ಕೊರೋನ ಮೊದಲು ವರದಿ ಮಾಡಿದ್ದು ನಾವು: ಚೀನಾ
ಬೀಜಿಂಗ್, ಅ. 10: ಕಳೆದ ವರ್ಷ ಕೊರೋನ ವೈರಸ್ ಜಗತ್ತಿನ ವಿವಿಧ ಭಾಗಗಳಲ್ಲಿ ಸ್ಫೋಟಿಸಿತ್ತು, ಆದರೆ, ತಾನು ಮಾತ್ರ ಅದನ್ನು ವರದಿ ಮಾಡಿರುವುದಾಗಿ ಹಾಗೂ ಸಾಂಕ್ರಾಮಿಕವನ್ನು ನಿಭಾಯಿಸಲು ತುರ್ತು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಚೀನಾ ಶುಕ್ರವಾರ ಹೇಳಿಕೊಂಡಿದೆ.
ಮಾರಕ ಸಾಂಕ್ರಾಮಿಕವು ವುಹಾನ್ನಲ್ಲಿ ಮೊದಲು ಸೃಷ್ಟಿಯಾಯಿತು ಹಾಗೂ ಬಳಿಕ ಜಗತ್ತಿನ ವಿವಿಧ ಭಾಗಗಳಿಗೆ ಹರಡಿತು ಎನ್ನುವುದನ್ನು ಅದು ನಿರಾಕರಿಸಿದೆ.
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಸಾಂಕ್ರಾಮಿಕದ ಉಗಮವನ್ನು ಮುಚ್ಚಿಹಾಕಿದೆ ಎಂಬ ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊರ ಆರೋಪಗಳಿಗೆ ಚೀನಾದ ವಿದೇಶ ಸಚಿವಾಲಯ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.
Next Story