ಬ್ರಿಟನ್: ಕೊರೋನ ರೋಗಿಗಳ ಜನಾಂಗ ದಾಖಲಿಸಲು ಸೂಚನೆ
ಲಂಡನ್. ಅ. 22: ಬ್ರಿಟನ್ನಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಭಾರತ ಮೂಲದ ಜನರು ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವುದನ್ನು ಗಣನೆಗೆ ತೆಗೆದುಕೊಂಡಿರುವ ಬ್ರಿಟನ್ ಸರಕಾರವು, ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ಕೊರೋನ ವೈರಸ್ನಿಂದಾಗಿ ಸಾಯುವವರ ಮರಣ ಪ್ರಮಾಣಪತ್ರದಲ್ಲಿ ಅವರ ಜನಾಂಗವನ್ನು ಉಲ್ಲೇಖಿಸುವುದು ಈ ಕ್ರಮಗಳ ಪೈಕಿ ಒಂದಾಗಿದೆ.
ಸಮಾನತೆ ಸಚಿವೆ ಕೆಮಿ ಬಡೆನೊಕ್ ಬ್ರಿಟನ್ನ ಕೆಳ ಸದನ ಹೌಸ್ ಆಫ್ ಕಾಮನ್ಸ್ನಲ್ಲಿ ಬುಧವಾರ ಈ ಸಂಬಂಧ ಹೇಳಿಕೆಯೊಂದನ್ನು ನೀಡಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ನಾರ್ತ್ ಕ್ಯಾರಲೈನ್ ರಾಜ್ಯದ ಗ್ಯಾಸ್ಟೋನಿಯದಲ್ಲಿರುವ ಮುನಿಸಿಪಲ್ ವಿಮಾನ ನಿಲ್ದಾಣದಲ್ಲಿ ತನ್ನ ಅಭಿಮಾನಗಳನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.
Next Story