ಮಶಿನ್ ಗನ್ ನಿಂದ ಜನರ ಮೇಲೆ ದಾಳಿ ಮಾಡಿದ ಸೈನಿಕ: 17 ಸಾವು
ಬ್ಯಾಂಕಾಕ್, ಫೆ. 8: ಥಾಯ್ಲೆಂಡ್ನ ಕೋರಟ್ ನಗರದ ಹಲವು ಸ್ಥಳಗಳಲ್ಲಿ ಸೈನಿಕನೊಬ್ಬ ಶನಿವಾರ 17 ಮಂದಿಯನ್ನು ಕೊಂದಿದ್ದಾನೆ ಹಾಗೂ ಆ ಕೊಲೆಗಳನ್ನು ನೇರಪ್ರಸಾರಗೊಳಿಸಿದ್ದಾನೆ.
‘‘ಸೈನಿಕನು ಮಶಿನ್ ಗನ್ನಿಂದ ಅಮಾಯಕರ ಮೇಲೆ ಗುಂಡು ಹಾರಿಸಿದ್ದು ಹಲವಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದಾರೆ’’ ಎಂದು ಪೊಲೀಸ್ ವಕ್ತಾರರೊಬ್ಬರು ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸೈನಿಕನ ದಾಳಿಗೆ 17 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಸಾರ್ಜಂಟ್ ಮೇಜರ್ ಜಕಪಂತ್ ತೊಮ್ಮ ಎಂಬ ಸೈನಿಕನು ಸೇನಾ ವಾಹನವೊಂದನ್ನು ಕದ್ದು ಕೋರಟ್ ನಗರದಲ್ಲಿ ಜನರ ಮೇಲೆ ಗುಂಡು ಹಾರಿಸುತ್ತಾ ಹೋದನು. ಪೂರ್ಣ ಸೈನಿಕ ದಿರಿಸಿನಲ್ಲಿರುವ ಚಿತ್ರಗಳು ಮತ್ತು ವೀಡಿಯೊಗಳನ್ನು ಅವನು ಇಂಟರ್ನೆಟ್ನಲ್ಲಿ ಹಾಕಿದ್ದಾನೆ.
ದುಷ್ಕರ್ಮಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.
Next Story