ರನಿಲ್ ವಿಕ್ರಮೆಸಿಂಘೆ ವಜಾ: ಮಹಿಂದ ರಾಜಪಕ್ಸೆ ಶ್ರೀಲಂಕಾದ ನೂತನ ಪ್ರಧಾನಿ
ಕೊಲೊಂಬೋ, ಅ.26: ಶ್ರೀಲಂಕಾದ ಪ್ರಧಾನಿ ಸ್ಥಾನದಿಂದ ರನಿಲ್ ವಿಕ್ರಮೆಸಿಂಘೆಯವರನ್ನು ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ವಜಾಗೊಳಿಸಿದ್ದು, ನೂತನ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆಯವರನ್ನು ನೇಮಿಸಿದ್ದಾರೆ.
ಪ್ರಧಾನ ಮಂತ್ರಿಯಾಗಿ ಮಹಿಂದ ರಾಜಪಕ್ಸೆ ಅಧಿಕಾರ ಸ್ವೀಕರಿಸುತ್ತಿರುವ ವಿಡಿಯೋವನ್ನು ಮಾಧ್ಯಮವೊಂದು ಪ್ರಸಾರ ಮಾಡಿದೆ. ಆರ್ಥಿಕ ನಿಯಮಾವಳಿಗಳು ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಸಿರಿಸೇನ ಮತ್ತು ವಿಕ್ರಮೆಸಿಂಘೆ ನಡುವಿನ ಅಸಮಾಧಾನದ ನಡುವರ ಸಿರಿಸೇನ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.
Next Story