ಇರಾನ್: ಮೃತರ ಸಂಖ್ಯೆ 66ಕ್ಕೆ: 1,501 ಮಂದಿಗೆ ಕೊರೋನವೈರಸ್ ಸೋಂಕು
ಟೆಹರಾನ್ (ಇರಾನ್), ಮಾ. 3: ಇರಾನ್ನಲ್ಲಿ ಕೊರೋನವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆ 66ಕ್ಕೇರಿದೆ ಹಾಗೂ 1,500ಕ್ಕೂ ಅಧಿಕ ಮಂದಿ ರೋಗದ ಸೋಂಕಿಗೆ ಒಳಗಾಗಿದ್ದಾರೆ ಎಂದು ದೇಶದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
‘‘ಹೊಸದಾಗಿ 523 ಕೊರೋನವೈರಸ್ ಪ್ರಕರಣಗಳು ದೃಢಪಟ್ಟಿವೆ ಹಾಗೂ 12 ಸಾವುಗಳು ಸಂಭವಿಸಿವೆ. ಇದರೊಂದಿಗೆ ಸೋಂಕಿಗೆ ಒಳಗಾದವರ ಸಂಖ್ಯೆ 1,501ಕ್ಕೆ ಹಾಗೂ ಸಾವಿಗೀಡಾದವರ ಸಂಖ್ಯೆ 66ಕ್ಕೆ ಏರಿದೆ’’ ಎಂದು ಇರಾನ್ನ ಉಪ ಆರೋಗ್ಯ ಸಚಿವ ಅಲಿರೆಝ ರೈಸಿ ಸರಕಾರಿ ಟೆಲಿವಿಶನ್ನಲ್ಲಿ ಪ್ರಕಟಿಸಿದರು.
ಇರಾನ್ನಾದ್ಯಂತ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಅದು ಈ ವಾರಾಂತ್ಯದವರೆಗೂ ಮುಂದುವರಿಯುತ್ತದೆ ಎಂದು ಸರಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ.
Next Story