ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೊರೋನ ಸೋಂಕಿತ ಟ್ರಂಪ್
ವಾಶಿಂಗ್ಟನ್, ಅ. 6: ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೊರೋನ ವೈರಸ್ ಸೋಂಕಿಗಾಗಿ ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ, ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಶ್ವೇತಭವನಕ್ಕೆ ಮರಳಿದ ತಕ್ಷಣ ಮುಖಗವಸನ್ನು ತೆಗೆದು ಬಿಸಾಕಿದ ಅವರು, ಶೀಘ್ರವೇ ಚುನಾವಣಾ ಪ್ರಚಾರಕ್ಕೆ ಮರಳುವುದಾಗಿ ಘೋಷಿಸಿದರು.
ಅದಕ್ಕಿಂತ ಸ್ವಲ್ಪ ಮುಂಚೆ ಟ್ವೀಟ್ ಮಾಡಿದ ಅವರು, ಅಮೆರಿಕನ್ನರು ಕೊರೋನ ವೈರಸ್ಗೆ ಹೆದರುವಂಥಾದ್ದು ಏನೂ ಇಲ್ಲ ಎಂದರು. ಅವೆುರಿಕದಲ್ಲಿ ಈಗಾಗಲೇ ಸುಮಾರು 2,10,000 ಮಂದಿ ಕೊರೋನ ವೈರಸ್ಗೆ ಬಲಿಯಾಗಿದ್ದಾರೆ.
ಟ್ರಂಪ್ ಶುಕ್ರವಾರ ಕೊರೋನ ವೈರಸ್ ಸೋಂಕಿಗೆ ಒಳಗಾದ ಬಳಿಕ ಶ್ವೇತಭವನವನ್ನು ತೊರೆದಿದ್ದರು.
ನವೆಂಬರ್ 3ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಮುಂದಿದ್ದಾರೆ ಎನ್ನುವುದನ್ನು ಸಮೀಕ್ಷೆಗಳು ತಿಳಿಸಿವೆ.
Next Story