ಪಾಕ್ನಲ್ಲೂ ಟಿಕ್ಟಾಕ್ ನಿಷೇಧ
ಇಸ್ಲಾಮಾಬಾದ್, ಅ. 9: ಕಿರು ವೀಡಿಯೊಗಳ ಆ್ಯಪ್ ಟಿಕ್ಟಾಕ್ನಲ್ಲಿ ‘ಅನೈತಿಕ ಮತ್ತು ಅಶ್ಲೀಲತೆ ಇದೆ’ ಎಂದು ಆರೋಪಿಸಿರುವ ಪಾಕಿಸ್ತಾನವು, ಆ್ಯಪನ್ನು ಶುಕ್ರವಾರ ನಿಷೇಧಿಸಿದೆ.
‘‘ಟಿಕ್ಟಾಕ್ನಲ್ಲಿ ಅನೈತಿಕತೆ ಮತ್ತು ಅಶ್ಲೀಲತೆಯಿದೆ ಎಂಬುದಾಗಿ ಸಮಾಜದ ವಿವಿಧ ಭಾಗಗಳಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ, ಈ ಆ್ಯಪನ್ನು ನಿಷೇಧಿಸುವಂತೆ ಪಾಕಿಸ್ತಾನ ಟೆಲಿಕಮ್ಯುನಿಕೇಶನ್ ಪ್ರಾಧಿಕಾರವು ಸೂಚನೆ ನೀಡಿದೆ’’ ಎಂದು ಪ್ರಾಧಿಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story