ಅಮೆರಿಕದಲ್ಲಿ ಭಾರೀ ಹಿಮಪಾತ: 1,270 ವಿಮಾನಗಳು ರದ್ದು
ಮಿಲ್ವಾಕಿ (ಅಮೆರಿಕ), ನ. 26: ಅಮೆರಿಕದ ಶಿಕಾಗೊ ರಾಜ್ಯ ಮತ್ತು ಮಧ್ಯ-ಪಶ್ಚಿಮ ಭಾಗದಲ್ಲಿ ಸೋಮವಾರ ಭಾರೀ ಹಿಮಪಾತವಾಗಿದ್ದು, ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದೆ.
ಒಂದು ಅಡಿಯಷ್ಟು ಹಿಮಪಾತವಾಗಿದೆ ಹಾಗೂ ಕೆಲವು ಭಾಗಗಳಲ್ಲಿ ಗಂಟೆಗೆ 72 ಕಿ.ಮೀ. ವೇಗದಲ್ಲಿ ಹಿಮ ಬಿರುಗಾಳಿ ಬೀಸುತ್ತಿದೆ.
ರವಿವಾರ ಬೀಸಿದ ಹಿಮಬಿರುಗಾಳಿಯ ಹಿನ್ನೆಲೆಯಲ್ಲಿ 1,270 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
Next Story