ಆಸ್ಟ್ರೇಲಿಯ: ವೈದ್ಯರಿಗೆ ಕೊರೋನವೈರಸ್; ಕ್ಲಿನಿಕ್ ಬಂದ್ ಮಾಡಿದ ಅಧಿಕಾರಿಗಳು
ಸಿಡ್ನಿ, ಮಾ. 7: ಇತ್ತೀಚೆಗೆ ಅಮೆರಿಕದಿಂದ ವಾಪಸಾಗಿರುವ ವೈದ್ಯರೊಬ್ಬರಲ್ಲಿ ಕೊರೋನವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಚಿಕಿತ್ಸಾಲಯವನ್ನು ಮುಚ್ಚಲಾಗಿದೆ ಹಾಗೂ ಅವರ ಸುಮಾರು 70 ರೋಗಿಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ಆಸ್ಟ್ರೇಲಿಯದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಮೆಲ್ಬರ್ನ್ನ ವೈದ್ಯ ಫೆಬ್ರವರಿ 29ರಂದು ಆಸ್ಟ್ರೇಲಿಯಕ್ಕೆ ವಾಪಸಾಗಿದ್ದರು.
ಅಮೆರಿಕದಲ್ಲಿ ಅವರು ಡೆನ್ವರ್ನಿಂದ ಸ್ಯಾನ್ಫ್ರಾನ್ಸಿಸ್ಕೊಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ನೆಗಡಿಯಿಂದಾಗಿ ಅವರು ಅಸ್ವಸ್ಥರಾಗಿದ್ದರು ಹಾಗೂ ಬಳಿಕ ಅವರು ಆಸ್ಟ್ರೇಲಿಯಕ್ಕೆ ವಾಪಸಾಗಿದ್ದರು ಎಂದು ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದ ಆರೋಗ್ಯ ಸಚಿವೆ ಜೆನ್ನಿ ಮೈಕಾಕೊಸ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
Next Story