ಟ್ರಂಪ್ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದರೆ ಅಮೆರಿಕ ಜನತೆ ಸಹಿಸರು: ಬೈಡನ್
ವಾಶಿಂಗ್ಟನ್, ಅ. 1: ನವೆಂಬರ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋತರೆ ಹಾಗೂ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದರೆ, ಅದನ್ನು ಅಮೆರಿಕದ ಜನತೆ ಸಹಿಸುವುದಿಲ್ಲ ಎಂದು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಬುಧವಾರ ಹೇಳಿದ್ದಾರೆ.
ಓಹಿಯೊ ರಾಜ್ಯದ ಕ್ಲೀವ್ಲ್ಯಾಂಡ್ನಲ್ಲಿ ಮಂಗಳವಾರ ರಾತ್ರಿ ಅಧ್ಯಕ್ಷೀಯ ಅಭ್ಯರ್ಥಿಗಳಾದ ರಿಪಬ್ಲಿಕನ್ ಪಕ್ಷದ ಟ್ರಂಪ್ ಮತ್ತು ಅವರ ಎದುರಾಳಿ ಬೈಡನ್ ಮುಖಾಮುಖಿ ಚರ್ಚೆ ನಡೆಸಿದಾಗ, ಸುಲಲಿತ ಅಧಿಕಾರ ಹಸ್ತಾಂತರ ನಡೆಸುವ ಭರವಸೆ ನೀಡಲು ಟ್ರಂಪ್ ನಿರಾಕರಿಸಿದ್ದರು.
ಟ್ರಂಪ್ ಚುನಾವಣೆಯಲ್ಲಿ ಸೋತರೆ ಅವರು ಶ್ವೇತಭವನದಲ್ಲೇ ಉಳಿಯುವುದನ್ನು ನಿವಾರಿಸುವುದಕ್ಕಾಗಿ ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ಎಂದು ಬೈಡನ್ ಅಮೆರಿಕನ್ನರನ್ನು ಒತ್ತಾಯಿಸಿದರು.
Next Story