ಅಫ್ಘಾನ್: ತಾಲಿಬಾನಿಗಳಿಂದ ಹೊಂಚುದಾಳಿ: ಕನಿಷ್ಠ 25 ಭದ್ರತಾ ಸಿಬ್ಬಂದಿ ಸಾವು
ಕುಂಡುಝ್ (ಅಫ್ಘಾನಿಸ್ತಾನ), ಅ. 21: ಅಫ್ಘಾನಿಸ್ತಾನದ ಟಖರ್ ಪ್ರಾಂತದಲ್ಲಿ ನಡೆದ ಹೊಂಚು ದಾಳಿಯಲ್ಲಿ ಕನಿಷ್ಠ 25 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ದಾಳಿಯನ್ನು ತಾಲಿಬಾನ್ ನಡೆಸಿದೆ ಎಂದು ಅಧಿಕಾರಿಗಳು ಬುಧವಾರ ಆರೋಪಿಸಿದ್ದಾರೆ.
‘‘ಸಂಘರ್ಷ ಈಗಲೂ ನಡೆಯುತ್ತಿದೆ ಹಾಗೂ ತಾಲಿಬಾನ್ ಕಡೆಯಲ್ಲೂ ಭಾರೀ ಸಾವು ನೋವು ಸಂಭವಿಸಿದೆ’’ ಎಂದು ಟಖರ್ ಪ್ರಾಂತದ ಗವರ್ನರ್ರ ವಕ್ತಾರರು ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದರು.
‘‘ದಾಳಿ ನಡೆಯುವಾಗ ಭದ್ರತಾ ಸಿಬ್ಬಂದಿ ಜಿಲ್ಲೆಯೊಂದಕ್ಕೆ ಉಗ್ರ ನಿಗ್ರಹ ಕಾರ್ಯಾಚರಣೆಗಾಗಿ ತೆರಳುತ್ತಿದ್ದರು’’ ಎಂದು ವಕ್ತಾರರು ಹೇಳಿದರು.
‘‘ಈ ಪ್ರದೇಶದಲ್ಲಿನ ಮನೆಗಳಲ್ಲಿ ತಾಲಿಬಾನಿಗಳು ಅವಿತು ಕುಳಿತಿದ್ದರು. ನಮ್ಮ ಪಡೆಗಳು ಅಲ್ಲಿಗೆ ತೆರಳಿದಾಗ ಅವರು ಹೊಂಚುದಾಳಿ ನಡೆಸಿದರು’’ ಎಂದರು. ಈ ವಿಷಯದಲ್ಲಿ ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Next Story