ಒಬ್ಬ ವ್ಯಕ್ತಿಯಲ್ಲಿ ಶಂಕಿತ ಕೊರೋನ ಲಕ್ಷಣಗಳು: ತುರ್ತು ಪರಿಸ್ಥಿತಿ ಘೋಷಿಸಿದ ಉ. ಕೊರಿಯಾ
ದೃಢಪಟ್ಟರೆ ಇದು ಪ್ರಪ್ರಥಮ ಕೋವಿಡ್ 19 ಪ್ರಕರಣ
ಹೊಸದಿಲ್ಲಿ: ವ್ಯಕ್ತಿಯೊಬ್ಬನಲ್ಲಿ ಕೊರೋನ ವೈರಸ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಕೇಸೋಂಗ್ ನಗರವನ್ನು ಸಂಪೂರ್ಣ ಲಾಕ್ ಡೌನ್ ನಲ್ಲಿಡಲಾಗಿದೆ. ಒಂದು ವೇಳೆ ಈ ವ್ಯಕ್ತಿಯಲ್ಲಿ ಕೊರೋನ ದೃಢಪಟ್ಟರೆ ಇದು ಉತ್ತರ ಕೊರಿಯಾದಲ್ಲಿ ದೃಢಪಟ್ಟ ಪ್ರಪ್ರಥಮ ಕೊರೋನ ವೈರಸ್ ಪ್ರಕರಣವಾಗಲಿದೆ.
ಒಬ್ಬ ವ್ಯಕ್ತಿಯಲ್ಲಿ ಕೊರೋನ ವೈರಸ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ದಕ್ಷಿಣ ಕೊರಿಯಾದಿಂದ ಅಕ್ರಮವಾಗಿ ಗಡಿ ನುಸುಳಿ ಉತ್ತರ ಕೊರಿಯಾಗೆ ಬಂದ ವ್ಯಕ್ತಿಯಲ್ಲಿ ಕೊರೋನ ಲಕ್ಷಣಗಳು ಕಾಣಿಸಿಕೊಂಡಿದೆ ಎನ್ನಲಾಗಿದೆ. ಈತ ಹಲವು ವರ್ಷಗಳ ಹಿಂದೆ ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾಗೆ ಓಡಿ ಹೋಗಿದ್ದ.
Next Story