ಶಂಕಿತ ಡಿವೈಸ್ ಪತ್ತೆ; ಸಿಎನ್ ಎನ್ ಕಚೇರಿ ಸ್ಥಳಾಂತರ
ಒಬಾಮಾ ವಿಳಾಸಕ್ಕೂ ಸ್ಫೋಟಕ ರವಾನೆ

ನ್ಯೂಯಾರ್ಕ್, ಅ.24: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಹಿಲರಿ ಕ್ಲಿಂಟನ್ ವಿಳಾಸಕ್ಕೆ ಕಳುಹಿಸಲಾಗಿದ್ದ ಸ್ಫೋಟಕಗಳನ್ನು ತಡೆಯಲಾಗಿದೆ ಮತ್ತು ಈ ಬಗ್ಗೆ ಈಗಾಗಲೇ ತನಿಖೆ ಆರಂಭಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಸಿಎನ್ ಎನ್ ನ್ಯೂಯಾರ್ಕ್ ಸಿಟಿ ಬ್ಯೂರೋದಲ್ಲೂ ‘ಶಂಕಿತ ಡಿವೈಸ್'ಗಳು ಪತ್ತೆಯಾಗಿದ್ದು, ಕಚೇರಿಯನ್ನು ಖಾಲಿ ಮಾಡಲಾಗಿದೆ. ಒಂದು ಸ್ಫೋಟಕವು ಹಿಲರಿ ಕ್ಲಿಂಟನ್ ಮತ್ತು ಬಿಲ್ ಕ್ಲಿಂಟನ್ ರಿಗೆ ಕಳುಹಿಸಲಾಗಿತ್ತು.
Next Story





