ಟ್ರಂಪ್ರಿಂದ ಲೈಂಗಿಕ ದೌರ್ಜನ್ಯ: ಮಾಜಿ ರೂಪದರ್ಶಿಯ ಆರೋಪ
ವಾಶಿಂಗ್ಟನ್, ಸೆ. 17: ಅಧ್ಯಕ್ಷ ಡೊನಾಲ್ಡ್ ಟ್ರಂಪ್ 1997ರಲ್ಲಿ ನನ್ನ ಮೇಲೆ ಕೈಯಾಡಿಸಿ ಬಲವಂತವಾಗಿ ಚುಂಬಿಸಿದ್ದಾರೆ ಎಂದು ಅಮೆರಿಕದ ಮಾಜಿ ರೂಪದರ್ಶಿಯೊಬ್ಬರು ಆರೋಪಿಸಿದ್ದಾರೆ.
ಅವೆುರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ವಾರಗಳಿರುವಾಗ ಮರು ಆಯ್ಕೆ ಬಯಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ವಿರುದ್ಧ ಈ ಆರೋಪ ಮಾಡಲಾಗಿದೆ.
ನ್ಯೂಯಾರ್ಕ್ನಲ್ಲಿ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿ ನಡೆಯುತ್ತಿರುವಾಗ ಟ್ರಂಪ್ ತನ್ನ ವಿಐಪಿ ಕೋಣೆಯಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆ್ಯಮಿ ಡೊರಿಸ್ ಬ್ರಿಟನ್ನ ‘ದ ಗಾರ್ಡಿಯನ್’ ಪತ್ರಿಕೆಗೆ ಹೇಳಿದ್ದಾರೆ.
ಈ ಆರೋಪವನ್ನು ಟ್ರಂಪ್ ತನ್ನ ವಕೀಲರ ಮೂಲಕ ನಿರಾಕರಿಸಿದ್ದಾರೆ. ಅವರು ಈಗಾಗಲೇ 10ಕ್ಕೂ ಅಧಿಕ ಲೈಂಗಿಕ ದುರ್ವರ್ತನೆಯ ಆರೋಪಗಳನ್ನು ಮಹಿಳೆಯರಿಂದ ಎದುರಿಸಿದ್ದಾರೆ.
ಈ ಹಿಂದೆ, ಅಮೆರಿಕದ ಅಂಕಣಗಾರ್ತಿ ಎ. ಜೀನ್ ಕ್ಯಾರಲ್, 1990ರ ದಶಕದಲ್ಲಿ ಡಿಪಾರ್ಟ್ಮೆಂಟ್ ಸ್ಟೋರೊಂದರ ಬಟ್ಟೆ ಬದಲಿಸುವ ಕೋಣೆಯೊಂದರಲ್ಲಿ ಟ್ರಂಪ್ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬುದಾಗಿ ಆರೋಪಿಸಿದ್ದರು.