ಹಿಂದೆ ಸರಿಯದಿದ್ದರೆ ಕುರ್ದಿಶ್ ಸೈನಿಕರ ತಲೆ ಜಜ್ಜುತ್ತೇವೆ: ಎರ್ದೊಗಾನ್
ಇಸ್ತಾಂಬುಲ್ (ಟರ್ಕಿ), ಅ. 19: ಯುದ್ಧವಿರಾಮದ ನಿಯಮದಂತೆ ಗಡಿಯುದ್ದಕ್ಕೂ ಸ್ಥಾಪಿಸಲ್ಪಡುವ ಪ್ರಸ್ತಾಪಿತ ಸುರಕ್ಷಾ ವಲಯದಿಂದ ಕುರ್ದಿಶ್ ಸೈನಿಕರು ಹಿಂದೆ ಸರಿಯದಿದ್ದರೆ ಟರ್ಕಿಯು ಅವರ ‘ತಲೆಗಳನ್ನು ಜಜ್ಜಿ ಹಾಕಲಾಗುವುದು’ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಶನಿವಾರ ಎಚ್ಚರಿಸಿದ್ದಾರೆ.
ಮಂಗಳವಾರ ಸಂಜೆಯ ವೇಳೆಗೆ ಕುರ್ದಿಶ್ ಪಡೆಗಳು ಹಿಂದಕ್ಕೆ ಸರಿಯದಿದ್ದರೆ, ‘‘ನಾವು ಎಲ್ಲಿ ನಿಲ್ಲಿಸಿದ್ದೇವೆಯೋ ಅಲ್ಲಿಂದ ಆರಂಭಿಸುತ್ತೇವೆ ಹಾಗೂ ಭಯೋತ್ಪಾದಕರ ತಲೆಗಳನ್ನು ಜಜ್ಜಿ ಹಾಕುತ್ತೇವೆ’’ ಎಂದು ಟೆಲಿವಿಶನ್ನಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.
Next Story