ಕಾಬೂಲ್: ಆತ್ಮಹತ್ಯಾ ದಾಳಿಗೆ 3 ಬಲಿ
ಕಾಬೂಲ್ (ಅಫ್ಘಾನಿಸ್ತಾನ), ಎ. 29: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿರುವ ಸೇನಾ ಹೊರಠಾಣೆಯೊಂದರ ಸಮೀಪ ಬುಧವಾರ ಆತ್ಮಹತ್ಯಾ ಬಾಂಬರೊಬ್ಬ ಸ್ಫೋಟಕಗಳನ್ನು ಸಿಡಿಸಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.
ಇದು ವಾರಗಳ ಅವಧಿಯಲ್ಲಿ ಅಫ್ಘಾನಿಸ್ತಾನ ರಾಜಧಾನಿಯಲ್ಲಿ ನಡೆದ ಮೊದಲ ದಾಳಿಯಾಗಿದೆ.
‘‘ಇದು ರಮಝಾನ್ ತಿಂಗಳಲ್ಲಿ ನಾಗರಿಕರ ವಿರುದ್ಧ ಅಫ್ಘಾನಿಸ್ತಾನದ ಶತ್ರು ನಡೆಸಿದ ದಾಳಿಯಾಗಿದೆ’’ ಎಂದು ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ಬಣ್ಣಿಸಿದ್ದಾರೆ.
ದಾಳಿಗೆ ಯಾವುದೇ ಭಯೋತ್ಪಾದಕ ಗುಂಪು ಹೊಣೆ ಹೊತ್ತುಕೊಂಡಿಲ್ಲ. ಆದರೆ, ಈ ದಾಳಿಯ ಹಿಂದೆ ನಮ್ಮ ಹೋರಾಟಗಾರರು ಇದ್ದಾರೆಯೇ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ತಾಲಿಬಾನ್ನ ವಕ್ತಾರನೊಬ್ಬ ಹೇಳಿದ್ದಾನೆ.
Next Story