ಮಾನಸಿಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ? ಇಲ್ಲಿದೆ ತಜ್ಞರು ಕೊಟ್ಟ ಸಲಹೆಗಳು | Vartha Bharati- ವಾರ್ತಾ ಭಾರತಿ

--

ಮಾನಸಿಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ? ಇಲ್ಲಿದೆ ತಜ್ಞರು ಕೊಟ್ಟ ಸಲಹೆಗಳು

ಸಾಂದರ್ಭಿಕ ಚಿತ್ರ (courtesy: edwardmungai.com)

ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಅಡೆತಡೆಗಳು, ಕಷ್ಟ ಕಾರ್ಪಣ್ಯಗಳು, ಏಳುಬೀಳುಗಳು, ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ. ಆದರೆ ಯಾವುದೇ ಸಮಸ್ಯೆಗಳಾಗಲೀ ನಾವು ಮಾನಸಿಕವಾಗಿ ಹೇಗೆ ಅದನ್ನು ಸ್ವೀಕರಿಸುತ್ತೇವೆ ಎಂಬುದರ ಆಧಾರದಲ್ಲಿ ಅದು ಸಣ್ಣದೋ, ದೊಡ್ಡದೋ ನಿರ್ಧರಿತವಾಗುತ್ತದೆ.  

ನಾವು ತೊಂದರೆಗಳನ್ನು ಎದುರಿಸಿದಾಗ, ನಮ್ಮ ಮಾನಸಿಕ ಸ್ಥಿತಿ ಅಂದರೆ ನಾವು ಹೇಗೆ ಯೋಚಿಸುತ್ತೇವೆ ಎಂಬುದು ಮುಖ್ಯ. ನೀವು ಯೋಚಿಸಿದಷ್ಟೂ ನಿಮ್ಮ ವೃತ್ತಿಜೀವನವನ್ನು ನೀವು ಅಚ್ಚುಕಟ್ಟಾಗಿ ಯೋಜಿಸಬಹುದು ಮತ್ತು ನೀವು ಎಲ್ಲಾ ತೊಂದರೆ, ಸಮಸ್ಯೆ ಎದುರಿಸಲು ಸಿದ್ದರಾಗಬಹುದು. ಆದರೆ  ಅನಿರೀಕ್ಷಿತವಾಗಿ ಎದುರಾಗುವ ಅಡೆತಡೆಗಳು ಬಂದರೆ ಏನು ಮಾಡಬೇಕು? ಜೀವನವು ನಿಮ್ಮ ಮೇಲೆ ಎಸೆದ ಸವಾಲುಗಳು ಏನೇ ಇರಲಿ, ಅವುಗಳನ್ನು ಎದುರಿಸಲು ನೀವು ನಿಮ್ಮ ಮಾನಸಿಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. 

ಮಾನಸಿಕ ಶಕ್ತಿ ಎಂದರೇನು?

ಯಾರಾದರೂ ತೊಂದರೆಗಳನ್ನು ಎದುರಿಸಿದರೆ, ಆ ಸಮಯದಲ್ಲಿ ಒಂದು ನಿರ್ದಿಷ್ಟ ಮನೋಭಾವವನ್ನು ಪ್ರದರ್ಶಿಸುವುದು. ಈ ಮನೋಭಾವವನ್ನು ಮಾನಸಿಕ ಶಕ್ತಿ ಎಂದು ಕರೆಯಲಾಗುತ್ತದೆ. ಜೀವನದಲ್ಲಿ ನಕಾರಾತ್ಮಕ ತಿರುವುಗಳು, ಬಿಕ್ಕಟ್ಟು, ಆರ್ಥಿಕ ಸಮಸ್ಯೆಗಳು, ಅನಿರೀಕ್ಷಿತ ಘಟನೆಗಳು, ಆರೋಗ್ಯ ಸಮಸ್ಯೆಗಳು ಪ್ರತಿಯೊಬ್ಬ ಮನುಷ್ಯನು ಎದುರಿಸುವ ಕೆಲವು ಅನಿವಾರ್ಯ ಅಡೆತಡೆಗಳು. ಆದಾಗ್ಯೂ ಇವುಗಳ ಪ್ರಭಾವದ ಮಟ್ಟವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಮಾನಸಿಕ ಶಕ್ತಿಯು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ತಜ್ಞರು ತೋರಿಸಿದ ಕೆಲವು ಸಲಹೆಗಳನ್ನು ನೋಡೋಣ ಬನ್ನಿ.

ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿ

ಬಹುಕಾರ್ಯಕವನ್ನು ಗೌರವದ ಸಂಕೇತ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಇದರಿಂದ ತೊಂದರೆಗಳೇ ಹೆಚ್ಚು. ಯಾವುದೇ ಕಾರ್ಯವನ್ನೂ ಪರಿಪೂರ್ಣವಾಗಿ ಮಾಡಲಾಗುವುದಿಲ್ಲ. ಇದು ಹೆಚ್ಚು ಆರೋಗ್ಯಕರವಲ್ಲ. ಮಾನಸಿಕವಾಗಿ ಒತ್ತಡ ಉಂಟಾಗುತ್ತದೆ. ಒಂದು ಬಾರಿ ಒಂದೇ ಕೆಲಸವನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ. ನೀವು ನಡೆದಾಡುತ್ತಿರುವಾಗ, ನಿಮ್ಮ ಸುತ್ತಮುತ್ತಲಿನ ವಾತಾವರಣ, ಪ್ರಾಣಿ ಪಕ್ಷಿಗಳ ನೋಡಿ. ನೀವು ಸ್ನೇಹಿತರೊಂದಿಗೆ ಸಮಯ ಕಳೆಯುವಾಗ ಅವರು ಹೇಳುವುದನ್ನು ನಿಜವಾಗಿಯೂ ಆಲಿಸಿ.  ನಿಮ್ಮ ಫೋನ್ ಅನ್ನು ಆಫ್ ಮಾಡಿ ಮತ್ತು ನಿಮ್ಮ ತಲೆಯಲ್ಲಿ ಓಡುತ್ತಿರುವ ಆಲೋಚನೆಗಳನ್ನು ಮರೆಯಲು ಪ್ರಯತ್ನಿಸಿ.

ಸಕರಾತ್ಮಕ ಗುಣ ಬೆಳೆಸಿಕೊಳ್ಳಿ

ಮಾನಸಿಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಕಟ್ಟುನಿಟ್ಟಾದ ನಿಯಮವನ್ನು ಅನುಸರಿಸಬೇಕು. ಮುಖ್ಯವಾಗಿ ನಂಬಿಕೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸುವುದು, ಸಕಾರಾತ್ಮಕ ಆಲೋಚನೆಗಳಿಗೆ ಹೆಚ್ಚುವರಿ ಜಾಗವನ್ನು ಸೃಷ್ಟಿಸುವುದು, ನಕರಾತ್ಮಕ ಆಲೋಚನೆಗಳಿಗೆ ಅವಕಾಶ ನೀಡಬೇಡಿ. ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡಲು ವೇಳಾಪಟ್ಟಿ ಮಾಡಿಕೊಳ್ಳಿ. ಮಾನಸಿಕ ಶಕ್ತಿಯನ್ನು ಬೆಳೆಸಲು ಯಾವಾಗಲೂ ನಿಮ್ಮ ಶಕ್ತಿಯನ್ನು ಬುದ್ಧಿವಂತಿಕೆಯಿಂದ ಬಳಸಿ.

ಕಷ್ಟಗಳಿಗೆ ಪರಿಹಾರ ಹುಡುಕಿ

ಮೆದುಳಿನ ಶಕ್ತಿಯನ್ನು ವ್ಯರ್ಥ ಮಾಡುವ ಮೂಲಕ ನೀವು ನಿಯಂತ್ರಿಸಲು ಸಾಧ್ಯವಾಗದ ವಿಷಯಗಳ ಬಗ್ಗೆ ಮಾತನಾಡುವುದರಿಂದ ಮಾನಸಿಕ ಶಕ್ತಿಯು ತ್ವರಿತವಾಗಿ ಬರಿದಾಗುತ್ತದೆ.  ನೀವು ಪರಿಹರಿಸಲಾಗದ ನಕಾರಾತ್ಮಕ ಸಮಸ್ಯೆಗಳ ಬಗ್ಗೆ ನೀವು ಹೆಚ್ಚು ಯೋಚಿಸಿದರೆ ಮನಸ್ಸು ಗೊಂದಲದ ಗೂಡಾಗುತ್ತದೆ. ಸೃಜನಶೀಲ ಚಟುವಟಿಕೆಗಳ ಕಡೆ ಗಮನ ಕೊಡಿ . ಕಷ್ಟ ಬಂದರೆ ಅದರ ಬಗ್ಗೆ ಚಿಂತಿಸಬೇಡಿ.ಅದಕ್ಕೆ ಪರಿಹಾರವನ್ನು ಹುಡುಕಿ. ಉದಾಹರಣೆಗೆ ಚಂಡಮಾರುತ ಅಪ್ಪಳಿಸಿದಾಗ, ಅದರ ಬಗ್ಗೆ ಹೆಚ್ಚು ಚಿಂತಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ನೀವು ಆ ಘಟನೆಯನ್ನು ಎದುರಿಸಲು ಸಿದ್ಧರಾಗಿರಬೇಕು. 

ಮಾನಸಿಕ ಶಕ್ತಿಯನ್ನು ಸೃಜನಾತ್ಮಕವಾಗಿ ಬಳಸುವುದು

ನಿಮ್ಮ ಮಾನಸಿಕ ಶಕ್ತಿಯನ್ನು ಉತ್ಪಾದಕ ಕೆಲಸಗಳಿಗೆ ಮಾತ್ರ ಬಳಸಿ. ಉದಾಹರಣೆಗೆ ನೀವು ಶಾಲಾ ದಿನಗಳಲ್ಲಿ ನಿಮಗೆ ಆಸಕ್ತಿಯಿರುವ ಹವ್ಯಾಸವನ್ನು ಹೊಂದಿದ್ದೀರಿ ಅಥವಾ ನೀವು ಹಲವು ದಿನಗಳ ಹಿಂದೆ ಮರೆತುಹೋದ ಹವ್ಯಾಸಗಳನ್ನು ಅಭ್ಯಾಸ ಮಾಡಲು ಪ್ರಯತ್ನಿಸಬೇಕು. ನೀವು ಮಾನಸಿಕವಾಗಿ ಬಲಹೀನರಾದಾಗ, ನೀವು ಅದನ್ನು ಉತ್ಸಾಹದ ಕಡೆಗೆ ಬದಲಾಯಿಸಲು ಪ್ರಯತ್ನಿಸಬೇಕು. ನೀವು ಎಷ್ಟೇ ಒತ್ತಡದಲ್ಲಿದ್ದರೂ ಮೆಚ್ಚಿನ ಹವ್ಯಾಸಗಳು ನಿಮ್ಮ ಮನಸ್ಸನ್ನು ಕ್ರಿಯಾತ್ಮಕ ಕಾರ್ಯಗಳಲ್ಲಿ  ತೊಡಗಿಸುತ್ತದೆ. ಏಕೆಂದರೆ ಇದು ನೀವು ಇಷ್ಟಪಡುವ ವಿಷಯವಾಗಿರುತ್ತದೆ. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ಹತ್ತು ನಿಮಿಷವೂ ಏಕಾಗ್ರತೆಯಿಂದ ಓದಲಾಗದಿದ್ದರೂ ಅವನ ನೆಚ್ಚಿನ ನಾಯಕನ ಸಿನಿಮಾವನ್ನು ಎರಡು ಗಂಟೆ ಏಕಾಗ್ರತೆಯಿಂದ ನೋಡಬಲ್ಲ, ಅಥವಾ ಅವನಿಗೆ ಡ್ರಾಯಿಂಗ್ ಇಷ್ಟವಾಗಿದ್ದರೆ ಅದನ್ನು ಸಮಯದ ಅರಿವಿಲ್ಲದೆ ಮಾಡಬಲ್ಲ.

ಓದುವ ಹವ್ಯಾಸ

ಏಕಾಗ್ರತೆ ಹೆಚ್ಚಿಸಲು ಎಷ್ಟೇ ಕಷ್ಟ ಬಂದರೂ ಓದುವುದನ್ನು ನಿಲ್ಲಿಸಬೇಡಿ. ವ್ಯಕ್ತಿತ್ವ ವಿಕಸನದಂತಹ ಪುಸ್ತಕಗಳನ್ನು ಓದುವುದು ಒತ್ತಡವನ್ನು ನಿಭಾಯಿಸುವ ಬಗ್ಗೆ ನಿಮ್ಮ ಒಳನೋಟಗಳ ಬಗ್ಗೆ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಉತ್ಪಾದಕವಾಗಿ ಹೆಚ್ಚಿಸುವ ಸಂಗತಿಗಳ ಬಗ್ಗೆಯೂ ನಿಮಗೆ ತಿಳಿಸುತ್ತದೆ.  ಓದಿನಲ್ಲಿ ಕಳೆಯುವ ಸಮಯ ಎಂದಿಗೂ ವ್ಯರ್ಥವಾಗುವುದಿಲ್ಲ.

ಸಮುದಾಯ ಕಾರ್ಯಗಳಲ್ಲಿ ಭಾಗವಹಿಸಿ

ಹೆಚ್ಚುತ್ತಿರುವ ಸಾಂಕ್ರಮಿಕ ಪ್ರಕರಣಗಳಿಂದಾಗಿ ಅನೇಕರು ಪ್ರತ್ಯೇಕವಾಗಿ ಪರಸ್ಪರ ದೂರವಾಗಿ ಉಳಿದಿದ್ದಾರೆ. ಪರಸ್ಪರ ಮಾತಾಡುವುದು, ಸೇರುವುದು ಬಿಟ್ಟಿದ್ದಾರೆ. ಆದಾಗ್ಯೂ ಇದು ಒಂಟಿತನವಲ್ಲ. ವೈರಸ್ ಹರಡುವುದನ್ನು ತಡೆಯಲು ನಾಲ್ಕು ಗೋಡೆಗಳೊಳಗೆ ಬಂಧಿಯಾಗಿರುವ ಬಗ್ಗೆ ಚಿಂತಿಸಬೇಕಾಗಿಲ್ಲ.  ಇಂಟರ್ನೆಟ್‌ನಿಂದ ಹೆಚ್ಚಿನದನ್ನು ಕಲಿಯಲು ಪ್ರಯತ್ನ ಮಾಡಿ. ನಿಮಗೆ ಗೊತ್ತಿರದ ವಿಷಯಗಳ ಬಗ್ಗೆ ಹುಡುಕಿ ಕಲಿತುಕೊಳ್ಳಿ. ಸಮುದಾಯ ಕಾರ್ಯಗಳಲ್ಲಿ ಭಾಗವಹಿಸಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ವಿವಿಧ ವಿಷಯಗಳ ಬಗ್ಗೆ ಧನಾತ್ಮಕವಾಗಿ ವ್ಯವಹರಿಸಿ.

ಕೊನೆಯದಾಗಿ ...ನಿಮಗಾಗಿ ಸಮಯವನ್ನು ನೀಡಿ

ನಮಗೆ 24 ಗಂಟೆ ಸಮಯವಿದ್ದರೂ ನಮ್ಮ ಬಗ್ಗೆ ಯೋಚಿಸುವುದೇ ಬಹಳ ಕಡಿಮೆ. ನಿಮ್ಮನ್ನು ನೀವು ಪ್ರೀತಿಸಿ. ನಿಮಗಾಗಿ ಸಮಯವನ್ನು ಮೀಸಲಿಡಿ.ನೀವು ನಿಜವಾಗಿಯೂ ಆನಂದಿಸುವ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಲು  ಮಧ್ಯಾಹ್ನ ಅಥವಾ ಸಂಜೆಯನ್ನು ಸಮಯ ನೀಡಿ.  ಇದು ವ್ಯಾಯಾಮ ಮಾಡುವುದು, ಓದುವುದು, ನಿಮ್ಮ ಮೆಚ್ಚಿನ ಕಾರ್ಯಕ್ರಮವನ್ನು ವೀಕ್ಷಿಸುವುದು ಯಾವುದಾದರೂ ಆಗಿರಬಹುದು. ಮೂಲಭೂತವಾಗಿ, ನಿಮಗಾಗಿ ಏನಾದರೂ ಮೋಜು ಮಾಡಲು ನಿಮ್ಮೊಂದಿಗೆ ಸಮಯವನ್ನು ನಿಗದಿ ಮಾಡಿಕೊಳ್ಳಿ.

ಕೃಪೆ: news18.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top