ಫ್ರಾನ್ಸ್: ಕ್ರೈಸ್ತ ಧರ್ಮಗುರುವಿಗೆ ಗುಂಡಿಕ್ಕಿದ ದುಷ್ಕರ್ಮಿ
ಫ್ರಾನ್ಸ್: ಇಲ್ಲಿನ ಲಿಯೋನ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕ್ರೈಸ್ತ ಧರ್ಮಗುರು ಒಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಧರ್ಮಗುರು ಚರ್ಚ್ ಕಡೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಎರಡು ಬಾರಿ ಗುಂಡು ಹಾರಿಸಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕ್ರೈಸ್ತ ಧರ್ಮಗುರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಫ್ರಾನ್ಸ್ ನ ಮತ್ತೊಂದು ನಗರದಲ್ಲಿ ಕ್ಯಾಥಲಿಕ್ ಚರ್ಚ್ ನಲ್ಲಿ ಚೂರಿ ಇರಿತ ನಡೆದ 2 ದಿನಗಳ ನಂತರ ಈ ಘಟನೆ ಸಂಭವಿಸಿದೆ. ಚೂರಿ ಇರಿತ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು.
Next Story