನಿವಾರ್ಯವಾಗುತ್ತದೆ. ಇಂತಹ ಸಂದಭಗಳಲ್ಲಿ ನಮ್ಮ ಶರೀರವು ಹೆಚ್ಚಿನ ನೀರನ್ನು ಬೇಡುವುದು ಸಹಜ. ಆದರೆ ಇಂತಹ ಯಾವುದೇ ಅನಿವಾರ್ಯತೆಯಿಲ್ಲದಿದ್ದಾಗಲೂ ಒಂದೆರಡು ಗ್ಲಾಸ್ ನೀರಿನಿಂದ ಬಾಯಾರಿಕೆ ತಣಿಯುವುದಿಲ್ಲವಾದರೆ ಅದನ್ನು ಕಡೆಗಣಿಸಕೂಡದು. ಏಕೆಂದರೆ ಅತಿಯಾದ ಬಾಯಾರಿಕೆ ಅಥವಾ ನಿರಂತರವಾಗಿ ನೀರಿನ ಸೇವನೆಯು ನಿಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ಪಾಲಿಡಿಪ್ಸಿಯಾ ಎಂದೂ ಕರೆಯಲಾಗುವ ಅತಿಯಾದ ಬಾಯಾರಿಕೆಗೆ ಕೆಲವು ಸಾಮಾನ್ಯ ಕಾರಣಗಳು ಹೀಗಿವೆ....

ಹೆಚ್ಚಿನ ಉಪ್ಪು ಅಥವಾ ಮಸಾಲೆಯಿರುವ ಆಹಾರ ಸೇವನೆ, ವ್ಯಾಯಾಮ, ವಾಂತಿ, ಅತಿಸಾರ, ಸುಟ್ಟಗಾಯಗಳು, ವಿಪರೀತ ಧಗೆ, ಅನಾರೋಗ್ಯ ಮತ್ತು ಮೂತ್ರವರ್ಧಕಗಳಂತಹ ಕೆಲವು ಔಷಧಿಗಳ ಸೇವನೆ ಇಂತಹ ಸಾಮಾನ್ಯ ಕಾರಣಗಳಲ್ಲಿ ಸೇರಿವೆ. ಆದರೆ ಅತಿಯಾದ ಬಾಯಾರಿಕೆಯು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳ ಲಕ್ಷಣವೂ ಆಗಿರಬಹುದು.

►ನಿರ್ಜಲೀಕರಣ

  ಶರೀರದಲ್ಲಿ ನೀರಿನ ಕೊರತೆ ಹೆಚ್ಚಾದರೆ ಅಂತಹ ಸ್ಥಿತಿಯನ್ನು ನಿರ್ಜಲೀಕರಣ ಎಂದು ಕರೆಯಲಾಗುತ್ತದೆ. ಇದರ ಪರಿಣಾಮವಾಗಿ ಶರೀರದ ಕಾರ್ಯನಿರ್ವಹಣೆ ವ್ಯತ್ಯಯಗೊಳ್ಳುತ್ತದೆ. ತೀವ್ರ ನಿರ್ಜಲೀಕರಣವು ಮೂತ್ರಪಿಂಡಗಳು,ಹೃದಯ ಮತ್ತು ಮಿದುಳಿನಂತಹ ಪ್ರಮುಖ ಅಂಗಾಂಗಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಅದು,ವಿಶೇಷವಾಗಿ ಮಕ್ಕಳಲ್ಲಿ ಸಾವಿಗೂ ಕಾರಣವಾಗಬಹುದು. ಸುಡುಬಿಸಿಲಿನಲ್ಲಿ ತಿರುಗಾಟ,ಕಠಿಣ ವ್ಯಾಯಾಮ,ಅತಿಯಾದ ವಾಂತಿ,ಧಾರಾಳವಾಗಿ ಬೆವರುವಿಕೆ ಅಥವಾ ಪದೇ ಪದೇ ಮೂತ್ರವಿಸರ್ಜನೆಯಂತಹ ವಿವಿಧ ಕಾರಣಗಳೀಂದ ಶರೀರದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಅತಿಯಾದ ಬಾಯಾರಿಕೆ ಅಥವಾ ಪಾಲಿಡಿಪ್ಸಿಯಾದ ಜೊತೆಗೆ ಗಾಢವರ್ಣದ ಮೂತ್ರ,ಬಾಯಿ ಮತ್ತು ಚರ್ಮ ಒಣಗುವುದು,ತಲೆನೋವು ಮತ್ತು ತಲೆ ಹಗುರವಾಗುವುದು ಇವೂ ನಿರ್ಜಲೀಕರಣಕ್ಕೆ ಕಾರಣಗಳಲ್ಲಿ ಸೇರಿವೆ.

►ಮಧುಮೇಹ

 ಅತಿಯಾದ ಬಾಯಾರಿಕೆಯು ಮಧುಮೇಹದ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಅದು ಮಧುಮೇಹದ ಮೊಟ್ಟಮೊದಲಿಗೆ ಗಮನಕ್ಕೆ ಬರುವ,ಆದರೆ ಹೆಚ್ಚಾಗಿ ಕಡೆಗಣಿಸಲ್ಪಡುವ ಲಕ್ಷಣವಾಗಿದೆ. ಮಧುಮೇಹಿಗಳಲ್ಲಿ ಇನ್ಸುಲಿನ್‌ನ್ನು ಉತ್ಪಾದಿಸುವ ಮೇದೋಜ್ಜೀರಕ ಗ್ರಂಥಿಯು ವಿಫಲಗೊಂಡಿರುತ್ತದೆ ಅಥವಾ ಶರೀರಕ್ಕೆ ಅಗತ್ಯವಾದಷ್ಟು ಇನ್ಸುಲಿನ್‌ನ್ನು ಉತ್ಪಾದಿಸುವುದಿಲ್ಲ ಅಥವಾ ಮೇದೋಜ್ಜೀರಕ ಗ್ರಂಥಿಯು ಉತ್ಪಾದಿಸುವ ಇನ್ಸುಲಿನ್‌ನ್ನು ಬಳಸಿಕೊಳ್ಳಲು ಶರೀರಕ್ಕೆ ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಶರೀರದಲ್ಲಿಯ ಹೆಚ್ಚುವರಿ ಗ್ಲುಕೋಸ್ ರಕ್ತದಲ್ಲಿ ಮತ್ತು ಮೂತ್ರದಲ್ಲಿ ಹರಿಯುತ್ತದೆ. ಮೂತ್ರದಲ್ಲಿ ಗ್ಲುಕೋಸ್ ಅತಿಯಾದಾಗ ಶರೀರದಲ್ಲಿ ಗ್ಲುಕೋಸ್ ಸಾಂದ್ರತೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ನೀರನ್ನು ಹೀರುತ್ತದೆ. ಇದರಿಂದಾಗಿ ಪದೇ ಪದೇ ಮೂತ್ರವಿಸರ್ಜನೆಯನ್ನು ಮಾಡುವಂತಾಗುತ್ತದೆ. ಇದು ಶರೀರದಲ್ಲಿ ನೀರಿನ ಕೊರತೆಯನ್ನುಂಟು ಮಾಡುತ್ತದೆ ಮತ್ತು ನೀರಿನ ಮರುಭರ್ತಿಯನ್ನು ಸೂಚಿಸಲು ಬಾಯಾರಿಕೆಯುಂಟಾಗುತ್ತದೆ. ಅತಿಯಾದ ಬಾಯಾರಿಕೆ ಮತ್ತು ಪದೇ ಪದೇ ಮೂತ್ರವಿಸರ್ಜನೆ ಮಾತ್ರವಲ್ಲ,ಅತಿಯಾದ ಬಳಲಿಕೆ,ಅತಿಯಾದ ಹಸಿವು,ಮಸುಕಾದ ದೃಷ್ಟಿ ಮತ್ತು ಗಾಯಗಳು ಬೇಗನೇ ಮಾಯದಿರುವುದು ಇವೆಲ್ಲ ಸಮಸ್ಯೆಗಳಿಗೂ ಮಧುಮೇಹವು ಕಾರಣವಾಗುತ್ತದೆ.

►ಡಯಾಬಿಟಿಸ್ ಇನ್ಸಿಪಿಡಿಸ್

ಇದರ ಹೆಸರಿನಿಂದಾಗಿ ಹೆಚ್ಚಿನ ಸಂದರ್ಭಗಳಲ್ಲಿ ಸಾಮಾನ್ಯ ಮಧುಮೇಹ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಆದರೆ ಇವೆರಡೂ ಸ್ಥಿತಿಗಳು ಬೇರೆ ಬೇರೆಯಾಗಿವೆ. ಡಯಾಬಿಟಿಸ್ ಇನ್ಸಿಪಿಡಿಸ್ ಅಪರೂಪದ ಆರೋಗ್ಯ ಸ್ಥಿತಿಯಾಗಿದ್ದು, ಅತಿಯಾದ ಬಾಯಾರಿಕೆ ಮತ್ತು ಪದೇ ಪದೇ ಮೂತ್ರವಿಸರ್ಜನೆ(ಬಣ್ಣ ಮತ್ತು ವಾಸನೆರಹಿತ) ಇವು ಡಯಾಬಿಟಿಸ್ ಇನ್ಸಿಪಿಡಿಸ್‌ನ ವಿಶಿಷ್ಟ ಲಕ್ಷಣಗಳಾಗಿವೆ.

►ಬಾಯಿ ಒಣಗಿರುವುದು

ಪಾಲಿಡಿಪ್ಸಿಯಾ ಬಾಯಿ ಒಣಗಿರುವುದರ ಸಾಮಾನ್ಯ ಲಕ್ಷಣವಾಗಿದೆ.ಬಾಯಿಯಲ್ಲಿನ ಜೊಲ್ಲು ಉತ್ಪಾದಿಸುವ ಗ್ರಂಥಿಗಳು ಸಮರ್ಪಕವಾಗಿ ಕಾಯ ನಿರ್ವಹಿಸಲು ವಿಫಲಗೊಂಡಾಗ ಬಾಯಿ ಒಣಗಬಹುದು. ತಂಬಾಕು ಸೇವನೆ,ಆತಂಕ,ಉದ್ವೇಗ ಮತ್ತು ಬಾಯಿಯಿಂದ ಉಸಿರಾಟ ಇವೂ ಬಾಯಿ ಒಣಗಲು ಕಾರಣವಾಗುತ್ತವೆ. ಕೆಲವು ಔಷಧಿಗಳು,ತಲೆ ಅಥವಾ ಕುತ್ತಿಗೆ ಭಾಗದಲ್ಲಿಯ ನರಗಳಿಗೆ ಹಾನಿ ಮತ್ತು ಕ್ಯಾನ್ಸರ್ ಚಿಕಿತ್ಸೆ ಇತರ ಕಾರಣಗಳಲ್ಲಿ ಸೇರಿವೆ.

ಪಾಲಿಡಿಪ್ಸಿಯಾದ ಜೊತೆಗೆ ಕೆಟ್ಟ ಉಸಿರು,ರುಚಿಯಲ್ಲಿ ಬದಲಾವಣೆ,ವಸಡುಗಳಲ್ಲಿ ತೊಂದರೆ,ದಪ್ಪ ಜೊಲ್ಲು ಮತ್ತು ಅಗಿಯುವಾಗ ತೊಂದರೆ ಇವೂ ಬಾಯಿ ಒಣಗಿರುವುದನ್ನು ಸೂಚಿಸುತ್ತವೆ. ಈ ಸ್ಥಿತಿಯ ಮೂಲಕಾರಣಕ್ಕೆ ಚಿಕಿತ್ಸೆ ಅಗತ್ಯವಾಗುವುದರಿಂದ ಬರೀ ನೀರನ್ನು ಕುಡಿಯುತ್ತಿರುವದರಿಂದ ಈ ಸಮಸ್ಯೆ ನಿವಾರಣೆಯಾಗದಿರಬಹದು. ಇದಕ್ಕೆ ಕಾರಣವನ್ನು ತಿಳಿದುಕೊಂಡು ಚಿಕಿತ್ಸೆ ಪಡೆಯಲು ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

►ರಕ್ತಹೀನತೆ

ತೀವ್ರ ರಕ್ತಹೀನತೆಯು ಅತಿಯಾದ ಬಾಯಾರಿಕೆಗೆ ಕಾರಣವಾಗಬಹುದು. ದೋಷಯುಕ್ತ ಕೆಂಪು ರಕ್ತಕಣಗಳ ಉತ್ಪಾದನೆಯಿಂದಾಗಿ ಆರೋಗ್ಯಕರ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ ರಕ್ತಹೀನತೆಯುಂಟಾಗುತ್ತದೆ. ಇದು ಶರೀರದ ವಿವಿಧ ಅಂಗಗಳಿಗೆ ಆಮ್ಲಜನಕದ ಪೂರೈಕೆಯಲ್ಲಿ ಕೊರತೆಗೆ ಕಾರಣವಾಗುತ್ತದೆ. ಅದು ಶರೀರದಲ್ಲಿಯ ದ್ರವಗಳ ನಷ್ಟಕ್ಕೂ ಕಾರಣವಾಗುತ್ತದೆ ಮತ್ತು ಇದೇ ಕಾರಣದಿಂದ ರಕ್ತಹೀನತೆಯು ಹೆಚ್ಚಾದರೆ ಅತಿಯಾದ ಬಾಯಾರಿಕೆಯುಂಟಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X