ವಿಯೆಟ್ನಾಮ್: ಭೀಕರ ಪ್ರವಾಹ, ಭೂಕುಸಿತ: ಕನಿಷ್ಠ 105 ಮಂದಿ ಸಾವು, 50 ಲಕ್ಷ ನಿರ್ವಸಿತ
ಹನೋಯಿ (ವಿಯೆಟ್ನಾಮ್), ಅ. 20: ವಾರಗಳ ಕಾಲ ಸುರಿದ ಜಡಿಮಳೆಯಿಂದಾಗಿ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಮಧ್ಯ ವಿಯೆಟ್ನಾಮ್ನಲ್ಲಿ ಕನಿಷ್ಠ 105 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 50 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ.
ಮೃತಪಟ್ಟವರ ಪೈಕಿ ಸುಮಾರು ಮೂರನೇ ಒಂದು ಭಾಗ ಸೈನಿಕರು. ಕಳೆದ ವಾರ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಸೈನಿಕರು ತಂಗಿದ್ದ ಬರಾಕ್ಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕನಿಷ್ಠ 27 ಮಂದಿ ನಾಪತ್ತೆಯಾಗಿದ್ದಾರೆ. ಅವರ ಪೈಕಿ 15 ಮಂದಿ ಕಟ್ಟಡ ನಿರ್ಮಾಣ ಕಾರ್ಮಿಕರು. ಅವರೂ ಭೂಕುಸಿತದಿಂದಾಗಿ ಮಣ್ಣನಡಿಯಲ್ಲಿ ಸಮಾಧಿಯಾಗಿದ್ದಾರೆ.
ಕನಿಷ್ಠ 1,78,000 ಮನೆಗಳು ಜಲಾವೃತವಾಗಿವೆ ಮತ್ತು ಸುಮಾರು 17,297 ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗೆ ಹಾನಿಯಾಗಿದೆ.
Next Story